‘ಏಯ್ ನಾನು ಪೊಲೀಸಪ್ಪ..’ PSI ಅಂತಾ ಅವಾಜ್ ಹಾಕ್ತಿದ್ದ ಖಾಕಿ ವೇಷದ ಕಳ್ಳ ಅರೆಸ್ಟ್ | Fake Policeman Arrested By Peenya Police For Fraud In Police Uniform Rav

‘ಏಯ್ ನಾನು ಪೊಲೀಸಪ್ಪ..’ PSI ಅಂತಾ ಅವಾಜ್ ಹಾಕ್ತಿದ್ದ ಖಾಕಿ ವೇಷದ ಕಳ್ಳ ಅರೆಸ್ಟ್ | Fake Policeman Arrested By Peenya Police For Fraud In Police Uniform Rav



ಪೊಲೀಸ್ ಐಡಿ ಕಾರ್ಡ್ ಬಳಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ವಿಮಾನ ನಿಲ್ದಾಣ ಮತ್ತು ಟೋಲ್ ಪ್ಲಾಜಾಗಳಲ್ಲಿ ಪೊಲೀಸ್ ಎಂದು ನಟಿಸುತ್ತಿದ್ದ ಆರೋಪಿ, ಅಧಿಕಾರಿಗಳ ಅನುಮಾನಕ್ಕೆ ಗುರಿಯಾಗಿ ಸಿಕ್ಕಿಬಿದ್ದಿದ್ದಾನೆ.

ಪೀಣ್ಯ ದಾಸರಹಳ್ಳಿ‌ (ಜುಲೈ.9): ಪೊಲೀಸ್ ಐಡಿ ಕಾರ್ಡ್ ಹಿಡಿದು ಎಲ್ಲರಿಗೂ ಆವಾಜ್​ ಹಾಕಿಕೊಂಡು ಓಡಾಡುತ್ತಿದ್ದ ಕಳ್ಳ ಖಾಕಿಯನ್ನು ಬಂಧಿಸಲಾಗಿದೆ.

ಪಿಎಸ್‌ಐ ಮಂಜುನಾಥ್ ಎಂಬುವರ ಐಡಿ ಕಾರ್ಡ್ ಬಳಸಿ ಟೋಲ್ ಪ್ಲಾಜಾ ಮತ್ತು ವಿಮಾನ ನಿಲ್ದಾಣಗಳಲ್ಲಿ ಪೊಲೀಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕರಿಹೋಬನಹಳ್ಳಿಯ ರವಿ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಪೀಣ್ಯ ಪೊಲೀಸರು ಬಂಧಿಸಿದ್ದಾರೆ.ಆರೋಪಿಯು ಪಿಎಸ್​​ಐ ಮಂಜುನಾಥ್ ಎಂಬುವರ ಐಡಿ ಕಾರ್ಡಿಗೆ ತನ್ನ ಫೋಟೋ ಹಾಕಿ ಆವಾಜ್ ಹಾಕುತ್ತಿದ್ದ.

ಏಯ್ ಪೊಲೀಸಪ್ಪ ನಾನು’​ ಎಂದು ಆವಾಜ್:

ಬಂಧಿತ ರವಿ ಎಲ್ಲಾ ಕಡೆ ‘ಏಯ್ ಪೊಲೀಸಪ್ಪ ನಾನು’ ಅಂತ ಐಡಿ ಕಾರ್ಡ್ ತೋರಿಸುತ್ತಿದ್ದ. ರವಿ ಶೇಷಾದ್ರಿಪುರಂನ ರೇಣುಕಾ ಶುಗರ್ಸ್​ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದರೆ ಏಕಾಏಕಿ ಪೊಲೀಸ್ ಐಡಿ ಕಾರ್ಡ್ ಹಿಡಿದು ಓಡಾಡುವುದಕ್ಕೆ ಶುರು ಮಾಡಿದ್ದರು. 

ಇದನ್ನೂ ಓದಿ: ಕೋಲಾರ ಬೆಂಗಳೂರಲ್ಲಿ NIA ಭರ್ಜರಿ ಬೇಟೆ, ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ! ಏನಿದು ಪ್ರಕರಣ?

ಬೆಂಗಳೂರು ಕೆಂಪೇಗೌಡ ಏರ್​ಪೋರ್ಟ್​ನ ಇಮಿಗ್ರೇಷನ್ ಬಳಿಯೂ ರವಿ ಐಡಿ ಕಾರ್ಡ್ ತೋರಿಸಿದ್ದ. ಐಡಿ ಸ್ಕ್ಯಾನ್ ಮಾಡಿದ್ದ ಇಮಿಗ್ರೇಷನ್ ಅಧಿಕಾರಿಗಳಿಗೆ ಆರೋಪಿ ರವಿ ಮೇಲೆ ಅನುಮಾನ ಬಂದಿತ್ತು. ಎದುರುಗಡೆ ಇರುವ ವ್ಯಕ್ತಿನೇ ಬೇರೆ ಐಡಿ ನಂಬರೇ ಬೇರೆ ಎನ್ನುವುದು ಪಕ್ಕಾ ಆಗಿತ್ತು. ಬಳಿಕ ಇಮಿಗ್ರೇಷನ್​ನಿಂದ ನೇರವಾಗಿ ಸ್ಟೇಟ್ ಇಂಟ್​ಗೆ ಮಾಹಿತಿ ಹೋಗಿತ್ತು. ಮಾಹಿತಿ ತಿಳಿದ ಪೀಣ್ಯ ಪೊಲೀಸರು ಆರೋಪಿ ರವಿಯನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.



Source link

Leave a Reply

Your email address will not be published. Required fields are marked *