ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್​ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ

ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್​ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ


ನವೆಂಬರ್, ಡಿಸೆಂಬರ್ 9: ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಮೂಲಸೌಕರ್ಯ, ಕೌಶಲ್ಯ ಮತ್ತು ಸ್ವಾವಲಂಬನೆಯನ್ನು ನಿರ್ಮಿಸಲು ಮೈಕ್ರೋಸಾಫ್ಟ್ 17.5 ಬಿಲಿಯನ್ ಡಾಲರ್ (1.5 ಲಕ್ಷ ಕೋಟಿ ರೂ) ಹೂಡಿಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಿಐಒ ಸತ್ಯ ನಾದೆಲ್ಲಾ (ಸತ್ಯ ನಾಡೆಲ್ಲಾ) ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (ನರೇಂದ್ರ ಮೋದಿ) ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಸತ್ಯ ನಾದೆಲ್ಲಾ ಈ ಹೂಡಿಕೆಯನ್ನು ಪ್ರಕಟಿಸಿದ್ದಾರೆ.

ಭಾರತದಲ್ಲಿ ಕ್ಲೌಡ್ ಮತ್ತು ಕಂಪ್ಯೂಟಿಂಗ್ ಇನ್ಫ್ರಾಸ್ಟ್ರಕ್ಚರ್ ಹೆಚ್ಚಿಸುವುದು, ಎಐ ಕೌಶಲ್ಯ ಯೋಜನೆಗಳನ್ನು ವಿಸ್ತರಿಸುವುದು, ಎಲ್ಲಾ ಸೆಕ್ಟರ್‌ಗಳಲ್ಲಿ ಸ್ಥಳೀಯ ಡಾಟಾ ಸಿಸ್ಟಂಗಳನ್ನು ಸ್ಥಾಪಿಸುವುದು, ಇವು ಪ್ರಮುಖ ಮೈಕ್ರೋಸಾಫ್ಟ್ ಕಂಪನಿಯ ಗುರಿಯಾಗಿದೆ.

ಇದನ್ನೂ ಓದಿ: ಐ ಬಳಸಿ ಅದ್ಭುತ ಕಾಂಟೆಂಟ್ ಕೊಡಬಲ್ಲಿರಾ? ಇಗೋ ಇಲ್ಲಿದೆ TV9 ನೆಟ್ವರ್ಕ್ AI² ಅವಾರ್ಡ್ಸ್ 2026

‘ಭಾರತದ ಮಹತ್ವಾಕಾಂಕ್ಷೆಗೆ ಪೂರಕವಾಗಿ ಮೈಕ್ರೋಸಾಫ್ಟ್ ಸಂಸ್ಥೆ 17.5 ಬಿಲಿಯನ್ ಡಾಲರ್ ಹೂಡಿಕೆಗೆ ಬದ್ಧವಾಗಿದೆ. ಭಾರತದ ಐಐ ಆದ್ಯತೆಯ ಭವಿಷ್ಯಕ್ಕೆ ಬೇಕಾದ ಮೂಲಸೌಕರ್ಯ, ಕೌಶಲ್ಯ ಮತ್ತು ಸ್ವಾವಲಂಬನೆ ಸಾಮರ್ಥ್ಯ ನಿರ್ಮಿಸಲು ನೆರವಾಗುತ್ತದೆ ಇದು ಏಷ್ಯಾದಲ್ಲಿ ನಮ್ಮ ಹೂಡಿಕೆಯಾಗಿದೆ’ ಎಂದು ಮೈಕ್ರೋಸಾಫ್ಟ್ ಸಿಐಒ ಸತ್ಯ ನಾದೆಲ್ಲ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ಮೈಕ್ರೋಸಾಫ್ಟ್ ಮುಂದಿನ ಎರಡು ವರ್ಷಗಳಿಗೆ ಭಾರತದಲ್ಲಿ ಕ್ಲೌಡ್ ಮತ್ತು ಎಐ ಸೌಕರ್ಯ ನಿರ್ಮಿಸಲು 3 ಬಿಲಿಯನ್ ಡಾಲರ್ ಹೂಡಿಕೆ ಪ್ರಕಟಿಸಿತ್ತು. ಮುಂದಿನ ಐದು ವರ್ಷದ ಒಂದು ಕೋಟಿಗೂ ಅಧಿಕ ಜನರಿಗೆ ಎಐ ಕೌಶಲ್ಯ ತರಬೇತಿ ನೀಡಿ ಅವರಿಗೆ ಸ್ಪರ್ಧಾತ್ಮಕಗೊಳಿಸಲು ಈ ವ್ಯವಸ್ಥೆ ಸಹಾಯ ಸಾಧನ ಎಂದು ಮೈಕ್ರೋಸಾಫ್ಟ್ ಹೇಳಿತ್ತು.

ಇದನ್ನೂ ಓದಿ: ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?

ಮೈಕ್ರೋಸಾಫ್ಟ್, ಇತರ ಕೆಲವು ಜಾಗತಿಕ ಟೆಕ್ ಕಂಪನಿಗಳು ಕೂಡ ಭಾರತದ ಆಶಾದಾಯಕ ಗಮನ ಹರಿಸುತ್ತಿವೆ. ಅಮೇಜಾನ್ ಸಂಸ್ಥೆ 12.7 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸುತ್ತಿದೆ. ಇದೂ ಕೂಡ ಕ್ಲೌಡ್ ಮತ್ತು ಎಐ ಇನ್ ಫ್ರಾಸ್ಟ್ರಕ್ಚರ್ ನಿರ್ಮಿಸುವ ಉದ್ದೇಶ ಹೊಂದಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ತರಬೇತಿ ನೀಡುವುದು, ಸಣ್ಣ ಉದ್ದಿಮೆಗಳಿಗೆ ಅನುಕೂಲ ಮಾಡುವುದು ಅಮೇಜಾನ್‌ನ ಗುರಿ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *