ಕೋಲಾರ, ಡಿಸೆಂಬರ್ 10: ತಾಯಿಗೆ ಮಲ ತಂದೆ ವಿಚ್ಛೇದನ (ವಿಚ್ಛೇದನ) ನೀಡಿದ್ದಕ್ಕೆ ನೊಂದು ಮಗ ಆತ್ಮಹತ್ಯೆಗೆ (ಆತ್ಮಹತ್ಯೆ) ಶರಣಾಗಿರುವಂತಹ ಘಟನೆ ಜಿಲ್ಲೆಯ ಮುಳಬಾಗಿಲು ನಗರದ ರೆಹಮತ್ ನಡೆದಿದೆ. ಅಫ್ನಾನ್ (25) ಮನೆಯಲ್ಲೇ ನೇಣಿಗೆ ಶರಣಾದ ಮಗ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ ಜಬೀನ್ ತಾಜ್ಗೆ ಮಲ ತಂದೆ ಅಕ್ಬರ್ ಆಲಿ ತಲಾಖ್ ಕೊಟ್ಟು ಬೇರೆ ಮದುವೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಅಫ್ನಾನ್ ಜೊತೆ ಗಲಾಟೆ ಮಾಡಿಕೊಂಡಿದ್ದ. ಇದರಿಂದ ಮನನೊಂದು ಮನೆಯಲ್ಲೇ ಅಫ್ನಾನ್ ನೇಣಿಗೆ ಶರಣಾಗಿದ್ದಾರೆ.
ಜಲ್ಲಿ ಕ್ರಷರ್ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು
ಚಿಕ್ಕಬಳ್ಳಾಪುರ ತಾಲೂಕಿನ ಯಲಗಲಹಳ್ಳಿ ಬಳಿ ಇರುವ ಪ್ರತಿಷ್ಠಿತ ಬೆಸ್ಟೋ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಜಲ್ಲಿ ಕ್ರಷರ್ ಯಂತ್ರಕ್ಕೆ ಸಿಲುಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಉದ್ಯಮಿ ಕಿಡ್ನ್ಯಾಪ್: 1 ಕೋಟಿ ರೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳ ಕೈಗೆ ಸಿಕ್ಕಿದ್ದು ಚಿಪ್ಪು
ಪಶ್ಶಿಮ ಬಂಗಾಳದ ಬಿಸ್ವಜಿತ್ ಬಗಡಿ (21) ಮೃತ ಕಾರ್ಮಿಕ. ಕ್ರಷರ್ ಯಂತ್ರ ಆಪರೇಟ್ ಮಾಡುವಾಗ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೆರೇಸಂದ್ರ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ: ಸಾವು, ಇಬ್ಬರಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿ ಟೈಲ್ಸ್ ತುಂಬಿದ್ದ ಲಾರಿ ಪಲ್ಟಿಯಾಗಿ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ಬಡವಬನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಾಹನದ ಸಿಟಿ ಫ್ಲೈ ಮೇಲೆ ಭೀಕರ ಅಪಘಾತ: ಬೈಕ್ ಸವಾರನಿಗೆ
ಘಟನೆಯಲ್ಲಿ ಬಸವನಹಳ್ಳಿಯ ರಂಗನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಗಸರಹೊಳೆಯ ಗಂಗಣ್ಣ ಹಾಗೂ ರಂಗನಾಥ್ ಅವರಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಳುಗಳನ್ನ ಮಧುಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.