ಬಾತ್​ರೂಮ್​ನಲ್ಲಿ ಮಗನನ್ನು ಕೂಡಿ ಹಾಕಿ, ಖಾರದ ಪುಡಿ ಎರಚಿ ತಂದೆಯಿಂದ ಚಿತ್ರಹಿಂಸೆ

ಬಾತ್​ರೂಮ್​ನಲ್ಲಿ ಮಗನನ್ನು ಕೂಡಿ ಹಾಕಿ, ಖಾರದ ಪುಡಿ ಎರಚಿ ತಂದೆಯಿಂದ ಚಿತ್ರಹಿಂಸೆ


ಬಾತ್​ರೂಮ್​ನಲ್ಲಿ ಮಗನನ್ನು ಕೂಡಿ ಹಾಕಿ, ಖಾರದ ಪುಡಿ ಎರಚಿ ತಂದೆಯಿಂದ ಚಿತ್ರಹಿಂಸೆ

ಕುಮಟಾ, ಡಿ.11: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ 7 ವರ್ಷದ ಬಾಲಕನಿಗೆ ತಂದೆ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಅಂಗೈ ಮೇಲೆ ಸುಟ್ಟ ಗುರುತುಗಳಿವೆ. ತಂದೆ ವಿಜಯ್ ನಾಯ್ಕ ತನ್ನ ಏಳು ವರ್ಷದ ಮಗನಿಗೆ ಮನಸೋ ಇಚ್ಛೆ ಥಳಿಸಿದ್ದಾನೆ. ಜೊತೆಗೆ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ, ಬಾತ್‌ರೂಮ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಹೇಳಿದ್ದಾರೆ. 13 ವರ್ಷಗಳ ಹಿಂದೆ ಚಿತ್ರ ಎಂಬುವವರನ್ನು ವಿವಾಹವಾಗಿದ್ದರು, ಕೆಲವು ವರ್ಷಗಳ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಕೋರ್ಟ್ ಆದೇಶದಂತೆ ವಿಜಯ್ ಮಕ್ಕಳನ್ನ ನೋಡಿಕೊಳ್ಳುತ್ತಿದ್ದ, ಜೊತೆಗೆ ಮನೆಯಲ್ಲಿ ಒಬ್ಬ ಮಹಿಳೆಯನ್ನು ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ. ಪ್ರತಿದಿನ ಮಾಜಿ ಪತ್ನಿಯ ಕೋಪದಲ್ಲಿ ಮಕ್ಕಳಿಗೆ ಹೊಡೆಯುತ್ತಿದ್ದ ಎಂದು ಹೇಳಲಾಗಿದೆ. ಇದೀಗ ಮಗನನ್ನು ಆಸ್ಪತ್ರೆ ಸೇರಿಸಿದ್ದಾರೆ, ತಾಯಿ ಚಿತ್ರಾ ನಾಯ್ಕ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *