Headlines

ಕಲರ್ಸ್ ಕನ್ನಡ ‘ಯಜಮಾನ’ ಧಾರಾವಾಹಿಗೆ ವಿಲನ್ ಆಗಿ ಯಮುನಾ ಶ್ರೀನಿಧಿ ಎಂಟ್ರಿ

ಕಲರ್ಸ್ ಕನ್ನಡ ‘ಯಜಮಾನ’ ಧಾರಾವಾಹಿಗೆ ವಿಲನ್ ಆಗಿ ಯಮುನಾ ಶ್ರೀನಿಧಿ ಎಂಟ್ರಿ


ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿ ಆಗಿ ಗಮನ ಸೆಳೆದವರು ಯಮುನಾ ಶ್ರೀನಿಧಿ (ಯಮುನಾ ಶ್ರೀನಿಧಿ) ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ ಅವರು ಕಲಾವಿದೆಯಾಗಿ ಇಷ್ಟ ಆಗಿದ್ದಾರೆ. ಬಿಗ್ ಬಾಸ್ ಬಳಿಕ ಅವರಿಗೆ ಸಾಕಷ್ಟು ಆಫರ್‌ಗಳು ಸಿಕ್ಕಿವೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಯಜಮಾನ’ ಧಾರಾವಾಹಿಗೆ ಈಗ ಅವರು ವಿಲನ್ ಆಗಿದ್ದಾರೆ. ಈ ಧಾರಾವಾಹಿ ಮೂಲಕ ಅವರು ಗಮನ ಸೆಳೆಯಲು ರೆಡಿ ಆಗಿದ್ದಾರೆ.

‘ಯಜಮಾನ’ ಧಾರಾವಾಹಿಗೆ ಹೊಸ ಪಾತ್ರದ ಆಗಮನ ಆಗಿದೆ. ಅದುವೇ ಯಮುನಾ ಶ್ರೀನಿಧಿ. ಅವರು ತುಳಸಿ ಪಾತ್ರದಲ್ಲಿ ಬರುತ್ತಿದ್ದಾರೆ. ತುಳಸಿ ಪಾತ್ರದ ಮೂಲಕ ಧಾರಾವಾಹಿಗೆ ಹೊಸ ತಿರುವು ನೀಡಲು ಮತ್ತು ಧಾರಾವಾಹಿಯನ್ನು ಮತ್ತಷ್ಟು ರೋಚಕಗೊಳಿಸಲು ಅವರು ಸಿದ್ಧರಾಗಿದ್ದಾರೆ. ಯಮುನಾ ಅವರ ಧ್ವನಿ ದೊಡ್ಡದಾಗಿದೆ. ಅದು ವಿಲನ್ ಪಾತ್ರದ ಮೆರುಗು ಹೆಚ್ಚಿಸಬಹುದು.

ಧಾರಾವಾಹಿಯಲ್ಲಿ, ಯಮುನಾ ಅಭಿನಯಿಸುವ ತುಳಸಿ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ತುಳಸಿ ಕುತಂತ್ರಿ, ಮಹತ್ವಾಕಾಂಕ್ಷಿ ಮತ್ತು ಗುರಿ ಸಾಧನೆಗಾಗಿ ಏನನ್ನೂ ಬಿಟ್ಟುಕೊಡದ ಸ್ವಭಾವದವಳು ಅವಳಾಗಿದ್ದಾಳೆ. ಕುಟುಂಬದ ಶಾಂತಿ ಮತ್ತು ಒಗ್ಗಟ್ಟನ್ನು ಹಾಳು ಮಾಡಲು ಅವಳ ಸೂಕ್ಷ್ಮ ಸಂಚುಗಳು ಕಥೆಗೆ ಹೊಸ ತಿರುವುಗಳನ್ನು ನೀಡಲಿವೆ. ಯಮುನಾ ಶ್ರೀನಿಧಿಯ ಪ್ರವೇಶದೊಂದಿಗೆ, ‘ಯಜಮಾನ’ ಧಾರಾವಾಹಿ ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಅವರಿಂದ ಕತೆಯಲ್ಲಿ ಮತ್ತಷ್ಟು ಹೊಸತನ ನಿರೀಕ್ಷಿಸಲಾಗಿದೆ.

ವಿಶೇಷವಾಗಿ, ತನ್ನ ಮಗ ಪ್ರಣವ್, ಜಾನ್ಸಿಯನ್ನು ಮದುವೆಯಾಗಲು ಒತ್ತಾಯಿಸುವ ತುಳಸಿಯ ಯೋಜನೆಗಳು ಕುತೂಹಲದ ಅಂಚಿನಲ್ಲಿ ಇಡುತ್ತವೆ. ಜೊತೆಗೆ ಜಾನ್ಸಿಯ ತಾಯಿಯನ್ನು ಗುಪ್ತವಾಗಿ ಬಂಧಿಸಿರುವುದು ಕಥೆಯ ರೋಚಕತೆ ಮತ್ತು ಭಾವನಾತ್ಮಕ ತೀವ್ರತೆಯನ್ನು ಮತ್ತಷ್ಟು ಮುಂದುವರೆಸಿದೆ.

ಇದನ್ನೂ ಓದಿ:ನಿನ್ನೆಯಿಂದ ಮನಸ್ಸು ಕೇವಲ ದರ್ಶನ್ ಬಗ್ಗೆ ಮಾತ್ರ ಯೋಚಿಸುತ್ತಿದೆ: ಯಮುನಾ ಶ್ರೀನಿಧಿ, ನಟಿ

ಜಾನ್ಸಿಗೆ ಅಪಘಾತ

ಜಾನ್ಸಿಗೆ ಅಪಘಾತ ಆದ ಮೇಲೆ ಅವಳ ನೆನಪಿನ ಶಕ್ತಿ ಸಂಪೂರ್ಣವಾಗಿ ಹೋಗಿದೆ. ಅವಳು ರಾಘುವನ್ನ ಮರೆತಿದ್ದಾಳೆ ಎಂಬುದು ಬೇಸರದ ವಿಷಯ. ತುಳಸಿ ಸಂಚು ಮಾಡಿರುವುದನ್ನು ತಪ್ಪಿಸಬೇಕಾದ ರಾಘು ಹೊಸ ಲುಕ್‌ನೊಂದಿಗೆ ಬಂದಿರೋದು ಜನರಿಗೆ ಬಹಳ ಇಷ್ಟವಾಗಿದೆ. ರಾಘುವಿನ ಈ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ‘ಯಜಮಾನ’ ಧಾರಾವಾಹಿ ಪ್ರಸಾರವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *