UPI: ಯುಪಿಐ ವಿಶ್ವದ ಅತಿದೊಡ್ಡ ರೀಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಂ: ಐಎಂಎಫ್

UPI: ಯುಪಿಐ ವಿಶ್ವದ ಅತಿದೊಡ್ಡ ರೀಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಂ: ಐಎಂಎಫ್


ನವೆಂಬರ್, ಡಿಸೆಂಬರ್ 9: ಪೇಮೆಂಟ್ ಸಿಸ್ಟಂ ಆದ ಯುಪಿಐ (UPI) ಭಾರತದಲ್ಲಿ ಬಹಳ ಅಗಾಧವಾಗಿ ಬೆಳೆಯುತ್ತಿದೆ. ವಿಶ್ವದ ಅನೇಕ ದೇಶಗಳ ಗಮನವನ್ನು ಇದು ಸೆಳೆದಿದೆ. ಭಾರತದಲ್ಲಿ ಈಗಾಗಲೇ ರೀಟೇಲ್ ಪೇಮೆಂಟ್‌ಗಳು ಯುಪಿಐನಿಂದಲೇ ಆಗುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಏಜೆನ್ಸಿಗಳು ಯುಪಿಐ ಉಪಯುಕ್ತತೆಯನ್ನು ಗುರುತಿಸಿವೆ. ಐಎಂಎಫ್‌ನ ಇತ್ತೀಚಿನ ವರದಿಯ ಪ್ರಕಾರ ವಹಿವಾಟು ಸಂಖ್ಯೆಯಲ್ಲಿ ಯುಪಿಐ ವಿಶ್ವದ ಅತಿದೊಡ್ಡ ರೀಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಂ ಎನಿಸಿದೆ.

ಜಾಗತಿಕವಾಗಿ ರಿಯಲ್ ಟೈಮ್ ಪೇಮೆಂಟ್ ಸಿಸ್ಟಂಗಳ ಮೇಲಿನ ಯುಪಿಐ ಬಳಕೆ ಶೇ. 49ರಷ್ಟಿದೆ. ಅರ್ಥಾತ್, ಅರ್ಧದಷ್ಟು ಜಾಗತಿಕ ರಿಯಲ್ ಟೈಮ್ ಪೇಮೆಂಟ್‌ಗಳು ಯುಪಿಐ ಮೂಲಕ ಆಗುತ್ತಿರುವುದು ಗಮನಾರ್ಹ.

ಅತಿಹೆಚ್ಚು ರೀಟೇಲ್ ಪೇಮೆಂಟ್ ವಹಿವಾಟು ಹೊಂದಿರುವ ದೇಶಗಳು

ಜಾಗತಿಕವಾಗಿ ಒಟ್ಟು ವಹಿವಾಟು ಸಂಖ್ಯೆ: 26,620 ಕೋಟಿ

  • ಭಾರತ: 12,930 ಕೋಟಿ
  • ಬ್ರೆಜಿಲ್: 3,740 ಕೋಟಿ
  • ಥಾಯ್ಲೆಂಡ್: 2,040 ಕೋಟಿ
  • ಚೀನಾ: 1,720 ಕೋಟಿ
  • ಸೌತ್ ಕೊರಿಯಾ: 910 ಕೋಟಿ
  • ಇತರೆ: 5,280 ಕೋಟಿ

ಇದನ್ನೂ ಓದಿ: ನವೆಂಬರ್‌ನಲ್ಲಿ ವಾಹನಗಳ ಮಾರಾಟ; ಡಿಸೆಂಬರ್ ನಲ್ಲೂ ಇದೇ ಟ್ರೆಂಡ್

ಬ್ರೆಜಿಲ್‌ನಲ್ಲಿ ಪಿಕ್ಸ್ ಎಂಬ ರಿಯಲ್ ಟೈಮ್ ಪೆಮೆಂಟ್ ಸಿಸ್ಟಂ ಇದೆ. ಇದು ಬ್ರೆಜಿಲ್‌ನಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ರೀಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಂ ಎನಿಸಿದೆ. ಥಾಯ್ಲೆಂಡ್ ದೇಶದ ಪ್ರಾಂಪ್ಟ್ಪೆ, ಹೀಗೆ ವಿವಿಧ ದೇಶಗಳಲ್ಲಿ ರಿಯಲ್ ಟೈಮ್ ನಲ್ಲಿ ಖರೀದಿಸಬಹುದಾದ ಪೇಮೆಂಟ್ ಸಿಸ್ಟಂಗಳಿವೆ. ಆದರೆ, ಯುಪಿಐ ರೀತಿ ಇಂಟರಾಪರಾಬಿಲಿಟಿ ಮತ್ತು ವ್ಯಾಪ್ತಿ ವಿಶ್ವದಲ್ಲಿ ಬೇರಾವ ಪೇಮೆಂಟ್ ಸಿಸ್ಟಂಗೂ ಇದು ಗಮನಾರ್ಹವಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *