ಹತ್ತು ಕೋಟಿ ರೂ ವಿದ್ಯಾರ್ಥಿಗಳ ಶುಲ್ಕ ಬಾಕಿ: ಆರ್ಥಿಕ ಸಂಕಷ್ಟದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ

ಹತ್ತು ಕೋಟಿ ರೂ ವಿದ್ಯಾರ್ಥಿಗಳ ಶುಲ್ಕ ಬಾಕಿ: ಆರ್ಥಿಕ ಸಂಕಷ್ಟದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ


ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ

ಬಳ್ಳಾರಿ, ಡಿಸೆಂಬರ್ 10: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ (VSK ವಿಶ್ವವಿದ್ಯಾಲಯ) ವ್ಯಾಪ್ತಿಗೆ ಬರುವ ಕಾಲೇಜುಗಳು ಸುಮಾರು 10 ಕೋಟಿ ರೂ ಮೊತ್ತದ ವಿದ್ಯಾರ್ಥಿಗಳ ಶುಲ್ಕ (ವಿದ್ಯಾರ್ಥಿ ಶುಲ್ಕ) ಬಾಕಿ ಉಳಿಸಿಕೊಂಡಿವೆ. ಹೀಗಾಗಿ ವಿದ್ಯಾರ್ಥಿಗಳ ಶುಲ್ಕ ಬಾಕಿ ಉಳಿಸಿಕೊಂಡ ಕಾಲೇಜುಗಳಿಗೆ ವಿವಿ ನೋಟಿಸ್ ನೀಡುವ ಮೂಲಕ ಚಾಟಿ ಬೀಸಿದೆ. ಒಂದು ವೇಳೆ ಬಾಕಿ ಉಳಿದಿಲ್ಲದಿದ್ದರೆ ವಿದ್ಯಾರ್ಥಿಗಳ ಪ್ರವೇಶ ಮತ್ತು ಪರೀಕ್ಷೆಗೂ ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಗಣಿನಾಡು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು 2018-19ನೇ ಸಾಲಿನ ವಿದ್ಯಾರ್ಥಿಗಳ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡಿರುವ ಕಾಲೇಜುಗಳಿಗೆ ಇದೀಗ ನೋಟಿಸ್‌ ಮೂಲಕ ಚಾಟಿ ಬೀಸಿದೆ. ಈ ವಿವಿ ವ್ಯಾಪ್ತಿಗೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 10 ಸ್ನಾತಕೋತ್ತರ ಕೇಂದ್ರ, 50 ಪದವಿ ಹಾಗೂ 14 ಬಿ.ಎಡ್ ಕಾಲೇಜುಗಳು ಒಳಪಡುತ್ತಿವೆ. 15 ಸರ್ಕಾರಿ ಕಾಲೇಜುಗಳಿವೆ. ಈಗಾಗಲೇ ಕಾಲೇಜುಗಳ ವಿದ್ಯಾರ್ಥಿಗಳ ಪಾವತಿ ಶುಲ್ಕವನ್ನು ಬಾಕಿ ಉಳಿಸಿಕೊಂಡಿವೆ.

ಇದನ್ನೂ ಓದಿ: ಬಳ್ಳಾರಿ: ಆರು ತಿಂಗಳಿಂದ ವಿವಿಯಲ್ಲಿ 70 ಸಾವಿರ ಅಂಕಪಟ್ಟಿ; ಪ್ರಾಂಶುಪಾಲರ ನಿರ್ಲಕ್ಷ್ಯಕ್ಕೆ ದೂಳು ಹಿಡಿದ ಮಾರ್ಕ್ಸ್ ಕಾರ್ಡ್

ಈ ಹಿಂದೆ ವಿದ್ಯಾರ್ಥಿಗಳ ವೇತನವನ್ನು ನೇರವಾಗಿ ಕಾಲೇಜುಗಳಿಗೆ ಪ್ರಾರಂಭಿಸಲಾಗಿದೆ. ಕಾಲೇಜಿನ ಪ್ರವೇಶಾತಿ ಶುಲ್ಕಕ್ಕೆ ವಿದ್ಯಾರ್ಥಿ ವೇತನ ಸರಿದೂಗಿಸಿಕೊಂಡು, ಉಳಿದ ಮೊತ್ತವನ್ನು ಆಯಾ ವಿದ್ಯಾರ್ಥಿಗೆ ಪಾವತಿಸಲಾಗಿಲ್ಲ. ಆದರೆ ಕೆಲವು ವರ್ಷಗಳಿಂದ ವಿದ್ಯಾರ್ಥಿ ವೇತನ ಆಯಾ ವಿದ್ಯಾರ್ಥಿಯ ಖಾತೆಗೆ ನೇರವಾಗಿ ಪಾವತಿಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಪಾವತಿಯನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ವಿದ್ಯಾರ್ಥಿಗಳ ಪಾವತಿ ಶುಲ್ಕವನ್ನು ನೀಡಿರುವುದು ಇದೀಗ ಕಾಲೇಜುಗಳಿಗೆ ಸಮಸ್ಯೆ ತಂದೊಡ್ಡಿದೆ.

2018-19ನೇ ಸಾಲಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಶುಲ್ಕ ಪಾವತಿ ಮಾಡಿಲ್ಲ. 2018-19ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಅವರೆಲ್ಲಾ ವಿವಿಯಿಂದ ಹೊರನಡೆದಿದ್ದಾರೆ. ಶುಲ್ಕ ಪಡೆದ ಈ ಸಾಲಿನ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುವುದು ಕಾಲೇಜುಗಳಿಗೆ ದೊಡ್ಡ ಸವಾಲಾಗಿದೆ.

ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದಷ್ಟು

ಇನ್ನು ಈ ಬಗ್ಗೆ ಮಾತನಾಡಿದ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು, 10 ಕೋಟಿಗೂ ಅಧಿಕ ಮೊತ್ತವನ್ನು ಉಳಿಸಿದ ವಿದ್ಯಾರ್ಥಿ ವೇತನ ಶುಲ್ಕ ಕಾಲೇಜುಗಳು ಬಾಕಿ ಉಳಿದಿವೆ. ಇದು ವಿವಿಗೆ ಆರ್ಥಿಕ ಸಮಸ್ಯೆ ತಂದೊಡ್ಡಿದೆ. ವಿವಿ ನಿರ್ವಹಣೆ ಆಗಬೇಕಾದರೆ ಹಣದ ಅವಶ್ಯವಿದೆ, ಹೀಗಾಗಿ ಪಾವತಿ ಶುಲ್ಕ ಬಾಕಿ ಉಳಿಸಿಕೊಂಡ ಕಾಲೇಜುಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಬಳ್ಳಾರಿ: ಅಂಕಪಟ್ಟಿಯಲ್ಲಿ ತನ್ನ ಬದಲಿಗೆ ಸ್ವಾಮೀಜಿ ಫೋಟೋ, ದಂಗಾದ ವಿದ್ಯಾರ್ಥಿ!

ಒಟ್ಟಿನಲ್ಲಿ ಗಣಿನಾಡು ಬಳ್ಳಾರಿಯಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನ ಬಾಕಿ ಉಳಿಸಿಕೊಂಡಿರುವ ಕಾಲೇಜುಗಳಿಗೆ ನೋಟಿಸ್ ಇದೀಗ ಬಿಸಿ ಮುಟ್ಟಿಸಿದೆ. ಮುಂದೆ ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *