ಚಿಕ್ಕಬಳ್ಳಾಪುರ, ಡಿಸೆಂಬರ್ 09: ಲಾರಿ, ಬಸ್, ಆಟೋ ನಡುವೆ ಸಂಭವಿಸಿದೆ ಸರಣಿ ಅಪಘಾತದಲ್ಲಿ ಪ್ರಸ್ತುತವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ. ಚಿಲುವೆಂದುಲ ಗ್ರಾಮದ 68 ವರ್ಷದ ವೃದ್ಧ ಮೃತ ದುರ್ದೈವಿ. ಸುಂಕುಲಮ್ಮ ದೇಗುಲದಿಂದ ಬರುತ್ತಿದ್ದ ಆಟೋ ತಿರುವು ಪಡೆದುಕೊಳ್ಳುವ ವೇಳೆ ಲಾರಿ ಡಿಕ್ಕಿಯಾಗಿದೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಪಲ್ಟಿಯಾದ ಆಟೋ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ವೃದ್ಧ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 10 ಜನರಿಗೆ ಘಟನೆಯಲ್ಲಿ ಗಾಯಗಳಾಗಿದ್ದರೆ, ಅವರಿಗೆ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.