ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು -ಕೇಂದ್ರ ಬಂದರು ಸಚಿವ ಸೋನಾವಾಲ್ ಚಾಲನೆ | Indias First Hydrogen Powered Water Taxi Launched In Varanasi

ದೇಶದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ(ಕಿರು ಪ್ರವಾಸಿ ಹಡಗು) ಸೇವೆಗೆ ವಾರಾಣಸಿಯಲ್ಲಿ ಚಾಲನೆ ಸಿಕ್ಕಿದೆ. ಈ ಮೂಲಕ ಶುದ್ಧ ಇಂಧನದಿಂದ ಚಲಿಸುವ ಜಲಸಾರಿಗೆ ಹೊಂದಿರುವ ಕೆಲವೇ ಕೆಲ ದೇಶಗಳ ಸಾಲಿಗೆ ಇದೀಗ ಭಾರತ ಸೇರ್ಪಡೆಯಾಗಿದೆ

ನವದೆಹಲಿ: ದೇಶದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ(ಕಿರು ಪ್ರವಾಸಿ ಹಡಗು) ಸೇವೆಗೆ ವಾರಾಣಸಿಯಲ್ಲಿ ಚಾಲನೆ ಸಿಕ್ಕಿದೆ. ಈ ಮೂಲಕ ಶುದ್ಧ ಇಂಧನದಿಂದ ಚಲಿಸುವ ಜಲಸಾರಿಗೆ ಹೊಂದಿರುವ ಕೆಲವೇ ಕೆಲ ದೇಶಗಳ ಸಾಲಿಗೆ ಇದೀಗ ಭಾರತ ಸೇರ್ಪಡೆಯಾಗಿದೆ. ಚೀನಾ, ನಾರ್ವೆ, ನೆದರ್‌ಲ್ಯಾಂಡ್‌, ಜಪಾನ್‌ ದೇಶಗಳು ಈ ರೀತಿ ಹೈಡ್ರೋಜನ್‌ ಚಾಲಿತ ಹಡಗುಗಳನ್ನು ಹೊಂದಿವೆ.

ನಮೋ ಘಾಟ್‌ನಲ್ಲಿ ವಾಟರ್‌ ಟ್ಯಾಕ್ಸಿ ಸೇವೆಗೆ ಚಾಲನೆ

ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನಾವಾಲ್‌ ಅವರು ಬುಧವಾರ ನಮೋ ಘಾಟ್‌ನಲ್ಲಿ ವಾಟರ್‌ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ್ದು, ಇದು ರವಿದಾಸ್‌ ಘಾಟ್‌ನಿಂದ ನಮೋ ಘಾಟ್‌ ನಡುವೆ ಸಂಚರಿಸಲಿದೆ.

50 ಮಂದಿ ಪ್ರಯಾಣಿಸಬಹುದಾಗಿದೆ

ಕೊಚ್ಚಿನ್‌ ಶಿಪ್‌ಯಾರ್ಡ್‌ನಿಂದ ನಿರ್ಮಿತ ಈ ವಾಟರ್‌ ಟ್ಯಾಕ್ಸಿಯಲ್ಲಿ 50 ಮಂದಿ ಪ್ರಯಾಣಿಸಬಹುದಾಗಿದೆ. ಸಸ್ಯಾಹಾರಿ ತಿಂಡಿ-ತಿನಿಸು, ಸಿಸಿಟೀವಿ ಕಣ್ಗಾವಲು, ಬಯೋ ಟಾಯ್ಲೆಟ್‌ ನಂಥ ಸೌಲಭ್ಯಗಳಿವೆ. ಹೈಬ್ರಿಡ್‌ ಎಲೆಕ್ಟ್ರಿಕ್‌-ಹೈಡ್ರೋಜನ್‌ ಎಂಜಿನ್‌ನಿಂದ ಈ ವಾಟರ್‌ ಟ್ಯಾಕ್ಸಿ ಸಂಚರಿಸುತ್ತದೆ. ಈ ವಾಟರ್ ಟ್ಯಾಕ್ಸಿಯಲ್ಲಿ ಮೂರು ಕಿಲೋ ವ್ಯಾಟ್‌ನ ಸೋಲಾರ್ ಪ್ಯಾನಲ್‌ ಅಳವಡಿಸಲಾಗಿದೆ. ಯಾವುದೇ ಸದ್ದಿಲ್ಲದೆ, ಹೊಗೆಯುಗುಳದೆ ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕೇಂದ್ರ ಸರ್ಕಾರದ ಸ್ವಚ್ಛ, ಹಸಿರು ಸಾರಿಗೆಗೆ ಉತ್ತೇಜನ ನೀಡುವ ಭಾಗವಾಗಿ ಈ ವಾಟರ್‌ ಟ್ಯಾಕ್ಸಿ ಸೇವೆಗೆ ಚಾಲನೆ ಸಿಕ್ಕಿದೆ.

Source link

Leave a Reply

Your email address will not be published. Required fields are marked *