17

Image Credit : Instagram
ಜೈದೇವ್ ಪ್ಲ್ಯಾನ್
ಇದೀಗ ಅಮೃತಧಾರೆ (Amruthadhaare)ಯಲ್ಲಿ, ಜೈದೇವ ಹೇಗಾದರೂ ಮಾಡಿ ಸಂಪೂರ್ಣ ಆಸ್ತಿಯನ್ನು ಹೊಡೆಯುವ ಪ್ಲ್ಯಾನ್ ಹಾಕುತ್ತಿದ್ದಾನೆ. ಮಲ್ಲಿಯಿಂದ ಆಸ್ತಿ ಕಬಳಿಸುವ ಆತನ ಪ್ರಯತ್ನವೆಲ್ಲವೂ ಠುಸ್ ಆಗಿದೆ.
27
Image Credit : Instagram
ಲವ್ ಅಜ್ಜಿಗೆ ಆಗಿದ್ದೇ ಬೇರೆ!
ಅದೇ ವೇಳೆ ಅಜ್ಜಿಯ ಎಂಟ್ರಿಯಾಗಿದೆ. ಲವ್ ಅಜ್ಜಿ ಎಂದೇ ಫೇಮಸ್ ಆಗಿರೋ ಈ ಅಜ್ಜಿ ಈ ಹಿಂದೆ ಹಾವು-ಮುಂಗುಸಿಯಂತಿದ್ದ ಭೂಮಿಕಾ ಮತ್ತು ಗೌತಮ್ ನಡುವೆ ಲವ್ ಶುರುವಾಗುವ ಹಾಗೆ ಮಾಡಿದ್ದಳು. ಈಗಲೂ ಹಾಗೆಯೇ ಮಾಡ್ತಾಳೆ ಎಂದೇ ಅಂದುಕೊಂಡಾಗಿತ್ತು.
37
Image Credit : Instagram
ಒಂದು ಮಾಡೇ ಇಲ್ಲ!
ಏನಾದ್ರೂ ಸರಿ, ದೂರ ದೂರ ಆಗಿರೋ ಗೌತಮ್ ಮತ್ತು ಭೂಮಿಕಾನ ಒಂದು ಮಾಡ್ತೇನೆ ಎಂದಾಗಿ ಅಮೃತಧಾರೆ ಫ್ಯಾನ್ಸ್ ಖುಷಿ ಪಟ್ಟಿದ್ದೇ ಪಟ್ಟಿದ್ದು.
47
Image Credit : Instagram
ಜೈದೇವ್ಗೆ ಆಸ್ತಿ
ಆದರೆ ಇಲ್ಲಿ ಆಗಿದ್ದೇ ಬೇರೆ. ಭೂಮಿಕಾ ಮತ್ತು ಗೌತಮ್ನ ಒಂದು ಮಾಡೋದು ಬಿಟ್ಟು ಇದ್ದ ಬಿದ್ದ ಆಸ್ತಿಯನ್ನೆಲ್ಲಾ ಜೈದೇವನಿಗೆ ಬರೆದುಕೊಟ್ಟಿದ್ದಾಳೆ ಈ ಅಜ್ಜಿ!
57
Image Credit : Instagram
ನಿದ್ದೆ ಮಾತ್ರೆ
ಹಾಗೆಂದು ಅವಳೇನು ಸುಮ್ಮನೇ ಬರೆದು ಕೊಡಲಿಲ್ಲ. ಆದರೆ ಕುತಂತ್ರಿ ಜೈದೇವ, ಅಜ್ಜಿಯ ಜ್ಯೂಸ್ನಲ್ಲಿ ನಿದ್ದೆ ಬರುವ ಮಾತ್ರೆ ಕೊಡಿಸಿ ಆಕೆ ಮಲಗಿದ ಮೇಲೆ ಎಲ್ಲಾ ಆಸ್ತಿಯ ಪೇಪರ್ಗೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಂಡಿದ್ದಾನೆ!
67
Image Credit : Instagram
ನಾಟಕನಾ, ನಿಜನಾ?
ಅಜ್ಜಿ ನಿಜಕ್ಕೂ ಮಲಗಿದ್ದಾಳಾ ಅಥವಾ ನಾಟಕವಾಡ್ತಿದ್ದಾಳಾ ಎನ್ನೋದು ಮುಖ್ಯವಾಗಿದ್ರೂ, ಈ ಪೇಪರ್ಗೆ ಅಜ್ಜಿಯ ಸಹಿಯಂತೂ ಬಿದ್ದಾಗಿದೆ. ಅಜ್ಜಿ ನಾಟಕ ಮಾಡಿ ಜೈದೇವನ ಕುತಂತ್ರ ಬಯಲು ಮಾಡಿದ್ರೆ ಸಾಕಪ್ಪಾ ಅಂತಿದ್ದಾರೆ ವೀಕ್ಷಕರು.
77
Image Credit : zee5
ಮುಂದೇನಾಗತ್ತೆ?
ಹಾಗಿದ್ರೆ ಮುಂದೇನಾಗುತ್ತೆ? ಅಜ್ಜಿಯ ಆಸ್ತಿಯ ಜೊತೆ ಜೈದೇವ್ ಪರಾರಿಯಾಗ್ತಾನಾ ಅಥ್ವಾ ಅಜ್ಜಿ ಕೈಯಲ್ಲಿ ಸಿಕ್ಕಿ ಬೀಳ್ತಾನಾ ಎನ್ನುವುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.