ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಇನ್ನು 100 ದಿನಗಳಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಕನ್ನಡದಲ್ಲಿದೆ, ಇಂಗ್ಲಿಷ್ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಇನ್ನು ತೆಲುಗು, ತಮಿಳು, ಹಿಂದಿ ಮೊದಲಾದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರುತ್ತಿದೆ. ಈಗ ‘ಟಾಕ್ಸಿಕ್’ ಸಿನಿಮಾ ಜೊತೆ ತೆರೆಗೆ ಬರಲು ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಸಿನಿಮಾಗಳು ಸಿದ್ಧವಾಗಿವೆ.
ಮಾರ್ಚ್ 19 ಈದ್ ಹಬ್ಬ. ಅದೇ ದಿನ ಹಿಂದೂಗಳ ಹೊಸ ವರ್ಷ ಯುಗಾದಿ ಕೂಡ ಬಂದಿದೆ. ಈ ದಿನ ಗುರುವಾರ ಬಂದಿದ್ದು, ಸರ್ಕಾರಿ ರಜೆಯ ಲಾಭ ಪಡೆಯಲು ಸಿನಿಮಾ ತಂಡಗಳು ಮುಂದಾಗಿವೆ. ಶುಕ್ರವಾರ ಸಿನಿಮಾ ರಂಗದ ಪಾಲಿಗೆ ವಿಶೇಷ ಆಗಿರುವ ಸಾಂಪ್ರದಾಯಿಕ ವೀಕ್ಷಕರು ಹಾಗೂ ಸಿನಿ ಪ್ರಿಯರು ಚಿತ್ರಮಂದಿರಕ್ಕೆ ತೆರಳುತ್ತಾರೆ. ಶನಿವಾರ ಹಾಗೂ ಭಾನುವಾರ ಸಹಜವಾಗಿಯೇ ಅದ್ದೂರಿ ಕಲೆಕ್ಷನ್ ಆಗುತ್ತದೆ. ಈ ಎಲ್ಲಾ ಕಾರಣಕ್ಕೆ ‘ಟಾಕ್ಸಿಕ್’ ತಂಡ ಮಾರ್ಚ್ 19 ಅನ್ನು ಆಯ್ಕೆ ಮಾಡಿಕೊಂಡಿದೆ. ಇದೇ ಲೆಕ್ಕಾಚಾರದಲ್ಲಿ ಇನ್ನೂ ಹಲವು ಸಿನಿಮಾಗಳಿವೆ.
‘ಧಮಾಲ್ 4’
ಸದ್ಯದ ಮಾಹಿತಿ ಪ್ರಕಾರ ಅಜಯ್ ದೇವಗನ್ ಮೊದಲಾದವರು ನಟಿಸಿರೋ ‘ಧಮಾಲ್ 4’ ಸಿನಿಮಾ 2026ರ ಮಾರ್ಚ್ 20ಕ್ಕೆ ರಿಲೀಸ್ ಆಗಲಿದೆಯಂತೆ. ಹಿಂದಿ ಬೆಲ್ಟ್ ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ‘ಧಮಾಲ್’ ಕೂಡ ಒಂದು. ರಿತೇಶ್ ದೇಶ್ಮುಖ್, ಅರ್ಷದ್ ವಾರ್ಸಿ ಮೊದಲಾದವರು ನಟಿಸಿದ್ದಾರೆ.
ಧುರಂಧರ 2
ರಣವೀರ್ ಸಿಂಗ್ ನಟನೆಯ ‘ಧುರಂಧರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಸೀಕ್ವೆಲ್ ಮಾರ್ಚ್ 19 ರಂದು ತೆರೆಗೆ ಬರಲಿದೆ. ಈ ಸಿನಿಮಾ ಕೂಡ ಹಿಂದಿ ಬೆಲ್ಟ್ ನಲ್ಲಿ ಯಶ್ ಸಿನಿಮಾಗೆ ಸ್ಪರ್ಧೆ ನೀಡಲಿದೆ.
ತೆಲುಗಿನಲ್ಲಿ
ತೆಲುಗಿನಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಮೂರು ಸಿನಿಮಾಗಳು ತೆರೆಗೆ ಬರಲು ರೆಡಿ ಆಗಿವೆ. ಈ ಮೇಲ್ಗಡೆ ಅಡವಿ ಶೇಷ್ ಅವರ ‘ಡಕಾಯತ್’ (ಮಾರ್ಚ್ 19), ನಾನಿ ಅವರ ‘ದಿ ಪ್ಯಾರಡೈಸ್’ (ಮಾರ್ಚ್ 27) ಹಾಗೂ ರಾಮ್ ಚರಣ್ ಅವರ ‘ಪೆದ್ದಿ’ (ಮಾರ್ಚ್ 27) ಟಾಕ್ಸಿಕ್ ಜೊತೆ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ರಂದು ಪ್ರಕಟಿಸಲಾಗಿದೆ – 2:59 pm, ಮಂಗಳವಾರ, 9 ಡಿಸೆಂಬರ್ 25