Headlines

Virgo Yearly Horoscope 2026: 2026ರ ಹೊಸ ವರ್ಷ ಕನ್ಯಾ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ

Virgo Yearly Horoscope 2026: 2026ರ ಹೊಸ ವರ್ಷ ಕನ್ಯಾ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ


2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮ ರಾಶಿಗೆ 7ನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 10ನೇ ಮನೆ, ಅಂದರೆ ಕರ್ಮ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31 ನೇ ತಾರೀಕಿನವರೆಗೆ ಲಾಭ ಸ್ಥಾನ, ಅಂದರೆ 11 ನೇ ಮನೆಯಲ್ಲಿ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಮತ್ತು ಈ ಡಿಸೆಂಬರ್ ಎರಡೂ ತಿಂಗಳು, ವ್ಯಯ ಸ್ಥಾನ ಅಂದರೆ 12ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 6ನೇ ಮನೆಯಲ್ಲಿ ಆಗುವಂಥ ಕುಂಭದಲ್ಲಿ ಹಾಗೂ ಕೇತು ಗ್ರಹವು 12ನೇ ಮನೆಯಲ್ಲಿ ಅಂದರೆ ವ್ಯಯ ಸ್ಥಾನದಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು 5ನೇ ಮನೆಯಲ್ಲಿ ಮಕರ ರಾಶಿ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 11ನೇ ಮನೆಗೆ ಪ್ರವೇಶಿಸುತ್ತದೆ.

ಉತ್ತರಾ ಫಲ್ಗುಣಿ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಹಸ್ತಾ ನಕ್ಷತ್ರದ ನಾಲ್ಕೂ ಪಾದ, ಚಿತ್ತಾ ನಕ್ಷತ್ರದ ಒಂದು, ಎರಡನೇ ಪಾದ ಸೇರಿ ಕನ್ಯಾ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಬುಧ.

ಕನ್ಯಾ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:

ಶನಿ ಗೋಚಾರ:

ಇಡೀ ವರ್ಷ ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಶನೈಶ್ಚರ ಸಂಚಾರ ಇರುತ್ತದೆ. ಕನ್ಯಾ ರಾಶಿಯವರಿಗೆ ಸಂತಾನ ಹಾಗೂ ರಿಪು ಸ್ಥಾನದ ಅಧಿಪತಿ ಆಗುವಂಥ ಶನಿ ಗ್ರಹವು ಏಳನೇ ಮನೆಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ಪಾರ್ಟನರ್ ಶಿಪ್ ವ್ಯವಹಾರದಲ್ಲಿ ತೊಡಗಿದವರಿಗೆ ಲಾಭದಲ್ಲಿ ಇಳಿಕೆಯಾಗಲಿದೆ. ಅಥವಾ ಲೆಕ್ಕಪತ್ರ- ಹಣಕಾಸು ವಿಚಾರಕ್ಕೆ ಅಭಿಪ್ರಾಯ ಭೇದವಿದೆ. ಇಷ್ಟು ಸಮಯ ನಿಮ್ಮ ಜೊತೆಗೆ ಇದ್ದು, ನೀವು ಮಾಡುವಂಥ ವ್ಯವಹಾರ- ವ್ಯಾಪಾರ ತಿಳಿದುಕೊಂಡಂಥವರಿಂದ ಬೇರ್ಪಡುವಂತೆ ಆಗಲಿದೆ. ಇನ್ನು ನೀವು ಯಾರ ಬಳಿ ಅಂತರಂಗದ ವಿಚಾರಗಳನ್ನು ಹಂಚಿಕೊಂಡಿರುತ್ತೀರಿ ಅಂಥ ವ್ಯಕ್ತಿಗಳು ನಿಮ್ಮ ಬಗ್ಗೆ ಅಪಪ್ರಚಾರ ಮಾಡುವ ಸಾಧ್ಯತೆಗಳಿವೆ. ಅಥವಾ ಅವರಾಗಿಯೇ ನಿಮ್ಮಿಂದ ಅಂತರ ಕಾಯ್ದುಕೊಳ್ಳುವುದರಿಂದ ನಾನಾ ಅನುಮಾನಗಳು ನಿಮ್ಮಲ್ಲಿ ಮೂಡಲಿವೆ. ಉದ್ಯೋಗ- ವ್ಯವಹಾರದ ಸಲುವಾಗಿ ವಿದೇಶಕ್ಕೆ ತೆರಳಬೇಕು ಎಂದುಕೊಂಡವರಿಗೆ ನಾನಾ ಬಗೆಯಲ್ಲಿ ಅಡೆತಡೆ ಕಾಣಿಸಿಕೊಳ್ಳಲಿದೆ. ಮೊತ್ತದ ಪ್ರಾಜೆಕ್ಟ್ ನಲ್ಲಿ ತೊಡಗಿರುವವರಿಗೆ ಹಣಕಾಸಿನ ಹರಿವು ಅಂದುಕೊಂಡಷ್ಟು ಸರಾಗವಾಗಿ ಆಗದೆ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಮಾಡಬೇಕಾದ ದೊಡ್ಡ ಪರಿಸ್ಥಿತಿ ಎದುರಾಗಲಿದೆ. ಪೊಸೆಸಿವ್ ನಿಂದ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ, ಅನುಮಾನ ಉದ್ಭವಿಸದಂತೆ ನೋಡಿಕೊಳ್ಳಿ. ಮಕ್ಕಳ ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಒಂದಲ್ಲ ಒಂದು ಕಾರಣದಿಂದ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಎಲ್ಲ ವಿಚಾರಗಳಲ್ಲಿ ಪ್ಲಾನಿಂಗ್ ಹಾಗೂ ಅದರ ಸರಿಯಾದ ಅನುಷ್ಠಾನಕ್ಕೆ ಲಕ್ಷ್ಯ ನೀಡಿ.

ಗುರು ಗ್ರಹ ಗೋಚಾರ:

ಹತ್ತನೇ ಮನೆಯಲ್ಲಿ ಗುರು ಸಂಚಾರದ ಅವಧಿ ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಉದ್ಯೋಗ- ವೃತ್ತಿ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ನೀಡಲಾಗಿದೆ. ನೀವು ಹಾಕಿದ ಶ್ರಮಕ್ಕೆ ಆರ್ಥಿಕ ರೀತಿಯಲ್ಲಿ ಫಲಿತಾಂಶ ಸಿಗುತ್ತದೆ. ಆದರೆ ಹೆಸರು ತಂದುಕೊಡಲಿದೆ. ನೀವು ನಿರ್ವಹಿಸುವ ಜವಾಬ್ದಾರಿಯಿಂದ ಬೇರೆಯದನ್ನು ನೀಡಬಹುದು, ಬೇರೆ ಅವಕಾಶ- ಪ್ರಾಜೆಕ್ಟ್ಗೆ ವರ್ಗಾವಣೆ ಆಗಲಿದೆ. ಮನೆಯ ರೆನೋವೇಷನ್, ಇಂಟೀರಿಯರ್ ಡಿಸೈನ್ ಇಂಥವಕ್ಕೆ ಹೆಚ್ಚಿನ ವೆಚ್ಚವನ್ನು ಮಾಡಿದೆ. ಆದರೆ ಸರಿಯಾದ ಬಜೆಟ್- ಪ್ಲಾನಿಂಗ್ ಇಟ್ಟುಕೊಂಡು ಅದರಂತೆಯೇ ಇದೆ. ಜೂನ್ ನಿಂದ ಅಕ್ಟೋಬರ್ ತನಕ ಹನ್ನೊಂದನೇ ಮನೆಯಲ್ಲಿ ಗುರು ಸಂಚಾರ ಅವಧಿಯಲ್ಲಿ ಹರಿವು ಸರಾಗವಾಗಿ ಆಗಲಿದೆ. ಮನೆ ನಿರ್ಮಾಣ, ಸೈಟು ಖರೀದಿ, ವಾಹನ ಖರೀದಿ ಸೇರಿದಂತೆ ನೀವು ಯಾವ ವಿಚಾರಕ್ಕೆ ಪ್ರಯತ್ನ ಮಾಡಲಿದ್ದೀರಿ. ವ್ಯಾಪಾರ- ವ್ಯವಹಾರಗಳು ಕೈ ಹಿಡಿಯಲಿವೆ. ನಿಮಗೆ ಬರಬೇಕಾದ ಹಣ ಬಾಕಿ ವಸೂಲಿ ಮಾಡಲು ಸಾಧ್ಯವಾಗಲಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ದೊರೆಯಲಿದೆ. ನಾನಾ ಶುಭ ಕಾರ್ಯಗಳು ಈ ಅವಧಿಯಲ್ಲಿ ನಡೆಯಲಿವೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಹನ್ನೆರಡನೇ ಮನೆಯಲ್ಲಿ ಗುರು ಸಂಚಾರ ಆಗುವುದರಿಂದ ಖರ್ಚು-ವೆಚ್ಚಗಳು ಹೆಚ್ಚಾಗಲಿವೆ. ವೈದ್ಯಕೀಯ ಸಂಸ್ಥೆಗಳು, ಕೋರ್ಟ್- ಕಚೇರಿಗೆ ಅಲೆದಾಟ ಮೊದಲಾದವುಗಳಿಗೆ ಹಣ ಹೊಂದಿಸುವುದಕ್ಕೆ ಪಡಿಪಾಟಲು ಪಡುತ್ತೀರಿ.

ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ

ರಾಹು-ಕೇತು ಗೋಚಾರ:

ಆರನೇ ಮನೆಯಲ್ಲಿ ರಾಹು ಸಂಚಾರ ಮಾಡಲಿದೆ, ಈ ಹಿಂದೆ ನೀವು ಜಮೀನು, ಸೈಟು ಇಂಥವುಗಳ ಮೇಲೆ ಹೂಡಿಕೆಗಳು ಒಳ್ಳೆ ರಿಟರ್ನ್ಸ್ ನೀಡಲಿವೆ. ಹೀಗೆ ಬರುವಂಥ ಹಣದಿಂದ ಆದಾಯ ಬರುವಂಥ ಕಡೆಗೆ ಹೂಡಲು ಚಿಂತನೆ ನಡೆಸುತ್ತೀರಿ. ಈ ಅವಧಿಯಲ್ಲಿ ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಲಾಭದಾಯಕ ಆಗಿರುತ್ತದೆ. ಕಡಿಮೆ ಬೆಲೆಗೆ ಖರೀದಿಗೆ ಸಿಗಬಹುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ಹೆಚ್ಚಿನ ಕಮಿಷನ್ ದೊರೆಯಲಿದೆ. ವೃತ್ತಿಯಲ್ಲಿ ನಿಮಗೆ ತೀವ್ರ ಪ್ರತಿಸ್ಪರ್ಧೆ ಒಡ್ಡುತ್ತಾ ಇರುವವರು ತಾವಾಗಿಯೇ ನಿಮ್ಮ ದಾರಿಯಿಂದ ಪಕ್ಕಕ್ಕೆ ಸರಿದುಕೊಳ್ಳಲಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಾಲ ತಂದು, ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ಷೇರು ಅದನ್ಯೂಡೇ ಟ್ರೇಡಿಂಗ್- ಫಚರ್- ಆಪ್ಷನ್ಸ್ ವ್ಯವಹಾರಗಳಿಗೆ ದೊಡ್ಡ ಮೊತ್ತದ ಹಣವನ್ನು ಹಾಕುವುದಕ್ಕೆ ಹೋಗಬೇಡಿ. ವ್ಯಯ ಸ್ಥಾನದಲ್ಲಿ ಕೇತು ಸಂಚಾರ ಆಗುತ್ತದೆ. ದೇವತಾ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ಒದಗಿಸಲಾಗಿದೆ. ನೀವು ಈ ಹಿಂದೆ ಹರಕೆ ಹೊತ್ತುಕೊಂಡಿದ್ದು, ಅದನ್ನು ಪೂರೈಸದೆ ಇದ್ದಲ್ಲಿ ಅವರನ್ನು ತೀರಿಸುವ ಕಡೆಗೆ ಲಕ್ಷ್ಯ ಇರಲಿದೆ. ಈ ಅವಧಿಯಲ್ಲಿ ದೈವದಿಂದ ಮಾಡುವುದರಿಂದ ಸಮಸ್ಯೆಗಳನ್ನು ಹೆಚ್ಚು ಮಾಡಿಕೊಳ್ಳುತ್ತೀರಿ. ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಕೆಲವು ತಪ್ಪುಗಳನ್ನು ಮಾಡಿ, ತೊಂದರೆಗೆ ಸಿಲುಕಿಕೊಳ್ಳುವಂತೆ ಆಗಲಿದೆ. ಮನೆಯ ಹಿರಿಯರ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ನೀಡಿ.

ಪರಿಹಾರ:

ಗಣಪತಿ ಆರಾಧನೆ ಬಹಳ ಮುಖ್ಯ. ವರ್ಷದ ಕೊನೆ ಎರಡು ತಿಂಗಳಲ್ಲಿ ಸಾಯಿಬಾಬ, ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನೂ ಮಾಡಿಕೊಳ್ಳುವುದು ಕ್ಷೇಮ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *