ರಣವೀರ್ ಸಿಂಗ್ ನಟನೆಯ ‘ಧುರಂಧರ’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಇದೆ. ಈ ಚಿತ್ರ ಊಹೆಗೂ ಮೀರಿ ಗೆಲವು ಕಂಡಿದೆ. ಐದು ದಿನಕ್ಕೆ ಚಿತ್ರ 150 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ಅನಾಯಾಸವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಹೇಳಲಾಗಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾದ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಲಾಗುತ್ತಾ ಇದೆ.
‘ಧುರಂಧರ’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ಗೂ ಮೊದಲೇ ವಿವಾದ ಸೃಷ್ಟಿಯಾಗಿತ್ತು. ದೈವ ಅನುಕರಣೆಯನ್ನು ಮಾಡಿ ರಣವೀರ್ ಟೀಕೆಗೆ ಗುರಿ ಇದೆ ಮುಖ್ಯವಾದುದು. ನೆಗೆಟಿವ್ ವಿಷಯ ಸಿನಿಮಾ ಮೆಟ್ಟಿ ನಿಂತಿದೆ.
‘ಧುರಂಧರ’ ಸಿನಿಮಾ ಮೊದಲ ದಿನ ಗಳಿಸಿದ್ದು, 28 ಕೋಟಿ ರೂಪಾಯಿ. ಶನಿವಾರ 32 ಕೋಟಿ ರೂಪಾಯಿ, ಭಾನುವಾರ 43 ಕೋಟಿ ರೂಪಾಯಿ, ಸೋಮವಾರ 23.35 ಕೋಟಿ ರೂಪಾಯಿ ಗಳಿಸಿ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಮಂಗಳವಾರ (ಡಿಸೆಂಬರ್ 10) ಸಿನಿಮಾದ ಕಲೆಕ್ಷನ್ 26.50 ಕೋಟಿ ರೂಪಾಯಿ.
ಸಾಮಾನ್ಯವಾಗಿ ವಾರದ ದಿನ ಬಂದರೆ ಸಿನಿಮಾದ ಗಳಿಕೆ ಕಾಣಿಸಿಕೊಂಡಿದೆ. ಸೋಮವಾರಕ್ಕಿಂತ ಮಂಗಳವಾರ ಕಲೆಕ್ಷನ್ ಮತ್ತಷ್ಟು ಕುಗ್ಗುತ್ತದೆ. ಆದರೆ, ‘ಧುರಂಧರ’ ವಿಷಯದಲ್ಲಿ ಅದು ಉಲ್ಟಾ ಆಗಿದೆ. ಸೋಮವಾರಕ್ಕಿಂತ ಮಂಗಳವಾರ ಸಿನಿಮಾ ಹೆಚ್ಚುವರಿಯಾಗಿ 3 ಕೋಟಿ ರೂಪಾಯಿ ಗಳಿಸಿದೆ. ಈ ವಾರಾಂತ್ಯದಲ್ಲಿ ಚಿತ್ರದ ಪ್ರತಿ ದಿನದ ಕಲೆಕ್ಷನ್ 30-40 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅಬ್ಬಾ,’ಧುರಂಧರ’ ಭಾನುವಾರದ ಗಳಿಕೆ ಇಷ್ಟವಾಯಿತೇ? ಕೊನೆಗೂ ಗೆದ್ದ ರಣವೀರ್ ಸಿಂಗ್
ಆದಿತ್ಯ ಧಾರ್ ಅವರು ಈ ಮೊದಲು ‘ಉರಿ’ ಸಿನಿಮಾ ಮಾಡಿ ಗಮನ ಸೆಳೆದಿದ್ದರು. ಈಗ ಮತ್ತೊಂದು ದೇಶಭಕ್ತಿ ಚಿತ್ರದ ಸಿನಿಮಾ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ‘ಧುರಂಧರ 2’ ಸಿನಿಮಾ ಕೂಡ ಬರಲು ರೆಡಿಯಾಗಿದೆ. ಮಾರ್ಚ್ 19 ರಂದು ಈ ಚಿತ್ರಕ್ಕೆ ಸೀಕ್ವೆಲ್ ರಿಲೀಸ್ ಆಗಲಿದೆ. ಈ ವೇಳೆ ಯಶ್ ನಟನೆಯ ‘ಟಾಕ್ಸಿಕ್’ ಕೂಡ ರಿಲೀಸ್ ಆಗಲಿದೆ, ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಏರ್ಪಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.