Headlines

ಅಮೇಜಾನ್​ನಿಂದ ಭಾರೀ ಹೂಡಿಕೆ ಘೋಷಣೆ; ಭಾರತದಲ್ಲಿ ಗೂಗಲ್, ಮೈಕ್ರೋಸಾಫ್ಟ್​ಗಿಂತ ಎರಡು ಪಟ್ಟು ಹೆಚ್ಚು ಹೂಡಿಕೆ

ಅಮೇಜಾನ್​ನಿಂದ ಭಾರೀ ಹೂಡಿಕೆ ಘೋಷಣೆ; ಭಾರತದಲ್ಲಿ ಗೂಗಲ್, ಮೈಕ್ರೋಸಾಫ್ಟ್​ಗಿಂತ ಎರಡು ಪಟ್ಟು ಹೆಚ್ಚು ಹೂಡಿಕೆ


ಜುಲೈ, ಡಿಸೆಂಬರ್ 10: ಭಾರತದಲ್ಲಿ ಹೂಡಿಕೆ ಮಾಡಲು ಜಾಗತಿಕ ತಂತ್ರಜ್ಞಾನದ ದೈತ್ಯ ಕಂಪನಿಗಳು ಪೈಪೋಟಿಗೆ ಬಿದ್ದಂತಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ (ಮೈಕ್ರೋಸಾಫ್ಟ್) ಸಂಸ್ಥೆಗಳು ಭಾರೀ ಮೊತ್ತದ ಹೂಡಿಕೆಯನ್ನು ಪ್ರಕಟಿಸಿದ ಬೆನ್ನಲ್ಲೇ ಇದೀಗ ಅಮೇಜಾನ್ (Amazon) ಕೂಡ ಭಾರತದಲ್ಲಿ ಹಣ ಹಾಕಲು ಸಿದ್ಧವಾಗಿದೆ. ಬರೋಬ್ಬರಿ 35 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆ ಮಾಡುವುದಾಗಿ ಅಮೇಜಾನ್ ಪ್ರಕಟಿಸಿದ್ದಾರೆ.

ದೆಹಲಿಯಲ್ಲಿ ಇಂದು ಬುಧವಾರ ನಡೆದ ಆರನೇ ಆವೃತ್ತಿಯ ಅಮೇಜಾನ್ ಸಂಭವ ಶೃಂಗಸಭೆಯಲ್ಲಿ (6ನೇ ಅಮೆಜಾನ್ ಸ್ಂಭವ್ ಶೃಂಗಸಭೆ 2025) ಇದನ್ನು ಪ್ರಕಟಿಸಲಾಗಿದೆ. ಅಮೇಜಾನ್ ಭಾರತದಲ್ಲಿ 40 ಬಿಲಿಯನ್ ಡಾಲರ್‌ನಷ್ಟು ಹೂಡಿಕೆ ಮಾಡಿದೆ. ಇದರ ಜೊತೆಗೆ ಇನ್ನೂ 35 ಬಿಲಿಯನ್ ಡಾಲರ್ ಹಣ ಹಾಕಲು ಬದ್ಧವಾಗಿದೆ. 35 ಬಿಲಿಯನ್ ಡಾಲರ್ ಎಂದರೆ ಮೂರು ಲಕ್ಷ ಕೋಟಿ ರೂಪಾಯಿ ಅಧಿಕ ಹಣ.

ಇದನ್ನೂ ಓದಿ: ಭಾರತದಲ್ಲಿ ಮೈಕ್ರೋಸಾಫ್ಟ್ ಎಐ ಸೌಕರ್ಯ ನಿರ್ಮಾಣಕ್ಕೆ 1.50 ಲಕ್ಷ ಕೋಟಿ ರೂ ಹೂಡಿಕೆ

ನಿನ್ನೆಯಷ್ಟೇ ಮೈಕ್ರೋಸಾಫ್ಟ್ ಸಿಐಒ ಸತ್ಯ ನಾದೆಲ್ಲಾ ಅವರು ತಮ್ಮ ಕಂಪನಿಯು ಭಾರತದಲ್ಲಿ 17.5 ಬಿಲಿಯನ್ ಡಾಲರ್ (ಒಂದುವರೆ ಲಕ್ಷ ಕೋಟಿ ರೂ) ಹೂಡಿಕೆ ಮಾಡಿರುವುದಾಗಿ ಪ್ರಕಟಿಸಿದ್ದರು. ಗೂಗಲ್ ಸಂಸ್ಥೆಯು ಮುಂದಿನ ಐದು ವರ್ಷದಿಂದ 15 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿಯೂ ಹೇಳಿದೆ. ಅಮೇಜಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಕಂಪನಿಯು ಎರಡು ಪಟ್ಟು ಹೆಚ್ಚು ಹೂಡಿಕೆ ಮಾಡಿದ್ದೇನೆ ಎಂದು ಹೇಳಿದೆ.

ಅಮೇಜಾನ್ ತನ್ನ ಈ 35 ಬಿಲಿಯನ್ ಡಾಲರ್ ಹೂಡಿಕೆಯಿಂದ ಹತ್ತು ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದೆ. ಒಂದೂವರೆ ಕೋಟಿ ಸಣ್ಣ ಉದ್ದಿಮೆಗಳಿಗೆ ಎಐಐ ಲಾಭವನ್ನು ತಲುಪಿಸಲು ಮತ್ತು ರಫ್ತನ್ನು 80 ಬಿಲಿಯನ್ ಡಾಲರ್‌ಗೆ ಹೆಚ್ಚಿಸಲು ಸಹಾಯ ಮಾಡಿದೆ.

ಇದನ್ನೂ ಓದಿ: ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?

40 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವ ಅಮೇಜಾನ್ ಭಾರತದಲ್ಲಿ ಅತಿಹೆಚ್ಚು ಹೂಡಿಕೆ ಮಾಡಿರುವ ವಿದೇಶೀ ಸಂಸ್ಥೆಯಾಗಿದೆ. ಭಾರತದಲ್ಲಿ ಅತಿಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿರುವ ಕಂಪನಿಗಳಲ್ಲಿ ಅದೂ ಒಂದೆನಿಸಿದೆ. 28 ಲಕ್ಷ ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಒದಗಿಸಲಾಗಿದೆ. ಒಂದು ಕೋಟಿಗೂ ಅಧಿಕ ಉದ್ದಿಮೆಗಳನ್ನು ಡಿಜಿಟೈಸ್ ಮಾಡಿದೆ. ಇಕಾಮರ್ಸ್‌ನಲ್ಲಿ 20 ಬಿಲಿಯನ್ ಡಾಲರ್‌ಗೂ ಅಧಿಕ ರಫ್ತಿಗೆ ಕಾರಣವಾಗಿದೆ. ಈ ರಫ್ತನ್ನು ಮುಂದಿನ ಕೆಲವು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *