‘ಟಾಕ್ಸಿಕ್’ ಅಪ್​​ಡೇಟ್ ಕೊಟ್ಟ ಯಶ್, ಬಾಕಿ ಇರುವುದು 100 ದಿನ

‘ಟಾಕ್ಸಿಕ್’ ಅಪ್​​ಡೇಟ್ ಕೊಟ್ಟ ಯಶ್, ಬಾಕಿ ಇರುವುದು 100 ದಿನ


ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಯಶ್ ಸಾಕಷ್ಟು ಸಮಯ ಮತ್ತು ಶ್ರಮ ಹಾಕಿ ಸಿನಿಮಾ ನಿರ್ಮಿಸುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕಾಗಿ ಭಾರಿ ದೊಡ್ಡ ತಂಡವನ್ನೇ ಜೊತೆಗೆ ಸೇರಿಸಿದ್ದಾರೆ ನಟ ಯಶ್. ಸಿನಿಮಾದ ಚಿತ್ರೀಕರಣದ ಬಗ್ಗೆ ಹೆಚ್ಚಿನ ಅಪ್‌ಡೇಟ್‌ಗಳನ್ನು ಬಿಟ್ಟುಕೊಟ್ಟಿರಲಿಲ್ಲ ಚಿತ್ರತಂಡ. ಸಿನಿಮಾದ ಬಿಡುಗಡೆ ಹತ್ತಿರ ಆಗುತ್ತಿದ್ದಂತೆ ಒಂದೊಂದಾಗಿ ಅಪ್ಡೇಟ್‌ಗಳನ್ನು ಹೊರ ಹಾಕುತ್ತಿದೆ. ಈ ಹಿಂದೆ ಸಣ್ಣ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಮತ್ತೊಂದು ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

‘ಟಾಕ್ಸಿಕ್’ ಸಿನಿಮಾದ ಹೊಸ ಪೋಸ್ಟರ್ ಅನ್ನು ನಟ ಯಶ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ವ್ಯಕ್ತಿಯೊಬ್ಬ (ಬಹುಶಃ ಯಶ್) ಬಾತ್‌ಟಬ್‌ನಲ್ಲಿ ಕೂತಿದ್ದಾನೆ, ಆ ಬಾತ್ ಟಬ್‌ನ ಅಂಚುಗಳಲ್ಲಿ ರಕ್ತ ಹರಿಯುತ್ತಿದೆ. ಆ ವ್ಯಕ್ತಿ ರಕ್ತ ತುಂಬಿದ ಬಾತ್ ಟಬ್ ನಲ್ಲಿ ಕೂತಿದ್ದಾನೆ ಎಂದು ಚಿತ್ರ ಹೇಳುತ್ತಿದೆ. ಪೋಸ್ಟರ್ ಮೂಲಕ ಯಶ್ ಪಾತ್ರ ‘ಟಾಕ್ಸಿಕ್’ ಸಿನಿಮಾದಲ್ಲಿ ಅತ್ಯಂತ ವಯಲೆಂಟ್ ಪಾತ್ರ ಆಗಿರುವುದು ಸೂಚ್ಯವಾಗಿ ಹೇಳಲಾಗುತ್ತಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ ನಲ್ಲಿ ಯಶ್ ಮುಖ ತೋರಿಸಲಾಗಲಿಲ್ಲ.

ಇದನ್ನೂ ಓದಿ:’ಟಾಕ್ಸಿಕ್’ಗಾಗಿ ಒಂದಾದ ಎರಡು ದೊಡ್ಡ ಶಕ್ತಿಗಳು; ಯಶ್ ಫ್ಯಾನ್ಸ್ ಗೆ ಹಬ್ಬದ ಫೀಕ್ಸ್

ಪೋಸ್ಟರ್ ಹಂಚಿಕೊಂಡಿರುವ ನಟ ಯಶ್, ‘ಕಾಲ್ಪನಿಕ ಕಥೆ ಬಿಡುಗಡೆ ಆಗಲು 100 ದಿನ ಬಾಕಿ ಇದೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಪೋಸ್ಟರ್‌ನಲ್ಲಿಯೂ ಸಹ ಸಿನಿಮಾ ಬಿಡುಗಡೆಗೆ ಇನ್ನು ನೂರು ದಿನ ಬಾಕಿ ಇದೆ ಎಂದು ಹೇಳಲಾಗಿದೆ. ಬಿಡುಗಡೆ ಆಗಿರುವ ಪೋಸ್ಟರ್ ಆಸಕ್ತಿಕರವಾಗಿದ್ದು, ಹಾಲಿವುಡ್ ಸಿನಿಮಾಗಳ ಫೀಲ್ ನೀಡುತ್ತಿದೆ. ಯಶ್ ಬೆನ್ನಮೇಲಿನ ಟ್ಯಾಟೂ ಸಹ ಗಮನ ಸೆಳೆಯುತ್ತಿದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಇದು ಕರ್ನಾಟಕದ ಈ ದೊಡ್ಡ ಬಜೆಟ್ನ ಸಿನಿಮಾ ಆಗಿದೆ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಅವರು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *