ನವದೆಹಲಿ, ಡಿಸೆಂಬರ್ 11: ಕೆಲವೊಮ್ಮೆ ನಮ್ಮ ಅದೃಷ್ಟ ಎಷ್ಟು ಕೈಕೊಟ್ಟಿದೆ ಎಂದರೆ ‘ಪಾಪಿ ಸಮುದ್ರಕ್ಕಿಳಿದರೂ ಮೊಣಕಾಲುದ್ದ ನೀರು’ ಅಂತಾರಲ್ಲ. ಮಲೇಷ್ಯಾದ ವ್ಯಕ್ತಿಯೊಬ್ಬನ ಹೆಂಡತಿ ಗರ್ಭಿಣಿಯಾಗಿದ್ದಳು. ಆತ ಥೈಲ್ಯಾಂಡ್ ಗೆ ಹೋಗಿ ಬರಲು ಪ್ಲಾನ್ ಮಾಡಿದೆ. ಆಗ ಹೆಂಡತಿ ನಾನು ಕೂಡ ಬರುತ್ತೇನೆ ಎಂದಳು. ಆದರೆ, ಆಕೆ ಗರ್ಭಿಣಿಯಾದ ಗಂಡನಿಂದ ವಿಮಾನ ಸಂಚಾರ ಮಾಡುವುದು ಬೇಡವೆಂದ ತಾನು ಆಫೀಸ್ ಕೆಲಸದ ಮೇಲೆ ಥೈಲ್ಯಾಂಡ್‌ಗೆ (ಥೈಲ್ಯಾಂಡ್) ಹೋಗುತ್ತಿದ್ದೇನೆ ಎಂದು ಆಕೆಗೆ ಹೇಳಿದ್ದಾಳೆ. ತನ್ನಿಂದ ಗಂಡನ ಕೆಲಸಕ್ಕೆ ತೊಂದರೆಯಾಗುವುದು ಬೇಡವೆಂದು ಆಕೆ ಆತನೊಬ್ಬನನ್ನೇ ಥೈಲ್ಯಾಂಡ್‌ಗೆ ಕಳಿಸಿದ್ದಳು.
ಆದರೆ, ಆತ ಥೈಲ್ಯಾಂಡ್ ಗೆ ತನ್ನ ಪ್ರೇಯಸಿ ಜೊತೆ ಮಜಾ ಮಾಡಲು ಹೋಗಿದ್ದ. ಹೆಂಡತಿಗೆ ಸುಳ್ಳು ಹೇಳಿ ಹೋಗಿದ್ದ ಆತ ಈ ವಿಷಯ ಆಕೆಗೆ ಗೊತ್ತಾಗಲು ಚಾನ್ಸೇ ಇಲ್ಲ ಎಂದುಕೊಂಡಿದ್ದ. ಆದರೆ, ಎಲ್ಲವೂ ನಾವಂದುಕೊಂಡ ಹಾಗೇ ಆಗುವುದಿಲ್ಲ. ಲವರ್ ಜೊತೆ 4 ದಿನಗಳಿಂದ ಥೈಲ್ಯಾಂಡ್ನ ರೆಸಾರ್ಟ್ನಲ್ಲಿ ಜಾಲಿ ಮೂಡಲ್ಲಿದ್ದ ಆತನ ಹಣೆಬರಹ ಕೆಟ್ಟಿತ್ತು. ಥೈಲ್ಯಾಂಡ್ನಲ್ಲಿ ಪ್ರವಾಹ ಶುರುವಾಯಿತು.
ಇದನ್ನೂ ಓದಿ: ವೀಡಿಯೋ: ಹಿಮಾಲಯ ಟ್ರೆಕ್ಕಿಂಗ್ ವೇಳೆ ಪೂರೈಕೆಯ ಪಾಠ ಮಾಡಿದ ಮಹಿಳೆ
ಇತ್ತ ಆತನ ಹೆಂಡತಿ ಥೈಲ್ಯಾಂಡ್‌ನಲ್ಲಿ ಪ್ರವಾಹ ಉಂಟಾಗಿದ್ದರಿಂದ ತನ್ನ ಗಂಡ ಸುರಕ್ಷಿತವಾಗಿ ವಾಪಾಸ್ ಬರಲಿ ಎಂದು ಪ್ರಾರ್ಥಿಸುತ್ತಾ ಟಿವಿ ಆನ್ ಮಾಡಿದಳು. ಅದರಲ್ಲಿ ಪ್ರವಾಹ ಪೀಡಿತರ ರಕ್ಷಣಾ ಕಾರ್ಯಾಚರಣೆಯ ವಿಡಿಯೋಗಳು ಬರುತ್ತಿದ್ದವು. ಇದರಿಂದ ಆಕೆಯ ಆತಂಕ ಇನ್ನಷ್ಟು ಹೆಚ್ಚಾಯಿತು. ಥೈಲ್ಯಾಂಡ್‌ನಲ್ಲಿದ್ದ ತನ್ನ ಗೆಳೆಯನೊಬ್ಬನಿಗೆ ಫೋನ್ ಮಾಡಿ ಥೈಲ್ಯಾಂಡ್‌ನ ಹ್ಯಾಟ್ ಯಾಯ್‌ನ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಆಕೆಯ ಗಂಡನ ರಕ್ಷಣೆ ಮಾಡುವಂತೆ ಆಕೆ ಮನವಿ ಮಾಡಿದರು.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಪಾಕಿಸ್ತಾನದ ಖ್ಯಾತ ಕಾಂಟೆಂಟ್ ಕ್ರಿಯೆಟರ್
ಆಕೆಯ ಆನ್‌ಲೈನ್ ಸ್ನೇಹಿತ ಆಕೆಯ ಗಂಡನ ರಕ್ಷಣಾ ಪ್ರಯತ್ನಕ್ಕೆ ವ್ಯವಸ್ಥೆ ಮಾಡಿದಾಗ ಅಸಲಿ ಸಂಗತಿ ಬಹಿರಂಗವಾಯಿತು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಆ ವ್ಯಕ್ತಿ ಕೆಲಸಕ್ಕಾಗಿ ಹ್ಯಾಟ್ ಯಾಯ್‌ನಲ್ಲಿ ಇದ್ದೇನೆ ಎಂದು ಹೆಂಡತಿಗೆ ತಿಳಿಸಿದ್ದ. ತನ್ನ ಗಂಡನೂ ಪ್ರವಾಹದಲ್ಲಿ ಸಿಲುಕಿದ್ದಾನೆ ಅದರಿಂದಲೇ ಆತ ಫೋನಿಗೂ ಸಿಗುತ್ತಿಲ್ಲ ಎಂದು ಆತಂಕಗೊಂಡ ಆಕೆ ತನ್ನ ಗೆಳೆಯನಿಗೆ ಫೋನ್ ಮಾಡಿ ಆ ರೆಸಾರ್ಟ್ ನ ವಿಳಾಸ ಹೇಳಿ ತನ್ನ ಗಂಡನಿಗೆ ಸಹಾಯ ಮಾಡಲು ಮನವಿ ಮಾಡಿದಳು. ಆಗ ಆತ ಆಫೀಸ್ ಸಹೋದ್ಯೋಗಿ ಜೊತೆ 4 ದಿನಗಳಿಂದ ಅದೇ ಹೋಟೆಲ್‌ನಲ್ಲಿ ವಾಸವಾಗಿತ್ತು. ಇಬ್ಬರೂ ಒಂದೇ ರೂಂನಲ್ಲಿದ್ದರು ಎಂಬುದು ಆತನ ಹೆಂಡತಿಗೆ ಗೊತ್ತಾಗಿದೆ. ಥೈಲ್ಯಾಂಡ್ನಲ್ಲಿ ಉಂಟಾದ ಪ್ರವಾಹ ಆಕೆಯ ಗಂಡನ ಅಸಲಿ ಮುಖವನ್ನು ಬಹಿರಂಗ ಮಾಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 8:58 pm, ಗುರು, 11 ಡಿಸೆಂಬರ್ 25