Bigg Boss: ಸೂರಜ್​ ಎದುರೇ ರಾಶಿಕಾ, ರಜತ್​ ಜೊತೆ ರೊಮಾನ್ಸ್​ ಮಾಡೋದಾ? ಛೇ ಧ್ರುವಂತ್​ಗೆ ಇದೇನಾಯ್ತು? | Bigg Boss Rashika Shetty And Rajath Romantic Dance Fans React Suc

Bigg Boss: ಸೂರಜ್​ ಎದುರೇ ರಾಶಿಕಾ, ರಜತ್​ ಜೊತೆ ರೊಮಾನ್ಸ್​ ಮಾಡೋದಾ? ಛೇ ಧ್ರುವಂತ್​ಗೆ ಇದೇನಾಯ್ತು? | Bigg Boss Rashika Shetty And Rajath Romantic Dance Fans React Suc


17

ಸೂರಜ್​ ರಾಶಿಕಾ ಲವ್​ಸ್ಟೋರಿ

Image Credit : Asianet News

ಸೂರಜ್​-ರಾಶಿಕಾ ಲವ್​ಸ್ಟೋರಿ

ಬಿಗ್​ಬಾಸ್​ (Bigg Boss) ನಲ್ಲಿ ಸೂರಜ್​ ಸಿಂಗ್​ ಮತ್ತು ರಾಶಿಕಾ ಶೆಟ್ಟಿ ಲವ್​ಸ್ಟೋರಿ ವೀಕ್ಷಕರಿಗೆ ತಿಳಿದದ್ದೇ. ಸೂರಜ್​ ಸಿಂಗ್​ ಬಿಗ್​ಬಾಸ್​ ಮನೆಯೊಳಕ್ಕೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಾಗ ಮೊದಲು ಗುಲಾಬಿ ಹೂವು ನೀಡಿ ಬಿಗ್​ಬಾಸ್​ ಮನೆಯ ಸುಂದರಿ ಎಂದು ಹೇಳಿದ್ದರು.

27

ಸದ್ದು ಮಾಡ್ತಿರೋ ಪ್ರೇಮ

Image Credit : Asianet News

ಸದ್ದು ಮಾಡ್ತಿರೋ ಪ್ರೇಮ

ಆಗಿನಿಂದ ಈಗಿನವರೆಗೂ ಇವರಿಬ್ಬರ ಲವ್​ಸ್ಟೋರಿ ತುಂಬಾ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಬಿಗ್​ಬಾಸ್​ನಲ್ಲಿ ಇರುವಷ್ಟು ದಿನ ಇಂಥ ಲವ್​ಸ್ಟೋರಿಗಳು ಪ್ರತಿ ಸೀಸನ್​ನಲ್ಲಿ, ಪ್ರತಿ ಭಾಷೆಗಳಲ್ಲಿ ಇದದ್ದೇ. ಬಹುತೇಕ ಎಲ್ಲವೂ ಬಿಗ್​ಬಾಸ್​ ಮನೆಯಲ್ಲಿ ಇದ್ದಷ್ಟು ದಿನ ಮಾತ್ರ. ಕೊನೆಗೆ ಎಲ್ಲರೂ ದೂರ ದೂರ.

37

ಟಿಆರ್​ಪಿ ಹೆಚ್ಚಳ

Image Credit : colors kannada facebook

ಟಿಆರ್​ಪಿ ಹೆಚ್ಚಳ

ಒಟ್ಟಿನಲ್ಲಿ ಬಿಗ್​ಬಾಸ್​ ಟಿಆರ್​ಪಿ ಹೆಚ್ಚಿಸಲು ಇಂಥವರನ್ನು ಹುಡುಕಿ ಹುಡುಕಿ ಸೆಲೆಕ್ಟ್​ ಮಾಡುವುದೇ ಬಿಗ್​ಬಾಸ್​ನ ಜಾಣ್ಮೆಯೂ ಹೌದು. ಜಗಳ, ರೊಮಾನ್ಸ್​, ಹಾಸ್ಯ… ಹೀಗೆ ವಿಭಿನ್ನ ಕ್ಯಾರೆಕ್ಟರ್​ ಇದ್ದವರು ಬಹಳ ಕಾಲದವರೆಗೆ ಬಿಗ್​ಬಾಸ್​ನಲ್ಲಿ ಉಳಿಯುತ್ತಾರೆ. ಉಳಿದವರಿಗೆ ಬೇಗನೇ ಗೇಟ್​ಪಾಸ್ ಸಿಗುತ್ತದೆ. ಇಷ್ಟೇ ಇದರ ಸೀಕ್ರೆಟ್​.

47

ರಾಶಿಕಾ- ರಜತ್​ ಡಾನ್ಸ್​

Image Credit : Instagram

ರಾಶಿಕಾ- ರಜತ್​ ಡಾನ್ಸ್​

ಅದೇನೇ ಇರಲಿ. ಬಿಗ್​ಬಾಸ್​​ ಮನೆಯಲ್ಲಿ ಆಗಾಗ್ಗೆ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಜುಂ ಜುಂ ಮಾಯಾ ಹಾಡಿಗೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಸಕತ್​ ರೊಮಾಂಟಿಕ್​ ಸ್ಟೆಪ್​ ಹಾಕಿದ್ರು. ಅದೇ ರೀತಿ ರಾಶಿಕಾ ಶೆಟ್ಟಿ ಮತ್ತು ರಜತ್​ ಕೂಡ ರೊಮಾಂಟಿಕ್ ಆಗಿ ಕಾಣಿಸಿಕೊಂಡಿದ್ದರು.

57

ಪಾಪ ಸೂರಜ್​ ಸಿಂಗ್​

Image Credit : Instagram

ಪಾಪ ಸೂರಜ್​ ಸಿಂಗ್​

ಇದೀಗ ಇವರ ಡಾನ್ಸ್​ ಕೂಡ ವೈರಲ್​ ಆಗಿದೆ. ಇದರಿಂದ ಬಿಗ್​ಬಾಸ್​​ ಫ್ಯಾನ್ಸ್​ ಸೂರಜ್​ ಸಿಂಗ್​ ಎದುರಿಗೇ ಹೀಗೆ ಬೇರೊಬ್ಬರ ಜೊತೆ ರೊಮಾನ್ಸ್​ ಮಾಡೋದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

67

ಧ್ರುವಂತ್​ಗೆ ಏನಾಯ್ತು?

Image Credit : Instagram

ಧ್ರುವಂತ್​ಗೆ ಏನಾಯ್ತು?

ಆದರೆ, ಈ ಡಾನ್ಸ್​ ಮಾಡುತ್ತಿರುವಾಗ ಗಮನ ಸೆಳೆದದ್ದು ಧ್ರುವಂತ್​ ಅವರ ರಿಯಾಕ್ಷನ್​. ಅವರು ಸಹಜವಾಗಿ ಈ ರೊಮಾಂಟಿಕ್​ ಡಾನ್ಸ್ ಅನ್ನು ಎಂಜಾಯ್​ ಮಾಡುತ್ತಿದ್ದಾರೆ. ಕ್ಯಾಮೆರಾ ಕಣ್ಣಿನಲ್ಲಿ ಅವರ ಆ್ಯಕ್ಷನ್​ ಸೆರೆಯಾಗಿದೆ. ಅದಕ್ಕೆ ಧ್ರುವಂತ್​ಗೆ ಏನಾಯ್ತು ಎಂದು ಹಲವರು ತಮಾಷೆ ಮಾಡುತ್ತಿದ್ದಾರೆ.

77

ಟಾಸ್ಕ್​ ಭರಾಟೆ

Image Credit : Instagram

ಟಾಸ್ಕ್​ ಭರಾಟೆ

ಒಟ್ಟಿನಲ್ಲಿ ಬಿಗ್​ಬಾಸ್​ ಅಂತಿಮ ದಿನಗಳ ಹತ್ತಿರ ಆಗುತ್ತಿದ್ದಂತೆಯೇ ಒಂದು ಕಡೆ ಟಾಸ್ಕ್​ಗಳ ಭರಾಟೆ ನಡುವೆಯೇ ಇಂಥ ಸನ್ನಿವೇಶಗಳನ್ನು ಕ್ರಿಯೇಟ್​ ಮಾಡಿ ಸ್ಪರ್ಧಿಗಳನ್ನು ರಿಲ್ಯಾಕ್ಸ್​ ಮಾಡಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *