ನಟ ದರ್ಶನ್ (ದರ್ಶನ್) ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿದ್ದಾರೆ. ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಾಗಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ದರ್ಶನ್ ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಈ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಅಭಿಮಾನಿಗಳು ಈ ಚಿತ್ರಕ್ಕೆ ಪ್ರಚಾರ ನೀಡುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ದರ್ಶನ್ ಅವರ ಕಟೌಟ್‌ಗಳು ರಾರಾಜಿಸುತ್ತಿವೆ. ಮೈಸೂರಿನಲ್ಲಿ ಇರುವ ದರ್ಶನ್ ಅಭಿಮಾನಿಗಳು ನಗರದ ತುಂಬ ಮೆರವಣಿಗೆ ನಡೆಸಿದ್ದಾರೆ. ಆ ಮೂಲಕ ‘ದಿ ಡೆವಿಲ್’ (ದ ಡೆವಿಲ್) ಸಿನಿಮಾಗೆ ಭರ್ಜರಿ ಪ್ರಚಾರ. ಡಿಸೆಂಬರ್ 11 ರಂದು ಈ ಸಿನಿಮಾ ತೆರೆಕಾಣಲಿದೆ. ಸಿನಿಮಾದ ಬಿಡುಗಡೆಗೂ ಮುನ್ನವೇ ಫ್ಯಾನ್ಸ್ ಸೆಲೆಬ್ರೇಷನ್ ಜೋರಾಗಿದೆ. ಅದರ ಝಲಕ್ ಈ ವಿಡಿಯೋದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.