Headlines

ಇದು ವಿಶ್ವದ ಅತಿ ಉದ್ದದ ರಸ್ತೆ: 14 ದೇಶಗಳನ್ನು ಹಾದುಹೋಗುವ ಈ ರಸ್ತೆಗೆ ಒಂದೇ ಒಂದು ಯು-ಟರ್ನ್ ಇಲ್ಲ!

ಇದು ವಿಶ್ವದ ಅತಿ ಉದ್ದದ ರಸ್ತೆ: 14 ದೇಶಗಳನ್ನು ಹಾದುಹೋಗುವ ಈ ರಸ್ತೆಗೆ ಒಂದೇ ಒಂದು ಯು-ಟರ್ನ್ ಇಲ್ಲ!


ವಿಶ್ವದ ಅತಿ ಉದ್ದವಾದ ರಸ್ತೆಯನ್ನು ನೀವು ನೋಡಿರಬಹುದು, ಏಕೆಂದರೆ ಭಾರತ ಕೂಡ ವಿಶ್ವದ ಉದ್ದವಾದ ರಸ್ತೆಯನ್ನು ಹೊಂದಿದೆ. ಆದರೆ ಪ್ಯಾನ್-ಅಮೇರಿಕನ್ ಹೆದ್ದಾರಿಗೆ (ಪ್ಯಾನ್-ಅಮೇರಿಕನ್ ಹೆದ್ದಾರಿ) ಇದು ಚಿಕ್ಕದೆ. ಮತ್ತು ಈ ಪ್ಯಾನ್-ಅಮೇರಿಕನ್ ರಸ್ತೆ ವಿಭಿನ್ನ ವಿಶೇಷತೆಗಳನ್ನು ಒಳಗೊಂಡಿದೆ. ಈ ರಾತ್ರಿ 14 ದೇಶಗಳ ಮೂಲಕ ಹಾದುಹೋಗುತ್ತದೆ. 30,000 ಕಿಲೋಮೀಟರ್ (ಸುಮಾರು 19,000 ಮೈಲುಗಳು) ಉದ್ದವನ್ನು ಹೊಂದಿದೆ. 30,000 ಕಿ.ಮೀ ಉದ್ದದ ಪ್ಯಾನ್-ಅಮೆರಿಕನ್ ಹೆದ್ದಾರಿಯು ಉತ್ತರ ಅಮೆರಿಕದ ಉತ್ತರದ ತುದಿಯಲ್ಲಿರುವ ಅಲಾಸ್ಕಾದ ಪ್ರುಧೋ ಕೊಲ್ಲಿಯಿಂದ ಪ್ರಾರಂಭವಾಗಿ, ದಕ್ಷಿಣ ಅಮೆರಿಕದ ದಕ್ಷಿಣ ತುದಿಯಾದ ಅರ್ಜೆಂಟೀನಾದ ಉಶುವಾಯಾದಲ್ಲಿ ಕೊನೆಗೊಳ್ಳುತ್ತದೆ.

ಪ್ಯಾನ್-ಅಮೇರಿಕನ್ ಹೆದ್ದಾರಿಯಲ್ಲಿ ಯು-ಟರ್ನ್ ಇಲ್ಲ:

ಪ್ಯಾನ್-ಅಮೇರಿಕನ್ಟರ್ ರಸ್ತೆ ನೇರ ರಸ್ತೆ ಆಗಿದ್ದು, ಆರಂಭದಿಂದ ಕೊನೆಯವರೆಗೆ ಒಂದೇ ಒಂದು ಯು-ಎನ್ ಅಥವಾ ಯಾವುದೇ ತಿರುವುಗಳನ್ನು ಹೊಂದಿರುವುದಿಲ್ಲ. ರಸ್ತೆಯು ಸರಿಸುಮಾರು 30,600 ಕಿಲೋಮೀಟರ್ (19,000 ಮೈಲುಗಳು) ಉದ್ದವಾಗಿದೆ, ಇದು ವಿಶ್ವ ಅತಿ ಉದ್ದವಾದ ಹೆದ್ದಾರಿ ಎಂದು ಹೇಳಲಾಗಿದೆ. ಪ್ಯಾನ್-ಅಮೆರಿಕನ್ ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣಿಸಲು ಸರಿಸುಮಾರು 60 ದಿನ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಈ ರಸ್ತೆ ಯಾವೆಲ್ಲ ದೇಶಗಳನ್ನು ಸಂಪರ್ಕಿಸುತ್ತದೆ?

ಪ್ಯಾನ್-ಅಮೆರಿಕನ್ ಹೆದ್ದಾರಿಯು ಅಮೆರಿಕದ 14 ದೇಶಗಳ ಮೂಲಕ ಹಾದುಹೋಗುತ್ತದೆ. ಕೆನಡಾ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಹೊಂಡುರಾಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ, ಕೊಲಂಬಿಯಾ, ಇಕ್ವೆಡಾರ್, ಪೆರು, ಚಿಲಿ ಮತ್ತು ಅರ್ಜೆಂಟೀನಾ. ಪ್ಯಾನ್-ಅಮೆರಿಕನ್ ಹೆದ್ದಾರಿಯ ನಿರ್ವಹಣೆಯ ಜವಾಬ್ದಾರಿಯನ್ನು ಎಲ್ಲಾ 14 ರಾಷ್ಟ್ರಗಳು ಹಂಚಿಕೊಳ್ಳುತ್ತವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 2.2 ಕೋಟಿ ರೂ. ಮೌಲ್ಯದ ಮನೆ ಖರೀದಿಸಬೇಕು: ಆದರೆ ಧೈರ್ಯ ಸಾಕಾಗುತ್ತಿಲ್ಲ, ಏನ್ಮಾಡ್ಲಿ?

ಇದರ ನಿರ್ಮಾಣ ಯಾವಾಗ?

ಅಮೆರಿಕದ ವಿವಿಧ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ 1920 ರ ದಶಕದಲ್ಲಿ ಪ್ಯಾನ್-ಅಮೆರಿಕನ್ ಹೆದ್ದಾರಿಯನ್ನು ನಿರ್ಮಿಸಲಾಯಿತು. ಹೆದ್ದಾರಿಯ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 1937 ರಲ್ಲಿ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಸೇರಿದಂತೆ 14 ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದವು. ರಸ್ತೆಯನ್ನು 1960 ರಲ್ಲಿ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯಲಾಯಿತು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *