ಬೀದರ್, (ಡಿಸೆಂಬರ್ 09): ತನ್ನದೇ ಶಾಲಾ ಬಸ್ಗೆ 8 ವರ್ಷದ ಬಾಲಕಿ (ಶಾಲಾ ಬಾಲಕಿ) ಬಲಿಯಾದ ಘಟನೆ ಬೀದರ್ (ಬೀದರ್) ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ. ರುತ್ವಿ ಮೃತ ಬಾಲಕಿ. ಜನವಾಡದಲ್ಲಿರುವ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ರುತ್ವಿ, ಇಂದು (ಡಿಸೆಂಬರ್ 09) ಶಾಲೆ ಮುಗಿಸಿಕೊಂಡು ಇನ್ನೇನು ಬಸ್ ಇಳಿದು ಮನಗೆ ಹೋಗಬೇಕೆನ್ನುವಷ್ಟರಲ್ಲಿ ವಿಧಿ ಬಲಿಪಡೆದಿದೆ. ಹೌದು… ಗಡಿಕುಶನೂರು ಗ್ರಾಮದ ರುತ್ವಿ ಬಸ್ ಇಳಿದು ನಿಂತಿದ್ದನ್ನು ಗಮನಿಸದ ಡ್ರೈವರ್ ಮುಂದಕ್ಕೆ ಚಾಲನೆ ಮಾಡಿದ್ದಾನೆ. ಈ ವೇಳೆ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ರುತ್ವಿ ಸಾವನ್ನಪ್ಪಿದ್ದಾಳೆ.
ಬಸ್ ಚಾಲಕ, ಗುರುನಾನಕ್ ಶಾಲೆಯಿಂದ ಮನೆಯವರೆಗೂ ಡ್ರಾಪ್ ಮಾಡಿದ್ದಾನೆ. ಬಾಲಕಿ ಸ್ಕೂಲ್ ಬಸ್ ಇಳಿದು ಪಕ್ಕದಲ್ಲೇ ನಿಂತಿದೆ. ಇದನ್ನು ಗಮನಿಸಿದ ಚಾಲಕ ಹಾಗೇ ಬಸ್ ಅನ್ನು ಮುಂದಕ್ಕೆ ಓಡಿಸಿದ್ದು, ಅಲ್ಲೇ ನಿಂತಿದ್ದ ರುತ್ವಿ ಮೇಲೆ ಹಿಂಬದಿ ಚಕ್ರ ಹರಿದಿದೆ. ಪರಿಣಾಮ ತೀವ್ರಗೊಂಡ ರುತ್ವಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಕೊನೆಯುಸಿರೆಳೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಮದುವೆಗೂ ಮುನ್ನ ಮಸಣ ಸೇರಿದ ಜೋಡಿ: ಅಪಘಾತಕ್ಕೂ ಮೊದಲು ನಡೆದಿತ್ತು ಫೋಟೋ ಶೂಟ್
ಶಾಲೆಗೆ ಕಳುಹಿಸುವಾಗ ಹಾಗೂ ಮನೆಗೆ ಕರೆತರುವಾಗ ಎಚ್ಚರ ವಹಿಸಬೇಕು. ಇನ್ನು ಸ್ಕೂಲ್ ಬಸ್ ಚಾಲಕರು ಸಹ ಸ್ಪೀಡ್ ಚಲಾಯಿಸಬಾರದು. ಹಾಗೆಯೇ ಮಕ್ಕಳು ಇಳಿಯುವಾಗ ಎಚ್ಚರ ವಹಿಸಬೇಕು. ಕೊಂಚ ಯಾಮಾರಿದರೂ ಸಹ ಈ ರೀತಿ ಘಟನೆ ಸಂಭವಿಸುತ್ತದೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸರಣಿ ಅಪಘಾತ
ಚಿಕ್ಕಬಳ್ಳಾಪುರ: ಭಾಗ್ಯನಗರ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಲಾರಿ, ಬಸ್, ಆಟೋ ನಡುವೆ ಸಂಭವಿಸಿದ ಸರಣಿ ಅಪಘಾತ ಸಂಭವಿಸಿದೆ, ಚಿಲುವೆಂದುಲ ಗ್ರಾಮದ 68 ವರ್ಷದ ವೃದ್ಧೆಯಾಗಿದ್ದಾರೆ. 10 ಜನರನ್ನು ತುಂಬಿಕೊಂಡು ಸುಂಕುಲಮ್ಮ ದೇಗುಲದಿಂದ ಬಂದ ಆಟೋ ತಿರುವು ಪಡೆದುಕೊಳ್ಳುವ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಗುದ್ದಿದ ರಭಸಕ್ಕೆ ಪಲ್ಟಿಯಾದ ಆಟೋ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, 10 ಜನರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.