ತಮಿಳುನಾಡು, ಡಿ.10: ಕನ್ಯಾಕುಮಾರಿ ಜಿಲ್ಲೆಯ ಮಿಡಲಂ ಕಡಲತೀರದಲ್ಲಿ ಮಂಗಳವಾರ ದೊಡ್ಡ ಆಕಾರದ ಸತ್ತ ತಿಮಿಂಗಿಲವೊಂದು ಇದೆ. ಮಿಡಲಂ ನಿವಾಸಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸತ್ತ ತಿಮಿಂಗಿಲವನ್ನು ಪರಿಶೀಲನೆ ನಡೆಸಿದ ಅರಣ್ಯ ಅಧಿಕಾರಿಗಳು, ದೊಡ್ಡ ಹಡಗಿಗೆ ಮೀನು ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಿದ್ದಾರೆ. ಇನ್ನು ಈ ಬಗ್ಗೆ ತಿಮಿಂಗಿಲದ ವಿಧಿ ವಿಜ್ಞಾನ ಪರೀಕ್ಷೆ ನಡೆಸಿದ ನಂತರ ಕಡಲತೀರದಲ್ಲಿ ಮಣ್ಣು ಮಾಡಲಾಗಿದೆ.
ವಿಡಿಯೋ ಸ್ಟೋರಿ ನೋಡಲು ಇಲ್ಲಿ ಕ್ಲಿಕ್ ಮಾಡಿ