Headlines

ಇಂಡಿಗೋ ಹಾರಾಟ ವ್ಯತ್ಯಯ: ಕೆಂಪೇಗೌಡ ಏರ್​ಪೋರ್ಟ್ ಆವರಣದ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರೂ. ನಷ್ಟ

ಇಂಡಿಗೋ ಹಾರಾಟ ವ್ಯತ್ಯಯ: ಕೆಂಪೇಗೌಡ ಏರ್​ಪೋರ್ಟ್ ಆವರಣದ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರೂ. ನಷ್ಟ


ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

ಬೆಂಗಳೂರು, ಡಿಸೆಂಬರ್ 10: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAB) ಟರ್ಮಿನಲ್–1ನಲ್ಲಿ ಇಂಡಿಗೋ ವಿಮಾನಗಳು (ಇಂಡಿಗೋ ವಿಮಾನಗಳು) ಹಾರಾಟದಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗಿರುವ ವ್ಯಾಪಾರದಿಂದ ವಿಮಾನ ನಿಲ್ದಾಣದಲ್ಲಿನ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ವಿಮಾನಗಳ ಹಾರಾಟ ರದ್ದು ಪರಿಣಾಮವಾಗಿ ಪ್ರಯಾಣಿಕರ ಸಂಚಾರ ಗಣನೀಯವಾಗಿ ಕಡಿಮೆಯಾದ ಪರಿಣಾಮ, ವ್ಯಾಪಾರ ವಹಿವಾಟುಗಳು ತೀವ್ರವಾಗಿ ಕುಸಿದಿವೆ. ಸಾಮಾನ್ಯವಾಗಿ ದಿನಕ್ಕೆ 1.5 ಲಕ್ಷ ರೂ.ನಿಂದ 2 ಲಕ್ಷ ರೂ. ವಹಿವಾಟು ಮಾಡುವ ಅಂಗಡಿಗಳು, ಕಳೆದ 10 ದಿನಗಳಿಂದ ಕೇವಲ 50–60 ಸಾವಿರ ರೂ. ವಹಿವಾಟು ನಡೆಸುತ್ತಿವೆ. ಸುಮಾರು ಶೇ 50ರಷ್ಟು ವ್ಯವಹಾರ ನಷ್ಟ ಉಂಟಾಗಿದೆ ಎಂದು ಅಂಗಡಿಯಲ್ಲಿ ಇರಬಹುದಾಗಿದೆ.

ಇಂಡಿಗೋ ವಿಮಾನಗಳ ಸಂಚಾರ ರದ್ದತಿಯ ಪರಿಣಾಮ, ಹಲವು ವ್ಯಾಪಾರಸ್ಥರು ಖಾಲಿ ಅಂಗಡಿಗಳಲ್ಲೇ ಕೂತು ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದಾಖಲೆ ಮಟ್ಟದ ನಷ್ಟದಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಇಂಡಿಗೋ ವಿಮಾನ ಸಂಚಾರದಲ್ಲಿ ತುಸು ಚೇತರಿಕೆ

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಇಂದು ಸ್ವಲ್ಪ ಮಟ್ಟಿನ ಪ್ರಗತಿ ಕಂಡುಬಂದಿದೆ. ಮಂಗಳವಾರ ಒಟ್ಟು 121 ವಿಮಾನಗಳ ಸಂಚಾರ ರದ್ದಾಗಿತ್ತು. ಇಂದು ರದ್ದಾದ ವಿಮಾನಗಳ ಸಂಖ್ಯೆ 58ಕ್ಕೆ ಇಳಿದಿದೆ. ಇಂದು ಏರ್‌ಪೋರ್ಟ್‌ನಿಂದ ಹೊರಡಬೇಕಿದ್ದ 26 ವಿಮಾನಗಳು ಮತ್ತು ಆಗಮಿಸಬೇಕಿದ್ದ 32 ವಿಮಾನಗಳ ಸಂಚಾರ ರದ್ದಾಗಿದೆ.

ಇದನ್ನೂ ಓದಿ: ಇಂಡಿಗೋ ರಾದ್ಧಾಂತ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಭೇಟಿ

ಪ್ರಯಾಣಿಕರಿಗೆ ವಿಮಾನ ರದ್ದತಿ ಬಗ್ಗೆ ಮುಂಚಿತವಾಗಿ ಸಂದೇಶ ರವಾನೆ ಮಾಡಲಾಗುತ್ತಿದೆ. ಈ ಮೂಲಕ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ತಪ್ಪಿಸುವ ಪ್ರಯತ್ನ ನಡೆದಿದೆ. ಶೀಘ್ರವೇ ಏರ್‌ಪೋರ್ಟ್‌ನಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *