9 ಗಂಟೆ ವಿಳಂಬ ಮಾಡಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿ ಉಡುಗರೆ ನೀಡಿದ ಇಂಡಿಗೋ

9 ಗಂಟೆ ವಿಳಂಬ ಮಾಡಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿ ಉಡುಗರೆ ನೀಡಿದ ಇಂಡಿಗೋ


ಭಾರತದ ದೊಡ್ಡ ವಿಮಾನಯಾನ ಕಂಪನಿ ಇಂಡಿಗೋ (ಇಂಡಿಗೋ ವಿಮಾನ), ಬೆಂಗಳೂರು ಸೇರಿದಂತೆ ದೇಶದ ಅನೇಕ ಕಡೆ ತನ್ನ ಪಯಣವನ್ನು ರದ್ದು ಮಾಡಿ, ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿಮಾನ ರದ್ದಾಗಿರುವ ಕಾರಣ ಪ್ರಯಾಣಿಕರು ಪರದಾಡುತ್ತಿದ್ದರು. ಈ ಬಗ್ಗೆ ಇಂಡಿಗೋ ವಿರುದ್ಧ ಕೇಂದ್ರ ಸರ್ಕಾರ ಸೇರಿದಂತೆ ಪ್ರಯಾಣಿಕರು ಕೂಡ ಅಕ್ರೋಶ ವ್ಯಕ್ತಪಡಿಸಿದ್ದರು. ಇಂಡಿಗೋದಿಂದ ಆಗಿರುವ ಅವ್ಯವಸ್ಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಒಂದು ಕಡೆ ಪ್ರಯಾಣಿಕರು ವಿಮಾನಯಾನ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಭಜನೆ ಮಾಡಿರುವ ವಿಡಿಯೋಗಳು ವೈರಲ್ ಆಗಿವೆ. ಆದರೆ ಇದರ ನಡುವೆ ಒಂದು ಸಕಾರಾತ್ಮಕ ವಿಡಿಯೋ ವೈರಲ್ ಆಗಿದೆ. ಆಯಿರಾ ಗೌರವ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಂಡಿಗೋ ವಿಮಾನ 9 ಗಂಟೆಗಳ ವಿಳಂಬಕ್ಕೆ ಉಡುಗರವನ್ನು ನೀಡಿ ಕ್ಷಮೆ ಕೇಳಿರುವ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಆಯಿರಾ ಗೌರವ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ. “ಇಂಡಿಗೋ ವಿಮಾನ ಪ್ರಯಾಣಿಕರನ್ನು 9 ತಾಸುಗಳನ್ನು ಕಾಲಿಸಿದೆ. ಈ ಕಾರಣಕ್ಕೆ ವಿಮಾನ ಸಿಬ್ಬಂದಿ ಕ್ಷಮೆ ಕೇಳಿ ಉಡುಗರವನ್ನು ತೆರೆದು ನೋಡಿದಾಗ ಅದರಲ್ಲಿ ಗೌರ್ಮೆಟ್ ಪಾಪ್‌ಕಾರ್ನ್, ಮೇಥಿ ಮಾತ್ರಿ, ಮಿಶ್ರ-ಹಣ್ಣಿನ ಜ್ಯೂಸ್ ಮತ್ತು ಸ್ಯಾಮ್‌ಸಂಗ್ ಕಾರ್ಡ್ ಇತ್ತು” ಎಂದು ಹೇಳಿದರು.

ಇದನ್ನೂ ಓದಿ: ಇದು ಭಾರತದ ಅತ್ಯಂತ ನಿಧಾನವಾಗಿ ಚಲಿಸುವ ರೈಲು: ಸೈಕಲ್‌ಗಿಂತ ನಿಧಾನವಾಗಿ ಚಲಿಸುವ ಟ್ರೈನ್ ಎಲ್ಲಿದೆ ಗೊತ್ತಾ?

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಟ್ಟು ಇನ್ನೂರು ರೂಪಾಯಿಗಳಂತೆ ಎಂದು ಕಮೆಂಟ್ ಮಾಡಿದ್ದಾರೆ. ಇತರರು ಕ್ಷಮೆಯಾಚನೆ ಸ್ವೀಕರಿಸಿಲ್ಲ ಎಂದು ಕಮೆಂಟ್ ಮಾಡಲಾಗಿದೆ. ಇಂಡಿಗೋ ಉಡುಗೊರೆಯನ್ನು ನೀಡುವುದಲ್ಲ, ಅದು ಬುಕಿಂಗ್ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ನೀಡುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇಂಡಿಗೋ ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುತ್ತದೆ. ಸಿಬ್ಬಂದಿ ಕೊರತೆಯಿಂದಾಗಿ ಕಂಪನಿಯಲ್ಲಿ ಗೊಂದಲಗಳು ಕಂಡು ಬಂದಿದೆ. ಇದು ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಜೈಪುರದಂತಹ ನಗರಗಳ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆಗೆ ಕಾರಣವಾಯಿತು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *