Headlines

ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಸ್ವಾಗತಕ್ಕೆ ಕೋಲ್ಕತಾ ಸಜ್ಜು! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್ | Lionel Messi Arrives In India Full 3 Day Schedule Statue Unveiling Kvn

ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಸ್ವಾಗತಕ್ಕೆ ಕೋಲ್ಕತಾ ಸಜ್ಜು! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್ | Lionel Messi Arrives In India Full 3 Day Schedule Statue Unveiling Kvn


16

ಮೆಸ್ಸಿ 3 ದಿನಗಳ ಭಾರತ ಪ್ರವಾಸ

Image Credit : Getty

ಮೆಸ್ಸಿ 3 ದಿನಗಳ ಭಾರತ ಪ್ರವಾಸ

ಫುಟ್ಬಾಲ್‌ ದಿಗ್ಗಜ, ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ 3 ದಿನಗಳ ಪ್ರವಾಸಕ್ಕಾಗಿ ಶುಕ್ರವಾರ ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ. ಮಧ್ಯರಾತ್ರಿ 1.30ರ ವೇಳೆಗೆ ಕೋಲ್ಕತಾಗೆ ಬಂದಿಳಿಯಲಿರುವ ಮೆಸ್ಸಿ, ಡಿ.15ರವರೆಗೂ ಭಾರತದಲ್ಲೇ ಇರಲಿದ್ದಾರೆ.

26

2011ರಲ್ಲಿ ಮೊದಲ ಸಲ ಭಾರತಕ್ಕೆ ಭೇಟಿ ಕೊಟ್ಟಿದ್ದ ಮೆಸ್ಸಿ

Image Credit : Getty

2011ರಲ್ಲಿ ಮೊದಲ ಸಲ ಭಾರತಕ್ಕೆ ಭೇಟಿ ಕೊಟ್ಟಿದ್ದ ಮೆಸ್ಸಿ

ಲಿಯೋನೆಲ್ ಮೆಸ್ಸಿ 2011ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಕೋಲ್ಕತಾದಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 1-0 ಅಂತರದಲ್ಲಿ ವೆನೆಜುಯೆಲಾ ಎದುರು ಗೆಲುವು ಸಾಧಿಸಿತ್ತು.

36

ಕೋಲ್ಕತಾದಲ್ಲಿ 70 ಅಡಿ ಎತ್ತರದ ತಮ್ಮದೇ ಪ್ರತಿಮೆ ಅನಾವರಣ ಮಾಡಲಿರುವ ಮೆಸ್ಸಿ

Image Credit : Getty

ಕೋಲ್ಕತಾದಲ್ಲಿ 70 ಅಡಿ ಎತ್ತರದ ತಮ್ಮದೇ ಪ್ರತಿಮೆ ಅನಾವರಣ ಮಾಡಲಿರುವ ಮೆಸ್ಸಿ

ಶನಿವಾರ ಕೋಲ್ಕತಾದ ವಿಐಪಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಮ್ಮ 70 ಅಡಿಯ ಪ್ರತಿಮೆಯನ್ನು ಲಿಯೋನೆಲ್ ಮೆಸ್ಸಿ ಅನಾವರಣಗೊಳಿಸಲಿದ್ದಾರೆ.

46

ಸಾಲ್ಟ್‌ ಲೇಕ್ ಕ್ರೀಡಾಂಗಣದಲ್ಲಿ ಸೆಲಿಬ್ರಿಟಿಗಳ ಜತೆ ಕಾರ್ಯಕ್ರಮದಲ್ಲಿ ಭಾಗಿ

Image Credit : Getty

ಸಾಲ್ಟ್‌ ಲೇಕ್ ಕ್ರೀಡಾಂಗಣದಲ್ಲಿ ಸೆಲಿಬ್ರಿಟಿಗಳ ಜತೆ ಕಾರ್ಯಕ್ರಮದಲ್ಲಿ ಭಾಗಿ

ಇದಾದ ಬಳಿಕ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ದಿಗ್ಗಜ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಸೇರಿ ಇನ್ನೂ ಕೆಲವರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಟ ಶಾರುಖ್‌ ಖಾನ್‌ ಕೂಡಾ ಉಪಸ್ಥಿತರಲಿದ್ದಾರೆ.

56

ಹೈದರಾಬಾದ್‌ನಲ್ಲಿ ಸ್ನೇಹಾರ್ಥ ಫುಟ್ಬಾಲ್ ಮ್ಯಾಚ್

Image Credit : Getty

ಹೈದರಾಬಾದ್‌ನಲ್ಲಿ ಸ್ನೇಹಾರ್ಥ ಫುಟ್ಬಾಲ್ ಮ್ಯಾಚ್

ಬಳಿಕ ಸಂಜೆ ಹೈದರಾಬಾದ್‌ಗೆ ಆಗಮಿಸಲಿದ್ದು, ಏಳು ಆಟಗಾರರನ್ನೊಳಗೊಂಡ ಸ್ನೇಹಾರ್ಥ ಫುಟ್ಬಾಲ್‌ ಪಂದ್ಯ ಆಡಲಿದ್ದಾರೆ. ಇದರಲ್ಲಿ ತೆಲಂಗಾಣ ಮುಖ್ಯಂತ್ರಿ ರೇವಂತ್‌ ರೆಡ್ಡಿ ಕೂಡಾ ಇರಲಿದ್ದಾರೆ. ಈ ಪಂದ್ಯವು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.

66

ಮೆಸ್ಸಿ-ಮೋದಿ ಭೇಟಿ

Image Credit : Getty

ಮೆಸ್ಸಿ-ಮೋದಿ ಭೇಟಿ

ಡಿ.14ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಕೆಲ ತಾರಾ ಕ್ರಿಕೆಟಿಗರ ಜತೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲಿರುವ ಮೆಸ್ಸಿ, ಡಿ.15ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಅಂದೇ ಅವರು ಅರ್ಜೆಂಟೀನಾಕ್ಕೆ ಹಿಂದಿರುಗಲಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *