ಹೋರಿಯ ಹೆಸರಲ್ಲಿ ದೇವಸ್ಥಾನ ಕಟ್ಟಿದ್ದು ನೋಡಿದ್ದೀರಾ?

ಹೋರಿಯ ಹೆಸರಲ್ಲಿ ದೇವಸ್ಥಾನ ಕಟ್ಟಿದ್ದು ನೋಡಿದ್ದೀರಾ?


ಹೋರಿಗಾಗಿ ದೇವಸ್ಥಾನ ನಿರ್ಮಿಸಲು ಮುಂದಾದ ಮಾಲೀಕ

ಹಾವೇರಿ, ಡಿಸೆಂಬರ್ 12: ದೇಶದ ಹಲವಾರು ಸೆಲೆಬ್ರಿಟಿಗಳ ದೇವಸ್ಥಾನವನ್ನು ನೀವು ನೋಡಬಹುದು. ಅದೇ ರೀತಿ ಹಾವೇರಿ (ಹಾವೇರಿ) ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಹೋರಿಗೂ ಒಂದು ದೇವಸ್ಥಾನ ಕಟ್ಟಲು ಅದರ ಮಾಲೀಕ ಮುಂದಾಗಿದ್ದಾನೆ. ಕದರಮಂಡಲಗಿ ಗ್ರಾಮದಲ್ಲಿ KDM KING-108 ಎಂಬ ಹೋರಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿದ್ದು, ಮನೆಯ ಮುಂದೆಯೇ ಅದರ ಅಂತ್ಯಸಂಸ್ಕಾರಕ್ಕೆ

ಹೋರಿಯ ಹೆಸರಲ್ಲಿ ದೇವಸ್ಥಾನ

ದೇಶದ ಹಲವು ಸೆಲೆಬ್ರಿಟಿಗಳಿಗೆ ಕೋಟ್ಯಾಂತರ ಅಭಿಮಾನಿಗಳ ಬಳಗವಿದ್ದು, ತಮ್ಮ ನೆಚ್ಚಿನ ಸಿನಿಮಾ ನಟರನ್ನೋ ಅಥವಾ ಕ್ರಿಕೆಟಿಗರನ್ನೋ ಪೂಜಿಸುವ ಮಟ್ಟಿಗೆ ಪ್ರೀತಿ, ಅಭಿಮಾನ. ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿದಂತೆ ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಇವರೆಲ್ಲರ ಅಪ್ಪಟ ಅಭಿಮಾನಿಗಳು ಈ ವ್ಯಕ್ತಿಗಳ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಆದರೆ ಹಾವೇರಿಯಲ್ಲೊಬ್ಬ ಕಾಂತೇಶ ನಾಯಕ್ ಎಂಬಾತ ತನ್ನ ಮೃತ ಕೊಬ್ಬರಿ ಹೋರಿ KDM KING-108 ಹೆಸರಿನಲ್ಲಿ ದೇವಸ್ಥಾನ ಕಟ್ಟಲು ಮುಂದಾಗಿದ್ದಾನೆ.

12 ವರ್ಷದಿಂದ ಸೋಲಿಲ್ಲದ ಸರದಾರನಾಗಿದ್ದ ಹೋರಿ

ಕರ್ನಾಟಕದಲ್ಲಿ ಹೋರಿ ಹಬ್ಬಗಳಲ್ಲಿ ಭಾಗವಹಿಸುವ ಹೋರಿಗಳಿಗೆ ಕೊಬ್ಬರಿ ಹೋರಿ ಎನ್ನಬೇಡಿ. ಹಾವೇರಿಯ ಕೊಬ್ಬರಿ ಹೋರಿಯೊಂದು ಪ್ರಸಿದ್ಧವಾಗಿದೆ. ಹೋರಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನೂರಾರು ಅಭಿಮಾನಿಗಳು ಕಾಂತೇಶ್ ಮನೆ ಮುಂದೆ ಜಮಾಯಿಸಿದ್ದು, ಗ್ರಾಮದಲ್ಲಿ ಮೆರವಣಿಗೆ ನಡೆಸಿ ಮನೆಯ ಮುಂದೆ ಹಿಂದೂಸಂಪ್ರದಾಯದಂತೆ ಅಂತ್ಯಕ್ರಿಯೆಗೆ ಎಡೆಮಾಡಲಾಗಿದೆ. 12 ವರ್ಷಗಳ ಇತಿಹಾಸದಲ್ಲಿ ಸೋಲೇ ಇಲ್ಲದ ಸರದಾರವಾಗಿತ್ತು ಹೋರಿ, 11 ಬೈಕಗಳು, ಬಂಗಾರ, ಎತ್ತಿನಬಂಡಿ ,ಟಿವಿ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದಿತ್ತು. ಮಸಣದ ದೊರೆ, ​​ಕಿಲ್ಲಿಂಗ್ ಸ್ಟಾರ್, ಮಲೆನಾಡ ಜನಗಳ ಜೀವಾ, ಕಾಂತೇಶನ ವರಪ್ರಸಾದ ಎಂಬ ಬಿರುದು ಪಡೆದಿದ್ದ ಕೆಡಿಎಂ ಕಿಂಗ್ ಕೊಬ್ಬರಿ ಹೋರಿಯ ದೇವಸ್ಥಾನ ನಿರ್ಮಾಣಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಣ್ಣಪ್ಪ ಬಾರ್ಕಿ, ಟಿವಿ9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *