ಬೆಂಗಳೂರು, ಡಿಸೆಂಬರ್ 10: ಇತ್ತೀಚೆಗೆ ರಾಜ್ಯದಲ್ಲಿ (ಕರ್ನಾಟಕ) ಗ್ಯಾಸ್ ಗೀಸರ್ ನಿಂದ (ಗ್ಯಾಸ್ ಗೀಸರ್) ಅನಾಹುತಗಳು ಸಂಭವಿಸುತ್ತಿವೆ, ಜನರು ಜೀವ ಕೂಡ ಕಳೆದುಕೊಳ್ಳುತ್ತಿದ್ದಾರೆ. ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್ ಕೂಡ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಹೀಗಾಗಿ ಗ್ಯಾಸ್ ಗೀಸರ್ ನಿಂದ ಜನರು ಎಚ್ಚರ ವಹಿಸಬೇಕಿದೆ. ಈ ಗ್ಯಾಸ್ ಗೀಸರ್ಗಳನ್ನು ಹೆಚ್ಚಾಗಿ ಸ್ನಾನದ ಮನೆಯಲ್ಲಿ ಅಳವಡಿಸಿಕೊಳ್ಳದಿದ್ದರೆ. ಅಗ್ಗದ ಗುಣಮಟ್ಟದ ಗ್ಯಾಸ್ ಗೀಸರ್ ದಿನದಿಂದ ದಿನಕ್ಕೆ ಸೈಲೆಂಟ್ ಕಿಲ್ಲರ್ ಆಗುತ್ತಿದೆ.
ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ಜನರು ಆಧುನಿಕ ಜೀವನಕ್ಕೆ ಹೊಂದಿಕೊಳ್ಳಲು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಅದು ಉಡುಗೆ-ತೊಡುಗೆಯಿಂದ ಹಿಡಿದು ಸ್ನಾನದ ಗೃಹದವರೆಗೂ ಆಧುನಿಕ ಜೀವನದ ಮೊರೆ ಹೋಗುತ್ತಿದೆ. ಅಂತಹ ಜೀವನ ಶೈಲಿ ಜನರ ಜೀವಕ್ಕೆ ಕುತ್ತು ತರುತ್ತಿದೆ. ಇತ್ತೀಚೆಗೆ ರಾಜಧಾನಿಯಲ್ಲಿ ಗ್ಯಾಸ್ ಗೀಸರ್ ನಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸ್ನಾನದ ಗೃಹಕ್ಕೆ ಸ್ನಾನ ಮಾಡಲು ಹೋದವರು ಶವವಾಗಿ ಬರುತ್ತಿದ್ದಾರೆ. ಇದಕ್ಕೆ ಕಾರಣ ಗ್ಯಾಸ್ ಗೀಸರ್.
ಇದನ್ನೂ ಓದಿ: ಬೆಂಗಳೂರು: ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೊರಿಕೆ; ತಾಯಿ, ಮಗ ಸಾವು
ದಿನಕ್ಕೆ ಗ್ಯಾಸ್ ಗೀಸರ್ ಸೈಲೆಂಟ್ ಕಿಲ್ಲರ್ ಆಗುತ್ತಿದೆ, ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್ ಅನ್ನು ಜನರು ಬಳಸುತ್ತಿದ್ದಾರೆ, ಇದರಿಂದ ಹೊರ ಬರುವ ಕಾರ್ಬೋಹೈಡ್ರೇಟ್ ಶ್ವಾಸಕೋಶಕ್ಕೆ ಸೇರಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾರ್ಬೋಹೈಡ್ರೇಟ್ಗೆ ಯಾವುದೇ ಬಣ್ಣ, ರುಚಿ, ವಾಸನೆ ಇಲ್ಲ ಎಂದು ಇದು ಲೀಕ್ ಆಗಿ ಮಾನವನ ಶ್ವಾಸಕೋಶ ಸೇರುವುದು ಕೂಡ ಗೊತ್ತಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಇತ್ತೀಚೆಗೆ ಗ್ಯಾಸ್ ಗೀಸರ್ ಲೀಕೇಜ್ ನಿಂದ ಸಾವನ್ನಪ್ಪಿದ ಪ್ರಕರಣ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಆಗುತ್ತಿದೆ.
ಈ ವರ್ಷ 15ಕ್ಕೂ ಹೆಚ್ಚು ಕೇಸ್
ಎರಡು ದಿನದ ಹಿಂದೆ ಅಂದರೆ ಡಿಸೆಂಬರ್ 08 ರಂದು ಗೋವಿಂದರಾಜ ನಗರದ ನಿವಾಸಿ ತಾಯಿ ಚಾಂದಿನಿ (26) ಹಾಗೂ 4 ವರ್ಷದ ಮಗ ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿದ್ದರು.
ಇದನ್ನೂ ಓದಿ: ಒಟ್ಟಿಗೆ ಸ್ನಾನ ಬಾತ್ ರೂಮಿಗೆ ಹೋಗಿದ್ದ ಅಕ್ಕ ತಂಗಿ ದುರಂತ: ಸಾವು ಆಗಿದ್ದೇನು?
ಡಿಸೆಂಬರ್ 01 ರಂದು ಬೆಂಗಳೂರಿನ ತೋಟದ ಗುಡ್ಡದಹಳ್ಳಿ ನಿವಾಸಿ ಭೂಮಿಕಾ ಗ್ಯಾಸ್ ಗೀಜರ್ ಸೋರಿಕೆಯಿಂದಾಗಿ ಸಾವಿಗೆ ತುತ್ತಾಗಿದ್ದರು. ನವೆಂಬರ್ 25 ರಂದು ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಮನೆಯೊಂದರಲ್ಲಿ ಸ್ನಾನಕ್ಕೆ ಹೋದ ಸಹೋದರರು ಗ್ಯಾಸ್ ಗೀಸರ್ ಸೊರಿಕೆಯಿಂದ ದುರಂತ ಅಂತ್ಯ ಕಂಡಿದ್ದರು.
ಮುನ್ನೆಚ್ಚರಿಕಾ ಕ್ರಮಗಳೇನು?
- ಒಳ್ಳೆಯ ಗುಣಮಟ್ಟದ ಗೀಜರ್ ಬಳಕೆ ಮಾಡಬೇಕು.
- ಗೀಜರ್ ಆನ್ ಮಾಡಿಕೊಂಡು ಸ್ನಾನ ಬೇಡ, ಕಿಟಕಿ ತೆರೆದಿರಬೇಕು.
- ಸ್ನಾನ ಗೃಹದಲ್ಲಿ ಸಿಲಿಂಡರ್ ಇರಬಾರದು.
- ಕಾರ್ಬೋಹೈಡ್ರೇಟ್ ಸೋರಿಕೆಗೆ ಅಲಾರಂ ಬಳಕೆ ಮಾಡಬೇಕು.
ಒಟ್ಟಿನಲ್ಲಿ ಸ್ನಾನಕ್ಕೆ ಅಂತಾ ಹೋದವರು ಅನಾರೋಗ್ಯದಂತಹ ಪ್ರಕರಣ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದ್ದಾರೆ, ಹೀಗಾಗಿ ಜನರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.