Video: ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಬಾಲಕನನ್ನು ಅಪಹರಿಸಿದ್ರಾ ಪೊಲೀಸರು?

Video: ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಬಾಲಕನನ್ನು ಅಪಹರಿಸಿದ್ರಾ ಪೊಲೀಸರು?


ಭೋಪಾಲ್, ಡಿಸೆಂಬರ್ 10: ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು(ಪೋಲೀಸ್) ಬಸ್ಸಿನಿಂದ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವೈರಲ್ ಆದ ವಿಡಿಯೋದಲ್ಲಿ ಮಫ್ತಿಲಿದ್ದ ಬಾಲಕನನ್ನು ಬಸ್ಸಿನಿಂದ ಇಳಿಸಿಕೊಂಡು ಹೋಗುತ್ತಿರುವುದು ಗೋಚರಿಸುತ್ತಿದೆ. ಮಲ್ಹಾರ್‌ಗಢ ಪೊಲೀಸ್ ಠಾಣೆ ಪೊಲೀಸರ ಮೇಲೆ ಈ ದೂರು ಕೇಳಿಬಂದಿದೆ.ವಿದ್ಯಾರ್ಥಿಯನ್ನು ಬಸ್ಸಿನಿಂದ ಅಪಹರಿಸಿ ನಕಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂದು ನ್ಯಾಯಾಲಯಕ್ಕೆ ಸಾಕ್ಷಿ ಸಮೇತ ದಾಖಲೆ ಸಲ್ಲಿಸಲಾಗಿದೆ.

ಆಗಸ್ಟ್ 29 ರಂದು ಮಲ್ಹರ್ಗಢದ 18 ನೇ ವರ್ಷದ 12 ನೇ ತರಗತಿ ವಿದ್ಯಾರ್ಥಿ ಸೋಹನ್ ಎಂಬ ವಿದ್ಯಾರ್ಥಿಯನ್ನು ಬಲವಂತವಾಗಿ ಬಸ್ಸಿನಿಂದ ಇಳಿಸಲಾಯಿತು. ಕೆಲವು ಗಂಟೆಗಳ ನಂತರ, ಆತನನ್ನು 2.7 ಕೆಜಿ ಅಫೀಮು ಜೊತೆ ಬಂಧಿಸಲಾಗಿದೆ ಎಂದು ಘೋಷಿಸಿ ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದರು, ಅವನನ್ನು ಜೈಲಿಗೆ ಕಳುಹಿಸಲಾಯಿತು.

ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ವೀಡಿಯೊಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಬೇರೆಯದೇ ಕಥೆಯನ್ನು ಹೇಳಿವೆ.ಸಾಕ್ಷ್ಯವು ಯಾವುದೇ ಮಾದಕ ದ್ರವ್ಯಗಳಾಗಲಿ, ಬೆನ್ನಟ್ಟುವಿಕೆಯಾಗಲಿ ಅಥವಾ ವಶಪಡಿಸಿಕೊಳ್ಳುವಿಕೆಯಾಗಲಿ ಕಂಡುಬಂದಿಲ್ಲ. ನಂತರ ಅವರ ಕುಟುಂಬವು ಡಿಸೆಂಬರ್ 5 ರಂದು ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠದ ಮುಂದೆ ಕಾನೂನುಬಾಹಿರ ಅಪಹರಣ, ತಪ್ಪಾದ ಬಂಧನ ಮತ್ತು ಸುಳ್ಳುಸಾಕ್ಷ್ಯಾಧಾರಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿತು.

ಮತ್ತಷ್ಟು ಓದಿ: ಬೆಂಗಳೂರು: ಹಾಸಿಗೆಯ ಕೆಳಗೆ 11 ಲಕ್ಷ ರೂ. ಬಚ್ಚಿಟ್ಟಿದ್ದ ಕಾನ್ ಸ್ಟೇಬಲ್ ಬಂಧನ

ಈಗ ತನ್ನ ಆದೇಶವನ್ನು ಕಾಯ್ದಿರಿಸಿದೆ, ಕಾನೂನು ತಜ್ಞರು ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ತಿಂಗಳು ಮಲ್ಹರ್‌ಗಢ ಪೊಲೀಸ್ ಠಾಣೆ ರಾಷ್ಟ್ರೀಯ ಮನ್ನಣೆ ಗಳಿಸಿದ್ದು, ಭಾರತದ ಅತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ಒಂಬತ್ತನೇ ಸ್ಥಾನ ಪಡೆದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *