ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ (ದರ್ಶನ್) ಜೈಲು ಪಾಲಾಗಿದ್ದಾರೆ. ಹಲವು ತಿಂಗಳಿನಿಂದ ಅವರು ಜೈಲಿನಲ್ಲೇ ವಾಸವಿದ್ದಾರೆ. ಇತ್ತೀಚೆಗೆ ಅವರು ಸಹ ಕೈಗಳ ಮೇಲೆ ಹಲ್ಲೆ ಮಾಡಿದ ಬಗ್ಗೆ TV9 ಕನ್ನಡ ವರದಿ ಮಾಡಿದೆ. ಇದಾದ ಬೆನ್ನಲ್ಲೇ ದರ್ಶನ್ ಸಂಬಂಧಿತ ಮತ್ತೊಂದು ಸ್ಟೋಟಕ ಸುದ್ದಿ ಟಿವಿ9ಗೆ ಲಭ್ಯವಾಗಿದೆ. ಇದು ದರ್ಶನ್ ಬಳಿ ಇದ್ದ ಗನ್ ವಿಷಯಕ್ಕೆ ಸಂಬಂಧಿಸಿದೆ.
ಕೊಲೆ ಕೇಸ್ ನಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಸಾಮಾನ್ಯವಾಗಿ ಕೊಲೆ ಪ್ರಕರಣದಲ್ಲಿ ಯಾರಾದರೂ ಆರೋಪಿ ಆದರೆ, ಅವರ ಬಳಿ ಇರೋ ಗನ್ ಲೈಸೆನ್ಸ್ ರದ್ದು ಮಾಡಬೇಕು ಎಂಬುದು ನಿಯಮ. ಈ ನಿಯಮವನ್ನು ಬೆಂಗಳೂರು ಪಾಲಿಸಿದ್ದಾರೆ. ಕಳೆದ ವರ್ಷ ಡಿ.24ರಂದು ದರ್ಶನ್ ಪಿಸ್ತೂಲ್ ಲೈಸೆನ್ಸ್ ರದ್ದುಗೊಳಿಸಲಾಗಿದೆ. ಆ ಬಳಿಕ ಈ ವರ್ಷ ಜನವರಿ 22 ರಂದು ದರ್ಶನ್ ಅಪಾರ್ಟದ ಮೆಂಟ್ ನಲ್ಲಿ .32 ಎಂಎಂ ಪಿಸ್ತೂಲ್ ಸೀಜ್ ಮಾಡಲಾಗಿದೆ.
ಗಂಭೀರವಾಗಿ ಪರಿಗಣಿಸಿದ ಮತ್ತೊಂದು ವಿಷಯವೂ ಇದೆ. ದರ್ಶನ್ ಬಳಿ ಪಿಸ್ತೂಲ್ ಆಗಿತ್ತು. ಅವರ ಬಳಿ .22 ಮಿಮೀ ರೈಫಲ್ ಹಾಗೂ ಬುಲೆಟ್ಸ್ ಇದೆ . ಇದನ್ನು ಅವರು ಮೈಸೂರಿನ ಫಾರ್ಮ್ ಹೌಸ್ ಅಥವಾ ಬೆಂಗಳೂರಿನ ಮನೆಯಲ್ಲಿ ಬಚ್ಚಿಟ್ಟಿರೋ ಸಾಧ್ಯತೆ ಇದೆ.
ಮೈಸೂರು ಗ್ರಾಮಾಂತರ ದರ್ಶನ್‌ಗೆ ಈ ರೈಫಲ್ ಪಡೆಯಲು ಪರವಾನಗಿ ನೀಡಿದ್ದರು. ಸಾಮಾನ್ಯವಾಗಿ ಕೊಲೆ ಆರೋಪಿ ಯಾವುದೇ ಹ್ಯಾಂಡ್ ಗನ್ ಇರಬಾರದು. ಆರೋಪಿ ಆಗಿದ್ದರಿಂದ ಆ ಗನ್ ಸೀಜ್ ಮಾಡಬೇಕು. ಅದಾಗದಿದ್ದಲ್ಲಿ ಆರೋಪಿಯೇ ಪೊಲೀಸರ ವಶಕ್ಕೆ.
ಇದನ್ನೂ ಓದಿ: ಅಪ್ಪ-ಅಮ್ಮ ಸತ್ರೂ ಓಕೆ, ದರ್ಶನ್ ಜೈಲಲ್ಲಿರೋದನ್ನ ನೋಡೋಕಾಕಿಲ್ಲ; ಫ್ಯಾನ್ಸ್ ಅಂಧಾಭಿಮಾನ
ಈ ರೀತಿ ನಿಯಮ ತರಲು ಒಂದು ಕಾರಣವೂ ಇದೆ. ಗನ್ ಬಳಸಿ ಆರೋಪಿ ಸಾಕ್ಷಿಗಳಿಗೆ ಧಮ್ಕಿ ಹಾಕುವುದು ಅಥವಾ ಬೇರೆ ರೀತಿ ಅಪರಾಧ ಚಟುವಟಿಕೆ ಮಾಡುವ ಸಾಧ್ಯತೆ ಇರುತ್ತದೆ. ಆರೋಪಿ ಗನ್ ನೀಡದಿದ್ದರೇ ಅವರ ಮೇಲೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ದರ್ಶನ್ ಮೇಲೆ ಕೊಲೆ ಪ್ರಕರಣ ದಾಖಲಾಗಿ ವರ್ಷ ಕಳೆದರೂ ಮೈಸೂರು ಗ್ರಾಮಾಂತರ ಪೊಲೀಸರು ಈ ರೈಫಲ್ ಸೀಜ್ ಮಾಡಿಲ್ಲ. ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡುವಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 9:25 am, ಶುಕ್ರ, 12 ಡಿಸೆಂಬರ್ 25