ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಅಥವಾ ಒಗಟನ್ನು ಬಿಡಿಸುವಂತಹ ಕೆಲವು ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಇಂತಹ ಸಮಸ್ಯೆಗಳನ್ನು ಬಿಡಿಸಲು ಇಷ್ಟ ಪಡುತ್ತಾರೆ. ಆದರೆ ಟ್ರಿಕ್ಕಿ ಒಗಟುಗಳು ಮೆದುಳಿಗೆ ಬುದ್ಧಿವಂತಿಕೆಗೂ ಸವಾಲು ಎಸಗುತ್ತದೆ. ಆದರೆ ಇದೀಗ ವೈರಲ್ ಆಗಿರುವ ಒಗಟಿನ ಚಿತ್ರ ಖಂಡಿತವಾಗಿ ಕಂಡರೂ ಉತ್ತರವನ್ನು ಹುಡುಕಲು ತಲೆ ಖರ್ಚು ಮಾಡಬೇಕಾಗಿದೆ. ಇಲ್ಲಿ ಉದ್ಯಾನವನವೊಂದಿದ್ದು, ಇದರಲ್ಲಿ ಅಡಗಿ ಕುಳಿತಿರುವ ಆನೆಯನ್ನು (ಆನೆ) ಹುಡುಕುವ ಸವಾಲು ನಿಮ್ಮ ಮುಂದಿದೆ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.
ಉದ್ಯಾನವನದ ಚಿತ್ರ ಏನು ಹೇಳುತ್ತದೆ?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸುಲಭವಾಗಿ ಕಂಡರೂ ಇಂತಹ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಹಸಿರಾದ ಉದ್ಯಾನವನ ಕಾಣಿಸುತ್ತದೆ. ಈ ಗಾರ್ಡನ್ ನಲ್ಲಿ ಕುಟುಂಬಗಳು ಸಮಯ ಕಳೆಯುತ್ತಿದೆ. ಮಕ್ಕಳು ಆಟ ಆಡುತ್ತಿರುವುದನ್ನು ನೋಡಬಹುದು. ಈಸ್ ಕ್ಯಾಂಡಿ ಮಾರುವ ವ್ಯಕ್ತಿಯೂ ಸೈಕಲ್ ತುಳಿಯುತ್ತಾ ಹೋಗುತ್ತಿದ್ದರು, ಅಲ್ಲಲ್ಲಿ ಶ್ವಾನಗಳಿವೆ. ಈ ಎಲ್ಲದರ ನಡುವೆ ಆನೆಯೊಂದು ಅಡಗಿದೆ. ಈ ದೈತ್ಯ ಪ್ರಾಣಿಯನ್ನು 20 ಸೆಕೆಂಡುಗಳೊಳಗೆ ಹುಡುಕಿ ನಿಮ್ಮ ವೀಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸಿ.
ಇದನ್ನೂ ಓದಿ: ಕ್ರಿಸ್‌ಮಸ್ ಟ್ರೀ ನಡುವೆ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಗುರುತಿಸಲು ನಿಮ್ಮಿಂದ ಸಾಧ್ಯವೇ?
ಆನೆ ನಿಮ್ಮ ಕಣ್ಣಿಗೆ ಕಾಣಿಸಿತೇ?
ಈ ಒಗಟಿನ ಉತ್ತರವು ಕಣ್ಣಿಗೆ ಕಾಣದಂತೆ ಅಡಗಿದ್ದು, ನೀವು ಒಮ್ಮೆ ನೋಡಿದ ಕೂಡಲೇ ಆನೆ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಬೇರೆಡೆ ಗಮನ ಹರಿಸದೆ ಆನೆ ಎಲ್ಲಿದೆ ಎಂದು ಹುಡುಕಬೇಕು. ಎಷ್ಟು ತಲೆ ಕೆಡಿಸಿಕೊಂಡರೂ ಈ ಪ್ರಾಣಿ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ಹಳದಿ ಬಣ್ಣದಲ್ಲಿ ಆನೆ ಎಲ್ಲಿದೆ ಎಂದು ಗುರುತಿಸಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:29 am, ಗುರು, 11 ಡಿಸೆಂಬರ್ 25