ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ (ಡಿ.9) ಇಂದಿನಿಂದ ಆರಂಭವಾಗಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಕಟಕ್‌ನಲ್ಲಿ. ಈ ಕಾರ್ಯಕ್ರಮ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಾಣಿಸಿಕೊಳ್ಳುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಮುಖ್ಯ ಕಾರಣ ಭಾರತ ತಂಡದಲ್ಲಿ ಮೂವರು ಆರಂಭಿಕ ದಾಂಡಿಗರಿರುವುದು.
ಇಲ್ಲಿ ಟೀಮ್ ಇಂಡಿಯಾ ಓಪನರ್ ಗಳಾಗಿ ಶುಭಮನ್ ಗಿಲ್, ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಕಳೆದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ವೇಳೆ ಸ್ಯಾಮ್ಸನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.
ಆದರೆ ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಬದಲಿಸಲಾಗಿದೆ. ಅದರಂತೆ ಶುಭಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಈ ಇಬ್ಬರನ್ನೇ ಓಪನ್ ಆಗುವ ಸಾಧ್ಯತೆಯಿದೆ.
ಏಕೆಂದರೆ ಅಭಿಷೇಕ್ ಶರ್ಮಾ ಅವರು ಆರಂಭಿಕನಾಗಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇನ್ನು ಶುಭಮನ್ ಗಿಲ್ ಭಾರತ ತಂಡದ ಉಪನಾಯಕ. ಅವರನ್ನು ಆಡುವುದು ಇಲ್ಲವೆನ್ನುವುದರಿಂದ ಹೊರಗಿಡಲು ಸಾಧ್ಯವಿಲ್ಲ. ಹೀಗಾಗಿ ಶುಭ್ಮನ್ ಹಾಗೂ ಅಭಿಷೇಕ್ ಶರ್ಮಾ ಅವರು ಓಪನರ್ ಆಗುವುದು ಖಚಿತ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ 4 ಇನಿಂಗ್ಸ್‌ಗಳಲ್ಲಿ 2 ಭರ್ಜರಿ ಶತಕಗಳೊಂದಿಗೆ 216 ರನ್ ಕಲೆಹಾಕಿರುವ ಸಂಜು ಸ್ಯಾಮ್ಸನ್ ಅವರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಅಂದರೆ ಕೀಪರ್ ಬ್ಯಾಟರ್ ಆಗಿ ಸ್ಯಾಮ್ಸನ್ ಗೆ ಈ ಬಾರಿ ಮತ್ತೊಮ್ಮೆ ಚಾನ್ಸ್ ನೀಡಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲ್ಲವೆನ್ ಈ ಕೆಳಗಿನಂತೆ ಇರಲಿದೆ…
- ಅಭಿಷೇಕ್ ಶರ್ಮಾ
- ಶುಭಮನ್ ಗಿಲ್
- ಸೂರ್ಯಕುಮಾರ್ ಯಾದವ್ (ನಾಯಕ)
- ತಿಲಕ್ ವರ್ಮಾ
- ಶಿವಂ ದುಬೆ
- ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
- ಹಾರ್ದಿಕ್ ಪಾಂಡ್ಯ
- ಅಕ್ಷರ್ ಪಟೇಲ್
- ಅರ್ಷದೀಪ್ ಸಿಂಗ್
- ವರುಣ್ ಚಕ್ರವರ್ತಿ
- ಜಸ್ಪ್ರೀತ್ ಬುಮ್ರಾ
ಇದನ್ನೂ ಓದಿ: IND vs SA: ಭಾರತ-ಸೌತ್ ಆಫ್ರಿಕಾ ಟಿ20 ಸರಣಿಗೆ 13 ಆಟಗಾರರು ಅಲಭ್ಯ