Viral News: ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ! | Suvarna Fir Manju Leela Viral Family Drama Reunion Gvd

Viral News: ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ! | Suvarna Fir Manju Leela Viral Family Drama Reunion Gvd


ಅದು ಸಖತ್​​ ಟ್ರೋಲ್​ ಮತ್ತು ವೈರಲ್​ ಆದ ಸಂಸಾರ… ಮೂರು ಮಕ್ಕಳ ತಾಯಿ ಬಾಯ್​ಫ್ರೆಂಡ್​​ ಜೊತೆ ಹೋಗಿಬಿಟ್ಟಳು ಅಂತ ಗಂಡ ಮಾದ್ಯಮದವರನ್ನೆಲ್ಲಾ ಕರೆದು ಇನ್ನಿಲ್ಲದಂತೆ ಕಣ್ಣೀರು ಹಾಕಿದ್ದ.. ಫ್ಲೇವರು.. ಚಿನ್ನು.. ಬಂಗಾರಿ ಅಂತೆಲ್ಲಾ ಕ್ಯಾಮರಾ ಮಂದು ಗೋಳಾಡಿದ್ದ.. ಆ ಸಂಸಾರದ ಗಲಾಟೆ ರಾಜ್ಯ ಮಟ್ಟದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.. ಯಸ್​​.. ನಾವು ಮಾತನ್ನಾಡುತ್ತಿರೋದು ಮಂಜು ತ್ತು ಲೀಲಾ ಫ್ಯಾಮಿಲಿ ಮ್ಯಾಟರ್​​ ಬಗ್ಗೆ.. ಆವತ್ತು ದೊಡ್ಡ ಸುದ್ದಿ ಮಾಡಿದ್ದ ಗಂಡ ಹೆಂಡತಿ ಮತ್ತು ಬಾಯ್​​ಫ್ರೆಂಡ್​​ನ ಗಲಾಟೆ ಈಗ ರೋಚಕ ಟ್ವಿಸ್ಟ್​​ ಪಡೆದುಕೊಂಡಿದೆ.

ಯಾವುದೇ ಕಾರಣಕ್ಕೂ ನಾನು ಗಂಡನ ಜೊತೆ ಹೋಗಲ್ಲ ಅಂದಿದ್ದ ಹೆಂಡತಿ ಇವತ್ತು ಮರಳಿ ಗಂಡನ ಮಡಿಲು ಸೇರಿದ್ದಾಳೆ.. ಅಷ್ಟಕ್ಕೂ ಲೀಲಾಗೆ ಈಗ ಜ್ಞಾನೋದಯ ಆಗಲು ಕಾರಣವೇನು..? ಇವರಿಬ್ಬರ ನಡುವೆ ಆವತ್ತೇನಾಗಿತ್ತು..? ಇವತ್ತೇನಾಯ್ತು..? ಒಂದು ಗಲಾಟೆ ಸಂಸಾರದ ಕಥೆಯೇ ಇವತ್ತಿನ ಎಫ್​ಐಆರ್​​. ಎಂಥ ವಿಚಿತ್ರ ಸಂಸಾರ ರೀ ಇದು.. ಆವತ್ತು ಹೆಂಡತಿಯ ಬಾಯ್​ಫ್ರೆಂಡ್ಗೆ ಹಲ್ಲೆ ಮಾಡಿ ಜೈಲು ಸೇರಿಬಿಟ್ಟ ಮಂಜು. ನಂತರ ಜಾಮೀನಿನ ಮೇಲೆ ಹೊರ ಬಂದ.. ಆದ್ರೆ ಇಷ್ಟೆಲ್ಲಾ ಆಗ 2-3 ತಿಂಗಳಾಗಿವೆ.. ಇವತ್ತು ಗಂಡ ಹೆಂಡತಿ ಇಬ್ಬರೂ ಪ್ರತ್ಯಕ್ಷರಾಗಿ ನಾವು ಇನ್ಮುಂದೆ ಒಂದಾಗಿ ಬಾಳ್ತೀವಿ ಅಂತಿದ್ದಾರೆ.. ಹಾಗಾದ್ರೆ ಈ 2-3 ತಿಂಗಳಲ್ಲಿ ಏನಾಯ್ತು..?

ಈ ಇಬ್ಬರೂ ಒಂದಾಗಿ ಬಾಳಲು ಕಾರಣವೇನು. ನಾಲ್ಕು ತಿಂಗಳ ಹಿಂದೆ ಸಂಸಾರದ ಗಲಾಟೆಯನ್ನ ಬೀದಿ ರಂಪಾಟ ಮಾಡಿಕೊಂಡಿದ್ದ ಜೋಡಿ ಇವತ್ತು ಐಸ್​ ಕ್ರೀಮ್​ ಪಾರ್ಲರ್​​ ಎದುರು ಪ್ರತ್ಯಕ್ಷವಾಗಿತ್ತು.. ಇನ್ಮುಂದೆ ನಾವಿಬ್ಬರೂ ಒಂದೇ ಅಂತ ಹೆಳಿಕೊಂಡು ಒಂದೇ ಐಸ್ಕ್ರೀಮ್​ ಅನ್ನ ಶೇರ್​​ ಮಾಡಿಕೊಂಡ್ರು.. ಅಷ್ಟೇ ಅಲ್ಲ ಎಲ್ಲಾ ಮಕ್ಕಳಿಗೆ ಅಂತ ಹೇಳಿ ಒಂದೇ ಆಟೋದಲ್ಲಿ ಕೂತು ಮನೆಕಡೆ ಹೊರಟರು.. ಇತ್ತ ದೂರವೇ ನಿಂತು ಹಳೇ ಬಾಯ್​ಫ್ರೆಂಡ್​​ ಇಬ್ಬರಿಗೂ ಆಲ್​ ದ ಬೆಸ್ಟ್​​ ಹೇಳಿ ಕಳಿಸಿಕೊಟ್ಟ. ಕೊನೆಗೂ ಮಂಜನ ಸಂಸಾರ ಸರಿಯಾಗಿದೆ.. ಲೀಲಾ ಮಕ್ಕಳ ಮುಖ ನೋಡಿಕೊಂಡು ವಾಪಸ್​​ ಬಂದಿದ್ದಾಳೆ.. ಇನ್ನಾದ್ರೂ ಈ ಜೋಡಿ ಒಟ್ಟಿಗೆ ನೂರು ಕಾಲ ಖುಷಿ ಖುಷಿಯಿಂದ ಬಾಳಲಿ.



Source link

Leave a Reply

Your email address will not be published. Required fields are marked *