Libra Yearly Horoscope 2026: 2026 ತುಲಾ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ

Libra Yearly Horoscope 2026: 2026 ತುಲಾ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ


2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮ ರಾಶಿಗೆ 6ನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 9ನೇ ಮನೆ, ಅಂದರೆ ಅದೃಷ್ಟ- ಪಿತೃ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31 ರಂದು ತಾರೀಕಿನವರೆಗೆ ಕರ್ಮ ಸ್ಥಾನ, ಅಂದರೆ 10ನೇ ಮನೆಯಲ್ಲಿ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಮತ್ತು ಈ ಡಿಸೆಂಬರ್ ಎರಡೂ ತಿಂಗಳು, ಲಾಭ ಸ್ಥಾನ ಅಂದರೆ 11ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 5ನೇ ಮನೆಯಲ್ಲಿ ಆಗುವಂಥ ಕುಂಭದಲ್ಲಿ ಹಾಗೂ ಕೇತು ಗ್ರಹವು 11ನೇ ಮನೆಯಲ್ಲಿ ಅಂದರೆ ಲಾಭದ ಸ್ಥಾನದಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು 4ನೇ ಮನೆಯಲ್ಲಿ ಮಕರ ರಾಶಿ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 10ನೇ ಮನೆಗೂ ಪ್ರವೇಶಿಸುತ್ತದೆ.

ಚಿತ್ತಾ ನಕ್ಷತ್ರ ಮೂರು, ನಾಲ್ಕನೇ ಪಾದ, ಸ್ವಾತಿ ನಕ್ಷತ್ರದ ನಾಲ್ಕೂ ಪಾದ, ವಿಶಾಖ ನಕ್ಷತ್ರದ ಒಂದು, ಎರಡನೇ ಪಾದ ಸೇರಿ ತುಲಾ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಶುಕ್ರ.

ತುಲಾ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:

ಶನಿ ಗೋಚಾರ:

ಇಡೀ ವರ್ಷ ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಶನಿ ಗ್ರಹದ ಸಂಚಾರ ಆಗುತ್ತದೆ. ನಿಮ್ಮ ರಾಶಿಗೆ ಸುಖ ಸ್ಥಾನ ಹಾಗೂ ಪೂರ್ವಪುಣ್ಯ- ಸಂತಾನ ಸ್ಥಾನದ ಅಧಿಪತಿಯಾದ ಶನೈಶ್ಚರನು ಆರನೇ ಸ್ಥಾನದಲ್ಲಿ ಸಂಚಾರ ಮಾಡುವುದರಿಂದ ಹಲವು ರೀತಿಯ ಶುಭ ಫಲಗಳು ಅನುಭವಕ್ಕೆ ಬರಲಿವೆ. ಕಟ್ಟಿಸಿದ ಮನೆಗಳನ್ನು ಖರೀದಿಸಬಹುದು, ಫಾರ್ಮ್ ಹೌಸ್ ಅನ್ನು ಸ್ನೇಹಿತರ ಜೊತೆಗೆ ಕೊಳ್ಳಬೇಕು ಎಂದಿದ್ದಲ್ಲಿ ಮತ್ತು ಜಮೀನು ಇದ್ದು, ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಹಿಂದೆ ನೀವು ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎಂದಾಗ ಅದು ಕೂಡ ಈ ಅವಧಿಯಲ್ಲಿ ದೊರೆಯಲಿದೆ. ಸೆಕೆಂಡ್ ಹ್ಯಾಂಡ್ ವಿಲಾಸಿ ಕಾರು- ಸೂಪರ್ ಬೈಕ್ ಗಳನ್ನು ಖರೀದಿಸುವಿರಿ. ಮಕ್ಕಳ ಜೊತೆಗೆ ಮನಸ್ತಾಪ ಇದ್ದಲ್ಲಿ ಅದನ್ನು ದೂರ ಮಾಡಿಕೊಳ್ಳಿ, ಸಂಬಂಧ ಸುಧಾರಿಸಲು ಸಾಧ್ಯ. ಹಣಕಾಸಿನ ಹರಿವು ಇರುತ್ತದೆ. ಆದರೆ ಸ್ವಲ್ಪ ಮಟ್ಟಿಗೆ ನಿಧಾನವಾಗಿ ಕೈ ಸೇರುತ್ತದೆ. ನಿಮ್ಮ ಜೊತೆಗೆ ವೈರತ್ವ ಕಟ್ಟಿಕೊಂಡವರು ತಾವಾಗಿಯೇ ಸಂಧಾನಕ್ಕೆ ಬರಲಿದ್ದಾರೆ. ತೀವ್ರವಾದ ಅನಾರೋಗ್ಯ ಸಮಸ್ಯೆ ಎದುರಿಸುತ್ತಾ ಇದ್ದಲ್ಲಿ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಕೋರ್ಟ್-ಕಚೇರಿ ವ್ಯಾಜ್ಯಗಳು ಇದ್ದಲ್ಲಿ ಅದರ ಆದೇಶ/ತೀರ್ಪು ನಿಮ್ಮ ಪರವಾಗಿ- ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಬರಲಿದೆ. ಮನೆಯ ರಿನೊವೇಷನ್ ಮಾಡಿಸಬೇಕು ಎಂದುಕೊಳ್ಳುತ್ತಾ ಇರುವವರು ಈ ಸಮಯದಲ್ಲಿ ಮಾಡಿ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಅದರಲ್ಲೂ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಾ ಇದ್ದಲ್ಲಿ ಸೂಕ್ತ ವೈದ್ಯೋಪಚಾರ ಮಾಡಿಸುವುದಕ್ಕೆ ಆದ್ಯತೆಯನ್ನು ನೀಡಿ.

ಗುರು ಗ್ರಹ ಗೋಚಾರ:

ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಒಂಬತ್ತನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಶಿಕ್ಷಣ- ಸಂಶೋಧನೆ- ವಿಜ್ಞಾನ- ಯೋಜನಾ ವಿಭಾಗ ಇಂಥ ಕಡೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಖ್ಯಾತಿ, ಹಣ ಹಾಗೂ ಹುದ್ದೆ- ಸ್ಥಾನಮಾನಗಳು ಸಿಗಲಿವೆ. ಕುಟುಂಬದ ವ್ಯವಹಾರ- ಉದ್ಯಮವನ್ನೇ ಮುನ್ನಡೆಸಿಕೊಂಡು ಬರುತ್ತಾ ಇರುವವರಿಗೆ ಆದಾಯ ಮತ್ತು ಆದಾಯದ ಮೂಲಗಳು ಹೆಚ್ಚಾಗಲಿವೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಬಗೆಹರಿಯಲಿವೆ. ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಮ್ಮ ಆಲೋಚನೆಯಲ್ಲಿ ವೇಗ ಮತ್ತು ನಿರ್ಧಾರಗಳಲ್ಲಿ ನಿಖರತೆ ಇರುತ್ತದೆ. ಕೆಲಸ- ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಾ ಇದ್ದವರು ತಾವಾಗಿಯೇ ನಿಮ್ಮ ದಾರಿಯಿಂದ ದೂರ ಸರಿಯಲಿದ್ದಾರೆ. ಮದುವೆ- ಮಕ್ಕಳು ಈ ವಿಚಾರಗಳಿಗೆ ಸಂತೋಷದ ಬೆಳವಣಿಗೆಗಳು ಆಗಲಿವೆ. ಜೂನ್ ಒಂದರಿಂದ ಅಕ್ಟೋಬರ್ ತಿಂಗಳ ಕೊನೆ ತನಕ ಹತ್ತನೇ ಮನೆಯಲ್ಲಿ ಗುರು ಸಂಚಾರ ಇರುತ್ತದೆ. ಈ ಅವಧಿಯಲ್ಲಿ ಮಿಶ್ರ ಫಲ ಅನುಭವಕ್ಕೆ ಬರಲಿದೆ. ಉದ್ಯೋಗ- ವೃತ್ತಿಯಲ್ಲಿ ಖ್ಯಾತಿ ಹಾಗೂ ನಿಮ್ಮ ಬಗ್ಗೆ ಅಪಪ್ರಚಾರ ಎರಡೂ ಆಗಲಿದೆ. ಸಂಬಂಧದಲ್ಲಿ ಮನಸ್ತಾಪ, ನೀವಾಗಿಯೇ ಕಾಯ್ದುಕೊಳ್ಳುವುದು ಈ ರೀತಿ ಬೆಳವಣಿಗೆಗಳು ಆಗಲಿವೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜನೆ ಮಾಡಲಾಗಿದೆ. ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ವ್ಯವಹಾರಸ್ಥರು- ವ್ಯಾಪಾರಸ್ಥರು ಲಾಭದ ಪ್ರಮಾಣದಲ್ಲಿ ಏರಿಕೆಯಾಗಲಿದೆ. ವಿಲಾಸಿ ಫ್ಲ್ಯಾಟ್, ಕಾರು, ವಜ್ರಾಭರಣಗಳನ್ನು ಖರೀದಿಸುವ ಯೋಗ ಇದೆ. ಮದುವೆ, ಸಂತಾನ ಇತ್ಯಾದಿ ವಿಚಾರಗಳಿಗೆ ಶುಭ ಸಮಯ ಇರುತ್ತದೆ.

ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ

ರಾಹು-ಕೇತು ಗೋಚಾರ:

ಐದನೇ ಮನೆಯಲ್ಲಿ ರಾಹು ಸಂಚಾರ ಆಗುವುದರಿಂದ ಮಕ್ಕಳ ಆರೋಗ್ಯ, ಶಿಕ್ಷಣ, ಮದುವೆ ಈ ವಿಚಾರಗಳು ನಿಮ್ಮ ಚಿಂತೆಗೆ ಕಾರಣ ಆಗಲಿದೆ. ಆತುರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಹಣ- ಗೌರವಕ್ಕೆ ಹಾನಿ. ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗೆ ಏನು ಮಾಡಿದರೂ ಪರಿಹಾರವೇ ಸಿಗದಂಥ ಸನ್ನಿವೇಶ ಎದುರಾಗುತ್ತದೆ. ಜೂಜು- ಸಟ್ಟಾ ವ್ಯವಹಾರ, ಷೇರು ಡೇ ಟ್ರೇಡಿಂಗ್ ಮಾಡುವವರು ಹಣ ಹಾಕುವ ವಿಚಾರಕ್ಕೆ ನಿಯಂತ್ರಣದಲ್ಲಿರಬೇಕು. ಏಕಾಗ್ರತೆಯಿಂದ ಓದಿಕೊಳ್ಳುವುದು ಬಹಳ ಕಷ್ಟದ ಕೆಲಸ. ಮುಖ್ಯವಾದ ಕಾರಣ ಏನೆಂದರೆ ಪ್ರವಾಸ, ಪಾರ್ಟಿಗಳು, ಸಮಾರಂಭಗಳಲ್ಲಿ ಭಾಗೀ ಆಗುವುದು ಇಂಥದ್ದೇ ಸುತ್ತಾಟದಲ್ಲಿ ಹೆಚ್ಚಿನ ಸಮಯ ಕಳೆದುಹೋಗಲಿದೆ. ಉದ್ಯೋಗ ಕೆಲವು ಸ್ಥಳದಲ್ಲಿ ನಿಮಗೆ ಮಾನಸಿಕ ಖಿನ್ನತೆ ತರಲಿದೆ. ನಿಮಗಿಂತ ಹಿರಿಯ ಸ್ಥಾನದಲ್ಲಿ ಇರುವವರು ಆಡುವಂಥ ಮಾತುಗಳಿಂದ ಬೇಸರ ಆಗಲಿದೆ. ನಿಮ್ಮ ಏಳ್ಗೆ, ಶ್ರೇಯಸ್ಸು ಸಹಿಸಲು ಸಾಧ್ಯವಾಗದೆ ಕೆಲವು ದೂರುಗಳನ್ನು ನೀಡಲಾಗಿದೆ. ನಿಮಗೆ ಇದರಿಂದ ತೊಂದರೆ ಅಂತೇನೂ ಆಗದಿದ್ದರೂ ಮಾನಸಿಕವಾಗಿ ಕಿರಿಕಿರಿ ಇರಲಿದೆ. ಕುಟುಂಬದಲ್ಲಿನ ಹಿರಿಯ ಸದಸ್ಯರ ಆರೋಗ್ಯ ಸಮಸ್ಯೆ ಆತಂಕಕ್ಕೆ ಕಾರಣವಾಗಿದೆ.

ಪರಿಹಾರ: ಗಣಪತಿ, ದುರ್ಗಾದೇವಿ ಆರಾಧನೆಯನ್ನು ಮಾಡಿಕೊಳ್ಳಿ.

ರಂದು ಪ್ರಕಟಿಸಲಾಗಿದೆ – 1:45 pm, ಗುರು, 11 ಡಿಸೆಂಬರ್ 25



Source link

Leave a Reply

Your email address will not be published. Required fields are marked *