ಜೈಲಿನಲ್ಲಿ ದರ್ಶನ್​​ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ

ಜೈಲಿನಲ್ಲಿ ದರ್ಶನ್​​ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ


ನಟ ದರ್ಶನ್ (ದರ್ಶನ್), ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್, ನ್ಯಾಯಾಲಯಕ್ಕೆ ತಿಳಿಸುವಂತೆ ಅವರು ಜೈಲಿನಲ್ಲಿ ಸಾಕಷ್ಟು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಈ ಹಿಂದೆ ಹಾಸಿಗು, ದಿಂಬು, ಬಾಚಣಿಗೆ, ಕನ್ನಡಿ ಈ ಕೆಲವು ವಸ್ತುಗಳನ್ನು ಕೊಡಿಸುವಂತೆ, ಬ್ಯಾರಕ್ ಬದಲಾಯಿಸುವಂತೆ, ವಾಕಿಂಗ್‌ಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದೇನೆ. ಜೈಲಿನಲ್ಲಿ ವ್ಯವಸ್ಥೆಗಳು ಸರಿಯಿಲ್ಲವೆಂದು ದೂರು ಸಹ ನೀಡಿದ್ದರು. ಈ ಬಗ್ಗೆ ಹಲವು ದಿನಗಳ ವಿಚಾರಣೆ ನಡೆದ ಬಳಿಕ ದರ್ಶನ್ ಗೆ ಕೆಲವು ಸವಲತ್ತುಗಳು ಸಿಕ್ಕಿವೆ. ಇದೀಗ ದರ್ಶನ್ ಬ್ಯಾರಕ್ ಗೆ ಟಿವಿ ಸಹ ಅಳವಡಿಸಲಾಗಿದೆ.

ದರ್ಶನ್ ಅವರು ಟಿವಿ ನೀಡುವಂತೆ ಕೇಳಿದ್ದರು, ಅದರಂತೆ ಈಗ ದರ್ಶನ್ ಇರುವ ಬ್ಯಾರಕ್‌ಗೆ ಟಿವಿ ನೀಡಿದರು. ದರ್ಶನ್ ಬೇಡಿಕೆಯಂತೆ ಟಿವಿ ಬಂದಿದೆಯಾದರೂ ದರ್ಶನ್ ಅವರಿಗೆ ಬೇಕಾದ್ದು ಸಿಕ್ಕಿಲ್ಲ. ದರ್ಶನ್‌ಗೆ ನೀಡಲಾದ ಟಿವಿಯಲ್ಲಿ ಕೇವಲ ಮನೋರಂಜನಾ ಚಾನೆಲ್‌ಗಳು ಮಾತ್ರ ಪ್ರಸಾರ ಆಗುವಂತೆ ಜೈಲು ಸಿಬ್ಬಂದಿ ಬದಲಾವಣೆ ಮಾಡಿದ್ದಾರೆ. ದರ್ಶನ್‌ಗೆ ನೀಡಲಾದ ಟಿವಿಯಲ್ಲಿ ಯಾವುದೇ ನ್ಯೂಸ್ ಚಾನೆಲ್ ಬರುತ್ತಿಲ್ಲ. ಹೊರಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ದರ್ಶನ್ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ:ದಿ ಡೆವಿಲ್ ಮೂವೀ ರಿವ್ಯೂ: ‘ದಿ ಡೆವಿಲ್’ ರಾಜಕೀಯ ಸಮರದಲ್ಲಿ ದರ್ಶನ್ ವರ್ಸಸ್ ದರ್ಶನ್

‘ಡೆವಿಲ್’ ಸಿನಿಮಾ ಬಿಡುಗಡೆ ಅಪ್ಡೇಟ್ಸ್ ಸೇರಿದಂತೆ ಇತರೆ ವಿಷಯಗಳು ಸಹ ದರ್ಶನ್ ಅವರನ್ನು ಸದ್ಯಕ್ಕೆ ತಲುಪುತ್ತಿಲ್ಲ. ಇದು ಖಂಡಿತವಾಗಿಯೂ ದರ್ಶನ್‌ಗೆ ಬೇಸರ ತಂದಿರಲಿಕ್ಕೆ. ದರ್ಶನ್ ಪ್ರಸ್ತುತ ಕೇವಲ ಮನೋರಂಜನಾ ಚಾನೆಲ್‌ಗಳನ್ನು ಮಾತ್ರವೇ ನೋಡಬೇಕಾಗಿದೆ. ಹಾಡುಗಳು, ಸಿನಿಮಾ, ಧಾರಾವಾಹಿಗಳು ಮಾತ್ರವೇ ನೋಡಬೇಕಿದೆ. ‘ಡೆವಿಲ್’ ಸಿನಿಮಾದ ರಿಲೀಸ್ ಮತ್ತು ಸಿನಿಮಾಕ್ಕೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ನೋಡುವ ತವಕ ದರ್ಶನ್ ಗೆ ಇದ್ದಂತಿತ್ತು, ಆದರೆ ಜೈಲು ಸಿಬ್ಬಂದಿಯ ಕಠಿಣ ನಿಯಮದಿಂದಾಗಿ ಅದು ತಪ್ಪಾಗಿದೆ.

ದರ್ಶನ್ ಅವರು ತಮಗೆ ಜೈಲಿನಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಈ ಹಿಂದೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಒಂದು ಘಟನೆಯಲ್ಲಂತೂ ನನಗೆ ಇಲ್ಲಿ ಇರಲು ಆಗುತ್ತಿಲ್ಲ ‘ನನಗೆ ವಿಷ ಕೊಟ್ಟುಬಿಡಿ’ ಎಂದು ಸಹ ನ್ಯಾಯಾಧೀಶರ ಬಳಿ ಕೇಳಿ ಕೊಂಡಿದ್ದರು. ದರ್ಶನ್ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಜೈಲಿಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಂಡ ಕಳಿಸಿ ವೀಕ್ಷಣೆ ನಡೆಸಿ ವರದಿ ತರಿಸಿಕೊಂಡಿತ್ತು. ಬಳಿಕ ದರ್ಶನ್ ಮನವಿ ಮಾಡಿದ ಸೌಲಭ್ಯಗಳಲ್ಲಿ ಕೆಲವನ್ನು ಕೊಡಿಸಲಾಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *