20 ವರ್ಷದ ಹಿಂದೆಯೇ ದೈವಾರಾಧನೆ ವ್ಯಾಪಾರ ಆಗಿದೆ: ದೈವಾರಾಧಕ ತಮ್ಮಣ್ಣ ಶೆಟ್ಟಿ ಗರಂ

20 ವರ್ಷದ ಹಿಂದೆಯೇ ದೈವಾರಾಧನೆ ವ್ಯಾಪಾರ ಆಗಿದೆ: ದೈವಾರಾಧಕ ತಮ್ಮಣ್ಣ ಶೆಟ್ಟಿ ಗರಂ


‘ಕಾಂತಾರ’ ಸಿನಿಮಾ (ಕಾಂತಾರ) ಮೂಲಕ ರಿಷಬ್ ಶೆಟ್ಟಿ ಅವರು ದೈವಾರಾಧನೆ ಬಗ್ಗೆ ಜನರಿಗೆ ತೋರಿಸಿದರು. ಇತ್ತೀಚೆಗೆ ಅವರು ಹರಕೆ ಕೋಲದಲ್ಲಿ ಕಾಣಿಸಿಕೊಂಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್ ಆದ ಬಳಿಕ ಪರ-ವಿರೋಧದ ಚರ್ಚೆ ಆರಂಭವಾಗಿದೆ. ದೈವಾರಾಧಕ ತಮ್ಮಣ್ಣ ಶೆಟ್ಟಿ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ರೀತಿಯ ದೈವ ನರ್ತಕರು ಕಳೆದ 20 ವರ್ಷಗಳ ಹಿಂದೆಯೇ ದೈವಾರಾಧನೆಯನ್ನು ವ್ಯಾಪಾರ ಮಾಡಿದರು. ರಿಷಬ್ ಶೆಟ್ಟಿ (ರಿಷಬ್ ಶೆಟ್ಟಿ)ವಿಜಯ್ ಕಿರಗಂದೂರು ಅವರೆಲ್ಲ ಮೂರು, ನಾಲ್ಕು ವರ್ಷಗಳ ಹಿಂದೆ ಬಂದವರು. ಜನರ ಇಂಥ ಪರಿಸ್ಥಿತಿಯಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಅಲ್ಲದ ಸಮಯದಲ್ಲಿ, ಪ್ರಾರ್ಥನೆ ಮಾಡದೇ, ಗ್ರಾಮ ದೈವಗಳ ಒಪ್ಪಿಗೆ ಇಲ್ಲದೇ ಆ ವ್ಯಕ್ತಿಯ ದರ್ಶನಕ್ಕೆ ಬಂದಾಗಲೇ ಅಪನಂಬಿಕೆ ಎಂಬುದು ಗೊತ್ತಾಗುತ್ತದೆ’ ಎಂದು ತಮ್ಮಣ್ಣ ಶೆಟ್ಟಿ (ತಮ್ಮಣ್ಣ ಶೆಟ್ಟಿ) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *