ನೈನಿತಾಲ್, ಡಿಸೆಂಬರ್ 9: ಉತ್ತರಾಖಂಡದ ನೈನಿತಾಲ್ನ ಮಲ್ಲಿಟಾಲ್ ಮಾರುಕಟ್ಟೆ ಪ್ರದೇಶದ ಚೀನಾ ಬಾಬಾ ದೇವಾಲಯದ ಬಳಿಯ ಮನೆಯಲ್ಲಿ ಇಂದು ಭಾರಿ ಬೆಂಕಿ (ಅಗ್ನಿ ಅಪಘಾತ) ಕಾಣಿಸಿಕೊಂಡಿದೆ. ಬೆಂಕಿ ಎಷ್ಟು ಭೀಕರವಾಗಿತ್ತೆಂದರೆ ಆ ಇಡೀ ಮನೆ ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಹತ್ತಿರದ ಕೆಲವು ಅಂಗಡಿಗಳು ಮತ್ತು ಮನೆಗಳು ಸಹ ಬೆಂಕಿಗೆ ಆಹುತಿಯಾಗಿವೆ. ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ಆರಿಸುತ್ತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ