ಮುಂದುವರಿದ ‘ಧುರಂಧರ್’ ಅಬ್ಬರ; ‘ಟಾಕ್ಸಿಕ್’​ ಚಿತ್ರಕ್ಕೆ ಸಿಗಲಿದೆ ಟಫ್ ಫೈಟ್

ಮುಂದುವರಿದ ‘ಧುರಂಧರ್’ ಅಬ್ಬರ; ‘ಟಾಕ್ಸಿಕ್’​ ಚಿತ್ರಕ್ಕೆ ಸಿಗಲಿದೆ ಟಫ್ ಫೈಟ್


‘ಧುರಂಧರ’ ಸಿನಿಮಾದ ಅಬ್ಬರ ಮುಂದುವರಿದಿದೆ. ಸಿನಿಮಾಗೆ ಪಾಸಿಟಿವ್ ವಿಮರ್ಶೆ ಸಿಕ್ಕ ಸಿಕ್ಕ ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಾರದ ದಿನದಲ್ಲಿ ಒಳ್ಳೆಯ ಚಿತ್ರ ಕಲೆಕ್ಷನ್ ಮಾಡಿದೆ. ಸಿನಿಮಾ ಬುಧವಾರ (ಡಿಸೆಂಬರ್ 10) 27 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ‘ಧುರಂಧರ’ ಸೀಕ್ವೆಲ್ ಬಗ್ಗೆಯೂ ನಿರೀಕ್ಷೆ ಮೂಡಿದ್ದು, ‘ಟಾಕ್ಸಿಕ್’ ಚಿತ್ರಕ್ಕೆ ಟಫ್ ಫೈಟ್ ಸಿಗಲಿದೆ.

‘ಧುರಂಧರ’ ಸಿನಿಮಾ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಪ್ರಮುಖವಾಗಿ ರಣವೀರ್ ಸಿಂಗ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರ ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ಅವರ ಆ್ಯಕ್ಷನ್ ದೈವವನ್ನು ಟೀಕಿಸಿದಂತೆ ಇತ್ತು. ಇದರಿಂದ ರಣವೀರ್ ಸಿಂಗ್ ಚಿತ್ರಕ್ಕೆ ಹಿನ್ನಡೆ ಆಗಲಿದೆ ಎಂದು ಹೇಳಲಾಗಿದೆ. ಆದರೆ, ಅದು ಸುಳ್ಳಾಗಿತ್ತು. ಈಗ ಧುರಂಧರ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

ಡಿಸೆಂಬರ್ 9 ರಿಂದ ಸಿನಿಮಾ 153 ಕೋಟಿ ರೂಪಾಯಿ ಗಳಿಸಿತ್ತು. ಈಗ ಬುಧವಾರ ಸಿನಿಮಾ ಅಬ್ಬರಿಸಿದೆ. ಈ ಚಿತ್ರ 27 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟು ಕಲೆಕ್ಷನ್ 180 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾ ಇಂದೇ (ಡಿಸೆಂಬರ್ 11) ಒಳ್ಳೆಯ ಕಲೆಕ್ಷನ್ ಮಾಡಿ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇದನ್ನೂ ಓದಿ: ಊಹೆಗೂ ಮೀರಿ ಧುರಂಧರ ಕಲೆಕ್ಷನ್; ಸೋಮವಾರದಿಂದ ಮಂಗಳವಾರದ ಗಳಿಗೆ ಜೋರು

ಟಾಕ್ಸಿಕ್ ಜೊತೆ ಫೈಟ್

‘ಟಾಕ್ಸಿಕ್’ ಸಿನಿಮಾ 2026ರ ಮಾರ್ಚ್ 19 ರಂದು ರಿಲೀಸ್ ಆಗುತ್ತಿದೆ. ಇದು ಯಶ್ ನಟನೆಯ ಚಿತ್ರ. ಹೀಗಾಗಿ, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾಗೆ ‘ಧುರಂಧರ 2’ ಫೈಟ್ ಕೊಡಲಿದೆ. ‘ಧುರಂಧರ’ ಚಿತ್ರದ ಕಥೆ ಮುಂದುವರಿಯಲಿದೆ. ಎರಡನೇ ಪಾರ್ಟ್ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದೆ ಎಂದು ತಂಡ ಘೋಷಿಸಿದೆ. ಹೀಗಾಗಿ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *