ಮೈಕ್ರೋಸಾಫ್ಟ್ ಸಿಇಒಗೆ ಕ್ರಿಕೆಟ್, ಕೋಡ್ ಕ್ರೇಜ್; ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಅನಾಲಿಸಿಸ್ ಆ್ಯಪ್ ಕಟ್ಟುತ್ತಿರುವ ಸತ್ಯ ನಾದೆಲ್ಲ

ಮೈಕ್ರೋಸಾಫ್ಟ್ ಸಿಇಒಗೆ ಕ್ರಿಕೆಟ್, ಕೋಡ್ ಕ್ರೇಜ್; ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಅನಾಲಿಸಿಸ್ ಆ್ಯಪ್ ಕಟ್ಟುತ್ತಿರುವ ಸತ್ಯ ನಾದೆಲ್ಲ


ಜುಲೈ, ಡಿಸೆಂಬರ್ 12: ಬ್ಯೂಸಿನೆಸ್ಮ್ಯಾನ್ಗಳು ಬಿಡುವಿನ ವೇಳೆಯಲ್ಲಿ ಏನ್ ಮಾಡ್ತಾರೆ? ಸಾಮಾನ್ಯವಾಗಿ ವೀಕೆಂಡ್ ಪ್ರವಾಸ ಹೋಗ್ತಾರೆ, ರಿಸಾರ್ಟ್‌ಗೆ ಹೋಗ್ತಾರೆ, ಅಥವಾ ಇಂಥವೇ ಯಾವುದಾದರೂ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಮೈಕ್ರೋಸಾಫ್ಟ್ ಸಿಐಒ ಸತ್ಯ ನಾದೆಲ್ಲ (ಸತ್ಯ ನಾಡೆಲ್ಲಾ) ಅವರು ತಮ್ಮ ಬಡುವಿನ ವೇಳೆಯಲ್ಲಿ ಸ್ವಂತವಾಗಿ ಕ್ರಿಕೆಟ್ ಅನಾಲಿಸಿಸ್‌ಗೆ ಕೋಡಿಂಗ್ ಬರೆಯುತ್ತಿದ್ದರಂತೆ. ಅದೂ ಡೀಪ್ ರಿಸರ್ಚ್ ಎಐ ಬಳಸಿ ಈ ಆಯಪ್ ಬಗ್ಗೆ ಅವರು ಹೇಳಿದ್ದಾರೆ.

ಸತ್ಯ ನಾದೆಲ್ಲಾ ಅವರು ಭಾರತ ಮೂಲದವರಾದ್ದರಿಂದಲೋ ಏನೋ ಅವರಿಗೆ ಕ್ರಿಕೆಟ್ ಎಂದರೆ ಸಿಕ್ಕಾಪಟ್ಟೆ ಪ್ರೀತಿ. ಭಾರತದ ಅನೇಕ ಕ್ರಿಕೆಟಿಗರು ಅವರಿಗೆ ಫೇವರಿಟ್. ಕ್ರಿಕೆಟ್ ಅಭಿಮಾನಿ, ಸಕ್ರಿಯವಾಗಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರಿಟನ್ 100 ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವ ಲಂಡನ್ ಸ್ಪಿರಿಟ್ ಎಂಬ ತಂಡದ ಶೇ. 49ರಷ್ಟು ಪಾಲುದಾರರು ಅವರು. ಅಮೆರಿಕದ ಎಂಎಲ್ಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವ ಸಿಯಾಟಲ್ ಆರ್ಕಾಸ್ ತಂಡದ ಪಾಲುದಾರರೂ ಹೌದು.

ಇದನ್ನೂ ಓದಿ: ಭಾರತದಲ್ಲಿ ಮೈಕ್ರೋಸಾಫ್ಟ್ ಎಐ ಸೌಕರ್ಯ ನಿರ್ಮಾಣಕ್ಕೆ 1.50 ಲಕ್ಷ ಕೋಟಿ ರೂ ಹೂಡಿಕೆ

ಕ್ರಿಕೆಟ್ ಅನಾಲಿಸಿಸ್ ಆಯಪ್ ನಿಂದ ಹೊಸ ಕ್ರಾಂತಿ..?

ಮೈಕ್ರೋಸಾಫ್ಟ್ ಸಿಐಒ ಅವರಿಗೆ ಕ್ರಿಕೆಟ್ ಮತ್ತು ಕೋಡಿಂಗ್, ಈ ಎರಡು ಸಿ ಎಂದರೆ ಅಚ್ಚುಮೆಚ್ಚು. ಹೀಗಾಗಿ, ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ವಿಶ್ಲೇಷಣೆ ಮಾಡಬಲ್ಲ ಆಯಪ್ ನಿರ್ಮಿಸಲು ಕೋಡಿಂಗ್ ಬರೆಯುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯ ರೀಸನಿಂಗ್ ಸಾಮರ್ಥ್ಯವನ್ನು ಬಳಸಿ ಕ್ರಿಕೆಟ್ ಆಟದ ವಿಶ್ಲೇಷಣೆಯನ್ನು ಹೇಗೆ ಮಾಡಬಹುದು ಎಂದು ಅನ್ವೇಷಿಸುವ ಅಥವಾ ಪ್ರಯೋಗ ಮಾಡುವ ಕೆಲಸ ಮಾಡುತ್ತಿದ್ದಾರೆ.

ತಮ್ಮ ತಂಡದ ಪ್ಲಾನಿಂಗ್ ಮತ್ತು ಎಕ್ಸಿಕ್ಯೂಶನ್‌ಗೆ ಈ ಅಪ್ಲಿಕೇಶನ್ ಎಷ್ಟರಮಟ್ಟಿಗೆ ಸಹಾಯವಾಗಬಲ್ಲದು ಎಂಬುದು ಅವರಿಗಿರುವ ಆಸಕ್ತಿ ಮತ್ತು ಕುತೂಹಲ. ಬಹುಶಃ, ಇದು ಮುಂದಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರಕ್ಕೆ ಎಐ ನೆರವು ಮತ್ತಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಬೆಂಗಳೂರು, ಚೆನ್ನೈನಲ್ಲಿ ಮೆಗಾಫ್ಯಾಕ್ಟರಿ ನಿರ್ಮಾಣಕ್ಕೆ ಆಯಪಲ್ ಯೋಜನೆ: ವಿ ಅನಂತನಾಗೇಶ್ವರನ್

ಮೈಕ್ರೋಸಾಫ್ಟ್ ಸಿಐಒ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಭಾರತದಲ್ಲಿ ಮುಂದಿನ ಐದು ವರ್ಷದ 17.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲ ಅವರು ಪ್ರಕಟಿಸಿದ್ದರು. ಐ ಮತ್ತು ಕ್ಲೌಂಡ್ ಇನ್ ಫ್ರಾಸ್ಟ್ರಕ್ಚರ್ ಸ್ಥಾಪಿಸುವ ವಿವಿಧ ಯೋಜನೆಗಳನ್ನು ಮೈಕ್ರೋಸಾಫ್ಟ್ ಕೈಗೊಳ್ಳಲಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 1:30 pm, ಶುಕ್ರ, 12 ಡಿಸೆಂಬರ್ 25



Source link

Leave a Reply

Your email address will not be published. Required fields are marked *