Devil Twitter Review: ‘ನಾವು ಗೆದ್ವಿ’; ‘ಡೆವಿಲ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

Devil Twitter Review: ‘ನಾವು ಗೆದ್ವಿ’; ‘ಡೆವಿಲ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್


ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇಂದು (ಡಿಸೆಂಬರ್ 11) ರಿಲೀಸ್ ಆಗಿ ಅಬ್ಬರಿಸುತ್ತಿದೆ. ಏಕಪರದೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಹುತೇಕ ಕಡೆಗಳಲ್ಲಿ ಮುಂಜಾನೆ 6.30ಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೊದಲ ಶೋ ನೋಡಿ ಬಂದ ಅಭಿಮಾನಿಗಳು ತಮ್ಮ ವಿಮರ್ಶೆಯನ್ನು ತಿಳಿಸುತ್ತಿದ್ದಾರೆ. ಸಿನಿಮಾ ಹೇಗಿದೆ ಎಂದು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದಾರೆ. ಇತ್ತ ಅವರ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಮಾಸ್ ಡೈಲಾಗ್, ಟ್ವಿಸ್ಟ್‌ಗಳನ್ನು ಒಳಗೊಂಡ ಕಥೆಗಳ ಮೂಲಕ ಅಭಿಮಾನಿಗಳಿಗೆ ಮಿಲನ ಪ್ರಕಾಶ್ ಖುಷಿ ನೀಡಿದ್ದಾರೆ. ಈ ಚಿತ್ರವನ್ನು ಅಭಿಮಾನಿಗಳು ಹೆಚ್ಚು ಖುಷಿಯಿಂದ ನೋಡುತ್ತಿದ್ದಾರೆ. ‘ನಾವು ಗೆದ್ವಿ’ ಎಂದು ಎಲ್ಲರೂ ಹಾಕಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮರುಕಳಿಸಿದ ಇತಿಹಾಸ; ದರ್ಶನ್ ಇಲ್ಲದೆ ರಿಲೀಸ್ ಆಗಿರುವ ಸಾರಥಿ ಸಿನಿಮಾ

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಅಭಿಮಾನಿಗಳ ಜೊತೆ ಫ್ಯಾಮಿಲಿ ಅಡಿಯನ್ಸ್‌ಗೂ ಇಷ್ಟವಾಗಿದೆ. ‘ಡೆವಿಲ್’ ಕೂಡ ಇದೆ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ‘ಫ್ಯಾನ್ಸ್ ಗೂ ಜೈ, ಫ್ಯಾಮಿಲಿ ಆಡಿಯನ್ಸ್ ಗೂ ಜೈ’ ಎಂದು ಫ್ಯಾನ್ಸ್ ಬರೆದುಕೊಂಡಿದ್ದಾರೆ. ದರ್ಶನ್ ಎಂಟ್ರಿ, ಅವರ ನಟನೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಆರಂಭಿಕ ನೋಡಿದರೆ ದರ್ಶನ್ ಅಭಿಮಾನಿಗಳಿಗೆ ಈ ಹಬ್ಬದ ವಿಮರ್ಶೆಯ ರೀತಿ ಕಾಣಿಸುತ್ತಿದೆ.

ದರ್ಶನ್ ಅವರಿಗೆ ಈ ಗೆಲುವು ತುಂಬಾನೇ ಮುಖ್ಯವಾಗಿತ್ತು. ಅವರು ಜೈಲಿನಲ್ಲಿ ಇರುವಾಗ ಸಿನಿಮಾ ರಿಲೀಸ್ ಆಗಿದ್ದು ಪ್ರಚಾರದ ದೊಡ್ಡ ಚಾಲೆಂಜ್ ಆಗುತ್ತಿದೆ. ಆದರೆ, ಅಭಿಮಾನಿಗಳು ಮುಂದೆ ನಿಂತು ಸಿನಿಮಾಗೆ ಪ್ರಚಾರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *