‘ಕಾಂತಾರದಿಂದ ದೈವಗಳು ಬೀದಿಗೆ ಬಂದಿವೆ’: ದೈವಾರಾಧಕ ತಮ್ಮನ್ನ ಶೆಟ್ಟಿ ಅಸಮಾಧಾನ

‘ಕಾಂತಾರದಿಂದ ದೈವಗಳು ಬೀದಿಗೆ ಬಂದಿವೆ’: ದೈವಾರಾಧಕ ತಮ್ಮನ್ನ ಶೆಟ್ಟಿ ಅಸಮಾಧಾನ


ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಅಧ್ಯಾಯ 1’ (ಕಾಂತಾರ ಅಧ್ಯಾಯ 1) ಸಿನಿಮಾದಿಂದ ಸಖತ್ ಜನಪ್ರಿಯವಾಗಿದೆ. ಈ ಸಿನಿಮಾದಲ್ಲಿ ತುಳುನಾಡಿನ ದೈವಗಳ ಬಗ್ಗೆ ತೋರಿಸಲಾಗಿದೆ. ಸಿನಿಮಾ ಯಶಸ್ವಿ ಆದ ಬಳಿಕ ರಿಷಬ್ ಶೆಟ್ಟಿ (ರಿಷಬ್ ಶೆಟ್ಟಿ)ನಿರ್ಮಾಪಕ ವಿಜಯ್ ಕಿರಗಂದೂರು ಮುಂತಾದವರು ಹರಕೆ ತೀರಿಸಿದ್ದಾರೆ. ಆ ಸಂದರ್ಭದಲ್ಲಿ ದೈವ ನರ್ತಕ ನಡೆದುಕೊಂಡ ರೀತಿಯ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿದೆ. ಈ ಕುರಿತು ದೈವಾರಾಧಕ ತಮ್ಮಣ್ಣ ಶೆಟ್ಟಿ (ತಮ್ಮಣ್ಣ ಶೆಟ್ಟಿ) ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

‘ಕಾಂತಾರದಿಂದ ಈಗ ದೈವಗಳು ಬೀದಿಗೆ ಬಂದಿವೆ. ಕಾಂತಾರದ ಹೆಸರಿನಲ್ಲಿ ಆಗಿರುವ ಹರಕೆಯಿಂದ ಸಂಪೂರ್ಣ ದೈವಾರಾಧನೆ ಮುಗಿಯಿತು ಅಂತ ತಿಳಿದುಕೊಳ್ಳುವ ಮಟ್ಟಕ್ಕೆ ಬಂದಿದೆ. ಏಕೆಂದರೆ, ಅಲ್ಲಿ ಮೊನ್ನೆ ನಡೆದ ಹರಕೆಯ ಕೋಲ ನಿಯಮ ಪ್ರಕಾರ ಆಗಿಲ್ಲ. ಹರಕೆಗೂ ಒಂದು ವ್ಯವಸ್ಥೆಗಳನ್ನು ಅಂದಿನ ಕಾಲದಲ್ಲೇ ಮಾಡಿದೆ. ಹರಕೆಯ ನೇಮ ಎಂಬುದು ಇಲ್ಲ’ ಎಂದು ತಮ್ಮನ್ನ ಶೆಟ್ಟಿ ಹೇಳಿದ್ದಾರೆ.

‘ಧರ್ಮ ನೇಮ ಇದೆ, ಸಂಕ್ರಮಣ ಕೊಡುವಂತಹ ನಿಯಮವಿದೆ. ನವರಾತ್ರಿ ಪೂಜೆ ಅಂತಿದೆ. ಅದೆಲ್ಲವೂ ಹರಕೆಯ ಭಾಗಗಳು. ಆದರೆ ಹರಕೆಯ ನೇಮ ಎಂಬುದು ಇಲ್ಲ. ಧರ್ಮ ನೇಮ ಅಂತ ಒಬ್ಬ ಗುತ್ತಿನವನು ಆಯ್ಕೆ ಆಗಬೇಕಿದ್ದರೆ ಅವನು ಧರ್ಮ ಕೊಟ್ಟು ಮಾಡುವಂತಹ ನಿಯಮ ಇದೆ. ಒಂದು ವೇಳೆ ಅವರು ಮೊನ್ನೆ ಧರ್ಮ ನೇಮವೇ ಮಾಡಿದರೆ ಆ ಸಮಯ ಕೂಡ ಧರ್ಮ ನೇಮದ್ದಲ್ಲ. ಅವರು ಮಾಡಿದ್ದು ದೈವಾರಾಧನೆ ನಿಯಮಕ್ಕೆ ವಿರುದ್ಧ’ ತಮ್ಮನ್ನ ಶೆಟ್ಟಿ.

‘ಮಂಗಳೂರು ಪರಿಸರದ ಈ ಭಾಗದಲ್ಲಿ ಎಲ್ಲಿಯಾದರೂ ಉದ್ದೇಶಿತವಾದಂತಹ ಹರಕೆ ಸಂಬಂಧಿತ ದೈವಿಕ ಕಾರ್ಯಗಳು ಆಗಿದ್ದರೆ ಕದ್ರಿ ಮಂಜು ದೇವರ ಕೊಡಿ ಏರಿ, ಸಂಬಂಧಿತ ಗ್ರಾಮ ದೈವಗಳೆಲ್ಲವೂ ಹಾಲು ಸ್ವೀಕರಿಸಿ, ಆ ದೈವದಲ್ಲಿ ನೀವು ಒಪ್ಪಿಗೆ ಪಡೆದ ನಂತರ ನೀವು ನಿಮ್ಮ ಮನೆಯಲ್ಲಿ ಅಥವಾ ಬೇರೆ ಕಡೆಗಳಲ್ಲಿ ಮಾಡುವುದು ನಿಯಮ. ಇಲ್ಲಿ ರಿಷಬ್ ಶೆಟ್ಟಿ ಅವರಿಗೆ ಡೇಟ್ ಇದೆ ಎಂಬ ಕಾರಣಕ್ಕೆ ಮಂಜುನಾಥನ ಬದಿಗೆ ಇಟ್ಟು ನೇಮ ಮಾಡಿದವರು ಇವರು’ ಎಂದು ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ; ರಿಷಬ್ಗೆ ಅಭಯ ನೀಡಿದ ದೈವ

‘ಅವರು ಮಾಡಿದ ನೇಮದಲ್ಲಿ ದೈವನರ್ತಕ ಹಾಕಿದ ಬಟ್ಟೆ ಮತ್ತು ಹಾವಭಾವ ಎಲ್ಲವೂ ದೈವಾರಾಧನೆಗೆ ವಿರುದ್ಧ. ದೈವಾರಾಧನೆಯಲ್ಲಿ ಬಿಳಿಯ ಬಟ್ಟೆ ಮಾತ್ರ ಹಾಕುವಂಥದ್ದು. ಡ್ಯಾನ್ಸರ್‌ಗಳು ಹಾಕುವಂತಹ ಬಟ್ಟೆಗಳನ್ನು ಹಾಕಬಾರದು’ ಎಂದು ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ. ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರು ದೈವದ ಕಾರಣಕ್ಕಾಗಿ ಮತ್ತೆ ವಿವಾದ ಮಾಡಿಕೊಂಡಿದ್ದಾರೆ. ಇದಕ್ಕೆ ಅವರು ಯಾವ ರೀತಿ ಉತ್ತರ ನೀಡಬೇಕು ಎಂದರೆ ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *