ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಅವರ ಅನುಪಸ್ಥಿತಿಯಲ್ಲಿಯೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳೇ ಎಲ್ಲ ಕಡೆಗಳಲ್ಲಿ ಈ ಚಿತ್ರಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.
ಎಲ್ಲ ಚಿತ್ರಮಂದಿರಗಳನ್ನು ಸಿಂಗಾರ ಮಾಡಲಾಗಿದೆ. ಹಬ್ಬದ ರೀತಿಯಲ್ಲಿ ದರ್ಶನ್ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಪ್ರಕಾಶ್ ವೀರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
‘ಕಾಟೇರ’ ಸಿನಿಮಾದ ಸೂಪರ್ ಸಕ್ಸಸ್ ನಂತರ ದರ್ಶನ್ ಮಾಡಿದ ಸಿನಿಮಾ ‘ದಿ ಡೆವಿಲ್’. ಆ ಕಾರಣದಿಂದಲೂ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಮೂಡಿದೆ. ಆರಂಭದಿಂದಲೇ ಈ ಸಿನಿಮಾ ಹೈಪ್ ಸೃಷ್ಟಿಸಿತ್ತು.
ಮೊದಲ ದಿನದ ಎಲ್ಲ ಶೋಗಳು ಹೌಸ್ಫುಲ್ ಆಗಿವೆ. ಬೆಂಗಳೂರು, ಮೈಸೂರು ರಾಜ್ಯದಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಕೂಡ ‘ದಿ ಡೆವಿಲ್’ ಸಿನಿಮಾ ಹೌಸ್ ಫುಲ್ ಕಾಣಲಿದೆ.
ಒಂದು ವೇಳೆ ದರ್ಶನ್ ಅವರು ಹೊರಗೆ ಇದ್ದಿದ್ದರೆ ಸಂಭ್ರಮಾಚರಣೆ ಈ ಜೋರಾಗಿ ಇರುತ್ತಿದ್ದರು. ಸದ್ಯ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿ ಇದ್ದಾರೆ.




