Video: ನೀರು ಇಟ್ಟು, ಕಾಳು ಹಾಕಿ ಪಕ್ಷಿಗಳ ಹಸಿವು ನೀಗಿಸಿದ ಯುವಕ

Video: ನೀರು ಇಟ್ಟು, ಕಾಳು ಹಾಕಿ ಪಕ್ಷಿಗಳ ಹಸಿವು ನೀಗಿಸಿದ ಯುವಕ


ನಮ್ಮಲ್ಲಿ ಕೆಲವರಿಗೆ ಈ ಪ್ರಾಣಿ (ಪ್ರಾಣಿ), ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಹತ್ತಿರ ಕಾಣಿಸಿದರೆ ಅವುಗಳಿಗೆ ಆಹಾರ ಹಾಕುವುದು, ನೀರು ಕುಡಿಯಲು ಇಡುವುದು ಹೀಗೆ ಅವರ ಹಸಿವು ನೀಗಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಈ ವಿಡಿಯೋ ಯುವಕನ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಯುವಕನೊಬ್ಬನು (ಯುವಕ) ರಸ್ತೆ ಬದಿಯಲ್ಲಿ ನೀರು ಇಟ್ಟು ಹಾಗೂ ಪಕ್ಷಿಗಳಿಗೆ ಕಾಳು ಹಾಕಿ ಅವುಗಳ ಹಸಿವು ನೀಗಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ನೆಟ್ಟಿಗರು ಈ ಯುವಕನ ನಿಸ್ವಾರ್ಥ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಕ್ಷಯ್ ಸಾಗ್ವೆಕರ್ (ಅಕ್ಷಯ್ ಸಾಗ್ವೇಕರ್) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವಕನೊಬ್ಬ ಪಕ್ಷಿಗಳ ಹಸಿವು ನೀಗುತ್ತಿರುವುದು ಕಂಡುಬರುತ್ತದೆ. ರಸ್ತೆ ಬದಿಯಲ್ಲಿದ್ದ ನೀರಿನ ತೊಟ್ಟಿಯನ್ನು ಉಪಯೋಗಿಸಿ, ನೀರು ತುಂಬಿಸಿದ್ದಾನೆ. ಆ ಕಾಳುಗಳನ್ನು ಹಾಕುತ್ತಿದ್ದಂತೆ ಪಾರಿವಾಳಗಳು ಹಾರಿ ಬಂದು ಹೆಕ್ಕಿ ತಿನ್ನುತ್ತಿರುವುದನ್ನು ಕಾಣಬಹುದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಅಜ್ಜಿಯ ಸಣ್ಣ ವ್ಯಾಪಾರಕ್ಕೆ ನೆರವಾಗಿ ಮೊಗದಲ್ಲಿ ನಗು ಮೂಡಿಸಿದ ಯುವಕ

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ತುಂಬಾ ಒಳ್ಳೆಯ ಕೆಲಸ, ಧನ್ಯವಾದಗಳು. ಇತರರು, ಈ ದೃಶ್ಯವನ್ನು ನೋಡಲು ಖುಷಿಯಾಗುತ್ತದೆ, ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಅವರ ಹಸಿವು ನೀಗಿಸುವ ಕೆಲಸಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *