Headlines

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಉಲ್ಬಣ: ಇಂದು ಮತ್ತೆ ಗಾಳಿಮಟ್ಟ ಕುಸಿತ

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಉಲ್ಬಣ: ಇಂದು ಮತ್ತೆ ಗಾಳಿಮಟ್ಟ ಕುಸಿತ


ಬೆಂಗಳೂರು, ಡಿ.12: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಗಾಳಿ ಗುಣಮಟ್ಟದಲ್ಲಿ ವ್ಯತ್ಯಾಸ ಕಾಣುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಾಯುಮಾಲಿನ್ಯ ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ಇದೇ ರೀತಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮುಂದುವರಿದರೆ ದೆಹಲಿಯಂತೆ ಆಗುತ್ತಿರುವ ಅನುಮಾನವಿಲ್ಲ. ಇದರಿಂದ ಬೆಂಗಳೂರಿನಲ್ಲಿ ಉಸಿರಾಟ ಬಿಕ್ಕಟ್ಟು ಉಂಟಾಗಬಹುದು ಎಂದು ಹೇಳಿದ್ದಾರೆ. ನೆನ್ನೆ (ಡಿ.11) ಗಾಳಿಯ ಗುಣಮಟ್ಟ ಸೂಚ್ಯಂಕ (AQI) 180ಕ್ಕೆ ತಲುಪಿತ್ತು. ಇಂದು ಗಾಳಿಯ ಮಟ್ಟ 175ಕ್ಕೆ ತಲುಪಿದೆ. ಪರಿಸರ ತಜ್ಞರು ಹೇಳಿರುವ ಪ್ರಕಾರ, ಬೆಂಗಳೂರಿನ ಗಾಳಿಯಲ್ಲಿ ಇಂತಹ ವ್ಯತ್ಯಾಸ ಈ ಹಿಂದೆ ಆಗಿಲ್ಲ. ಒಂದು ವೇಳೆ ಹೀಗೆ ಮುಂದುವರಿದರೆ ಬೆಂಗಳೂರು ಕೂಡ ದೆಹಲಿಯಂತೆ ಆಗುವುದು ಖಂಡಿತ. ಯಾವುದೇ ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಧೂಳಿಯಿಂದ ತುಂಬಿರುವ ರಸ್ತೆಗಳು ಕೂಡ ಇದಕ್ಕೆ ಕಾರಣ. ಇದರೊಂದಿಗೆ ವಾಹನ ದಟ್ಟಣೆಯಿಂದ ಗಾಳಿ ಗುಣಮಟ್ಟದಲ್ಲಿ ಬದಲಾವಣೆ ಆಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಎಂದು ಹೇಳಿದ್ದಾರೆ. ಅನ್ಬಾಕ್ಸಿಂಗ್ ಎಂಬ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೆಂಗಳೂರಿನ ವಾಯುಮಾಲಿನ್ಯದ ಬಗ್ಗೆ ವಿಡಿಯೋವೊಂದು ಹಂಚಿಕೊಂಡಿದೆ. ಅದರಲ್ಲಿ ಹೀಗೆ ಬರೆದಿದ್ದಾರೆ. “ನಾನು ಒಂದು ತಿಂಗಳಿನಿಂದ ಬೆಂಗಳೂರಿನ ಗಾಳಿಯನ್ನು ಅಧ್ಯಯನ ಮಾಡುತ್ತಿದ್ದೇನೆ . ಆದರೆ ನಾನು ಯೋಚಿಸುವುದಕ್ಕಿಂತ ಹೆಚ್ಚು ಕಲುಷಿತವಾಗಿದೆ” ಎಂದು ಹೇಳಿದರು. ನಗರದ ಸರಾಸರಿ PM2.5 ಮಟ್ಟಗಳು 40ರ ಆಸುಪಾಸಿನಲ್ಲಿವೆ ಎಂದು ಹೇಳಲಾಗಿದೆ.

ಅಕಿ

ಮಧ್ಯಮ ವಾಯುಮಾಲಿನ್ಯ ಸ್ವೀಕಾರಾರ್ಹವಲ್ಲ, ಆದರೆ ಬೆಂಗಳೂರು ಇದಕ್ಕೆ ಹತ್ತಿರದಲ್ಲಿದೆ. WHO ಹೇಳುವ ಪ್ರಕಾರ, 5 ಕ್ಕಿಂತ ಕಡಿಮೆ PM2.5 ಅನ್ನು ಶಿಫಾರಸು ಮಾಡುತ್ತದೆ. ಆದರೆ ಭಾರತೀಯ ಸುರಕ್ಷತಾ ಮಿತಿಗಳು 40 ಕ್ಕಿಂತ ಕಡಿಮೆ ಸ್ವೀಕಾರಾರ್ಹ ಎಂದು ಹೇಳುತ್ತದೆ. ಬೆಂಗಳೂರಿನ ಗಾಳಿಯ ಗುಣಮಟ್ಟ 200ಕ್ಕೆ ದಾಟಿದ ಉದಾಹರಣೆ ಇದೆ. ಇದರಿಂದ ಜನ ಹೊರಗೆ ಬರಲು ಸಾಧ್ಯವಿಲ್ಲ, ಹಾಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

35 ವರ್ಷದ ನಂತರ ಈ ದತ್ತಾಂಶ

ಬೆಂಗಳೂರಿನಲ್ಲಿ 35 ವರ್ಷಗಳ ನಂತರ PM2.5 ದತ್ತಾಂಶವಿದೆ. ಇದು ತುಂಬಾ ಕಳವಳಕಾರಿ ಪ್ರವೃತ್ತಿ ಎಂದು ಹೇಳಲಾಗಿದೆ. ಆದರೆ ಬೆಂಗಳೂರಿನ ನಗರ ದೆಹಲಿಗಿಂತ ಉತ್ತಮವಾಗಿದೆ. ಹೆಚ್ಚಿನ PM2.5 ಉಂಟಾಗಲು ಶೇಕಡ 64ರಷ್ಟು ವಾಹನ ದಟ್ಟಣೆಯಿಂದ ಎಂದು ಹೇಳಲಾಗಿದೆ. ಭಾರತೀಯ ನಗರಗಳಲ್ಲಿ ಅತಿ ಹೆಚ್ಚು. 84 ಲಕ್ಷ ದ್ವಿಚಕ್ರ ವಾಹನಗಳು ಸೇರಿದಂತೆ ಪ್ರತಿದಿನ 1.23 ಕೋಟಿ ನೋಂದಾಯಿತ ವಾಹನಗಳು ಮತ್ತು 2,563 ಹೊಸ ವಾಹನಗಳು ಇದಕ್ಕೆ ಪೂರಕವಾಗಿವೆ. ವಾಹನ ದಟ್ಟಣೆಯನ್ನು ನಿಯಂತ್ರಣ ಮಾಡುವುದು ಅಗತ್ಯ ಎಂದು ಹೇಳಲಾಗಿದೆ.

ರಸ್ತೆಗಳ ದುರವಸ್ಥೆ ಮಾಡಿರುವುದು, ರಸ್ತೆಗಳ ನಿರ್ಮಾಣ ಕಾರ್ಯದಿಂದ ಬೆಂಗಳೂರಿಗೆ ಇಂತಹ ಸ್ಥಿತಿ ಬರಲು ಕಾರಣ ಎಂದು ಹೇಳಲಾಗಿದೆ. ಇದರೊಂದಿಗೆ ದುರಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ಇದೆ ಎಂದು ತಜ್ಞರು ಹೇಳಿದ್ದಾರೆ. ನಗರದ ಮಾಲಿನ್ಯ ಶೇ. 24ರಷ್ಟು ನಿರ್ಮಾಣ ಕಾರ್ಯ ಮತ್ತು ರಸ್ತೆ ಧೂಳಿನಿಂದ ಬರುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಗಾಳಿಯ ಗುಣಮಟ್ಟ ತೀವ್ರ ಕುಸಿತ: ಉಸಿರಾಟ ಸಂಬಂಧ ಸಮಸ್ಯೆ ತೀವ್ರ ಆತಂಕ

ಹೃದಯ, ಸ್ನಾಯುಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ:

ಬೆಂಗಳೂರಿನಲ್ಲಿರುವ ಗಾಳಿಯ ಗುಣಮಟ್ಟದ ಬಗ್ಗೆ ಆರೋಗ್ಯ ತಜ್ಞರು ಹೇಳಿರುವ ಪ್ರಕಾರ, ಇಂತಹ ಅನಾರೋಗ್ಯಕರ ಗಾಳಿಯನ್ನು ಉಸಿರಾಡಿದಾಗ ನಿಮ್ಮ ಶ್ವಾಸಕೋಶ, ಮತ್ತು ಮೆದುಳಿಗೆ ರಾಸಾಯನಿಕಗಳು ಸೇರಿಕೊಳ್ಳುತ್ತವೆ. ಇದು ದೇಹದ ಒಳಗೆ ಹೋದ ನಂತರ, ಈ ಮಾಲಿನ್ಯಕಾರಕಗಳು ಉರಿಯೂತವನ್ನು ಉಂಟುಮಾಡುತ್ತವೆ. ಅದು ಹೃದಯ ಮತ್ತು ಸ್ನಾಯುಗಳ ಮೇಲೆ ಪರಿಣಾಮ. ನಂತರ ಇದು ಮಾನಸಿಕ ಹಿಂಸೆಯನ್ನು ಕೂಡಿಸಿತು. ಇದರಿಂದ ಅಲರ್ಜಿಗಳು, ಆಸ್ತಮಾ, ಉಬ್ಬಸ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ವಿಶೇಷವಾಗಿ ಇದು ಮಕ್ಕಳು ಮತ್ತು ವೃದ್ಧರಲ್ಲಿ ಕಂಡು ಬರುತ್ತಿದೆ. ಇದರೊಂದಿಗೆ ಭಾರತಕ್ಕೆ ವರ್ಷಕ್ಕೆ 2,710.53 ಶತಕೋಟಿಗೂ ಹೆಚ್ಚು ವೆಚ್ಚವನ್ನುಂಟುಮಾಡುತ್ತದೆ ಎಂದು ಹೇಳಿದರು.

ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ಪ್ರಮುಖ ನಗರಗಳಲ್ಲಿ ಗಾಳಿ ಗುಣಮಟ್ಟ

ಬೆಂಗಳೂರು – 175

ಮಂಗಳೂರು -104

ಮೈಸೂರು – 122

ಬೆಳಗಾವಿ- 142

ಕಲಬುರಗಿ – 77

ಶಿವಮೊಗ್ಗ – 77

ಬಳ್ಳಾರಿ- 167

ಹುಬ್ಬಳ್ಳಿ – 90

ಉಡುಪಿ – 85

ವಿಜಯಪುರ – 79

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:06 pm, ಶುಕ್ರ, 12 ಡಿಸೆಂಬರ್ 25



Source link

Leave a Reply

Your email address will not be published. Required fields are marked *