Headlines

ಇಂಡಿಗೋ ವಿಮಾನಗಳು ರದ್ದು: KSRTC, BMTC ಆದಾಯಕ್ಕೂ ಹೊಡೆತ ಬಿತ್ತು

ಇಂಡಿಗೋ ವಿಮಾನಗಳು ರದ್ದು: KSRTC, BMTC ಆದಾಯಕ್ಕೂ ಹೊಡೆತ ಬಿತ್ತು


ಇಂಡಿಗೋ ವಿಮಾನಗಳು ರದ್ದು: KSRTC, BMTC ಆದಾಯಕ್ಕೂ ಹೊಡೆತ ಬಿತ್ತು

ಬೆಂಗಳೂರು, (ಡಿಸೆಂಬರ್ 10): ಇಂಡಿಗೋ ವಿಮಾನಗಳ ರದ್ದತಿಯನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಸಂಸ್ಥೆಗಳ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿವೆ. ಇನ್ನೊಂದೆಡೆ ಇಂಡಿಗೋ ವಿಮಾನಗಳು ಹಾರಾಟದ ಕಾರಣದಿಂದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಆದಾಯಕ್ಕೆ ಹೊಡೆತ ಬಿದ್ದಿದೆ. ವಿಮಾನ ರದ್ದಾಗುತ್ತಿರುವ ಕೆಂಪೇಗೌಡಗಳು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳಭಾಗದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ, ಹೊರಭಾಗದಲ್ಲಿ ಬೆಂಗಳೂರಿನ ವಿವಿಧೆಡೆ ಸಂಚರಿಸುವ ಬಸ್ಸುಗಳು ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿವೆ. ವಿಮಾನ ನಿಲ್ದಾಣದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇರುತ್ತಾರೆ. ಆದರೆ, ಕಳೆದ ಮೂರು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಫ್ಲೈಬಸ್ ಆದಾಯ ಸಂಗ್ರಹದಲ್ಲಿ ಭಾರಿ ಕುಸಿತವಾಗಿದೆ. ಕಳೆದ ಒಂದು ವಾರದಲ್ಲಿ 10 ಲಕ್ಷ ರೂ ಆದಾಯದಲ್ಲಿ ಕುಸಿತ ಕಂಡಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *