ಬೆಂಗಳೂರು, ಡಿ.11: ಹೊಸ ವರ್ಷ (ಬೆಂಗಳೂರು ಹೊಸ ವರ್ಷದ ನಿಯಮಗಳು) ಬರದಿದ್ದಲ್ಲಿ ಹಾಜರಿದ್ದಾರೆ ಹೈ ಅಲರ್ಟ್ ಆಗಿದ್ದಾರೆ. ನಿನ್ನೆ (ಡಿ.10) ವಿವಿಧ ಇಲಾಖೆ ಜೊತೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಹತ್ವದ ಸಭೆ. ಈ ಸಭೆಯಲ್ಲಿ ಜಿಬಿಎ, ಅಬಕಾರಿ, ಶಾಮಕ, ಬಿಎಂಟಿಸಿ, ಮೆಟ್ರೋ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ. ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಹಾಗೂ ಹೊಸ ವರ್ಷದ ದಿನ ಯಾವೆಲ್ಲ ನಿಯಮಾವಳಿಗಳು ಎಂಬ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಇನ್ನು ಬೆಂಗಳೂರಿನಲ್ಲಿರುವ ಪಬ್, ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಕಠಿಣ ನಿಬಂಧನೆಗಳನ್ನು ಮಾಡಲಾಗಿದೆ.
ಹೊಸ ವರ್ಷದ ನಿಯಮಗಳೇನು?
ವರ್ಷಾಚರಣೆಗೆ ಪಬ್, ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಸ್ಟ್ರಿಕ್ಟ್ ರೂಲ್ಸ್ ಮಾಡಲಾಗಿದೆ. ಕೇವಲ ಒಂದು ಇಲಾಖೆಯಿಂದ ಅನುಮತಿ ಪಡೆದರೆ ಸಾಲದು, ಪೊಲೀಸ್, ಅಗ್ನಿಶಾಮಕ ಹಾಗೂ ಅಬಕಾರಿ ಈ ಮೂರು ಇಲಾಖೆಯಿಂದ ಅನುಮತಿ ಪಡೆದರೆ ಮಾತ್ರ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಈ ಮೂರರಲ್ಲಿ ಒಂದು ಇಲಾಖೆ ಅನುಮತಿ ನಿರಾಕರಿಸಿದರೆ ಹೊಸ ವರ್ಷದ ಸಂಭ್ರಮಕ್ಕೆ ಅನುಮತಿ ಸಿಗಲ್ಲ. ಇಂದಿನಿಂದ (ಡಿ.10) ಮೂರು ಇಲಾಖೆಗಳಿಂದ ಹೋಟೆಲ್, ರೆಸ್ಟೋರೆಂಟ್ ಮತ್ತು ಪಬ್ಗಳ ಪರಿಶೀಲನೆ ನಡೆಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಡಿಸಿಪಿಗಳು, ಅಬಕಾರಿ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿ ಪಬ್, ಹೋಟೆಲ್, ರೆಸ್ಟೋರೆಂಟ್ ಪರಿಶೀಲನೆ ಮಾಡಲಾಗುತ್ತಿದೆ. ನಗರದ ಎಲ್ಲಾ ಪಬ್ ಮತ್ತು ಪಾರ್ಟಿ ಸ್ಥಳಗಳಲ್ಲಿ ಪರಿಶೀಲನೆ ಮಾಡಲು ಆದೇಶವನ್ನು ನೀಡಲಾಗುತ್ತದೆ. ಈ ವೇಳೆ ಅಧಿಕಾರಿಗಳು ಪಬ್, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಥವಾ ಸಮಸ್ಯೆ ಕಂಡು ಬಂದರೆ, 10 ದಿನದೊಳಗೆ ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು. ಒಂದು ವೇಳೆ ಸರಿಪಡಿಸಿಕೊಳ್ಳಲಾಗಿದೆ, ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಗೋವಾ ಪಬ್ ದುರಂತದ ಬೆನ್ನಲ್ಲೇ ಪಬ್ಗಳಿಗೆ ಖಡಕ್ ಸೂಚನೆ
ಗೋವಾದಲ್ಲಿ ಪಬ್ನಲ್ಲಿ ನಡೆದ ಬೆಂಕಿ ದುರಂತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪಬ್‌ಗಳ ಫೈರ್ ಸೇಫ್ಟಿ ಬಗ್ಗೆಯೂ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಲಿದ್ದಾರೆ. ಇದರೊಂದಿಗೆ ಪಬ್‌ಗಳಲ್ಲಿರುವ ಎಂಟ್ರಿ ಎಕ್ಸಿಟ್ ಡೋರ್‌ಗಳ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ. ಪಬ್‌ಗಳಲ್ಲಿ ಫೈರ್ ಎಮರ್ಜೆನ್ಸಿ ಸಿಲಿಂಡರ್ ಅಳವಡಿಕೆ ಆಗಿದ್ಯಾ ಎಂದು ಕೂಡ ನೋಡುತ್ತಾರೆ. ಇನ್ನು ಅಂಬಾಕಾರಿ ಅಧಿಕಾರಿಗಳು ಕೂಡ ಪಬ್‌ಗಳಲ್ಲಿ ನಕಲಿ ಮದ್ಯ ಮಾರಾಟದ ಮೇಲೆಯೂ ನಿಗಾ ಇಡಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬರೋಬ್ಬರಿ 1.28 ಕೋಟಿ ವಾಹನ ನೋಂದಣಿ: 1.50 ಕೋಟಿ ವಾಹನ ಸಂಚಾರ!
ಈ ಬಾರಿ ಡ್ರಗ್ಸ್ ಮುಕ್ತ ಹೊಸ ವರ್ಷ ಆಚರಣೆ
ಈ ಬಾರಿ ಡ್ರಗ್ಸ್ ಹೊಸ ವರ್ಷದ ಆಚರಣೆ ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ. ಯಾವುದೇ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರಕ್ಕೆ ಬರುತ್ತಿರುವ ಡ್ರಗ್ಸ್ ಪತ್ತೆ ಮಾಡಲಾಗಿದೆ. ಯಾವ ರೂಪದಲ್ಲೂ ಡ್ರಗ್ಸ್ ಬಳಸದಂತೆ ತಡೆಯಬೇಕು ಎಂದು ಸೂಚನೆ ನೀಡಲಾಗಿದೆ. ಇದರೊಂದಿಗೆ ಈ ಬಾರಿ ರೂಫ್ ಟಾಪ್ ಮೇಲೆ ಪಾರ್ಟಿ ನಡೆಸಲು ಯಾವುದೇ ಅವಕಾಶವಿಲ್ಲ. ಸೆಲಬ್ರೇಷನ್, ಡ್ಯಾನ್ಸಿಂಗ್ ಫ್ಲೋರ್ ಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಲೇಬೇಕು ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ