ಫೋನ್​ನಲ್ಲಿ ಮಾತನಾಡುತ್ತಿರುವಾಗ ಗದರಿದ್ದಕ್ಕೆ ಗಂಡನನ್ನೇ ಹತ್ಯೆಗೈದ ಪತ್ನಿ

ಫೋನ್​ನಲ್ಲಿ ಮಾತನಾಡುತ್ತಿರುವಾಗ ಗದರಿದ್ದಕ್ಕೆ ಗಂಡನನ್ನೇ ಹತ್ಯೆಗೈದ ಪತ್ನಿ


ಚಿಂತಪಲ್ಲಿ, ಡಿಸೆಂಬರ್ 12: ಫೋನ್‌ನಲ್ಲಿ ಯಾಕಿಷ್ಟು ಮಾತಾಡ್ತೀಯ ಎಂದು ಗದರಿದ್ದಕ್ಕೆ ಪತ್ನಿಯೊಬ್ಬಳು ಪತಿಯನ್ನೇ ಹತ್ಯೆ(ಕೊಲೆ) ಮಾಡಿರುವ ಆಂಧ್ರಪ್ರದೇಶದ ಘಟನೆ ಅಲ್ಲೂರಿ ಜಿಲ್ಲೆಯಲ್ಲಿ ನಡೆದಿದೆ. ಎಲ್ಲದಕ್ಕೂ ಪತಿ ಮೂಗು ತೂರಿಸಿಕೊಂಡು ಬರುತ್ತಾರೆ ಎಂದು ಕೋಪಗೊಂಡು ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾಳೆ. ಕುಟುಂಬದ ಸದಸ್ಯರು ಆತನನ್ನು ಹುತಾ ಹುತಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅಲ್ಲೂರಿ ಜಿಲ್ಲೆಯ ಚಿಂತಪಲ್ಲಿ ಮಂಡಲದ ಮೇದೂರಿನ ನಿವಾಸಿ ರಾಜಾ ರಾವ್, ಪತ್ನಿ ದೇವಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಯಾವಾಗ ನೋಡಿದರೂ ಪತ್ನಿ ಮೊಬೈಲ್ ಕಾಲ್ ನಲ್ಲಿ ಇರುವುದನ್ನು ಕಂಡು ಕೋಪಗೊಂಡಿದ್ದ ಪತಿ ರಾಜಾ ರಾವ್ ಪತ್ನಿಗೆ ಗದರಿದ್ದರು.

ರಾಜಾ ರಾವ್ ಪತ್ನಿಗೆ ಮಾತನಾಡುವುದನ್ನು ಕಡಿಮೆ ಮಾಡಲು ಸಲಹೆ ಮಾಡಲು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು, ಜಗಳ ಅತಿರೇಕಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.

ಮತ್ತಷ್ಟು ಓದಿ: ಗರ್ಭಿಣಿ ಪತ್ನಿಯಿಂದ ದೂರವಾಗಿದ್ದ ಆಕೆಯ ಲಿವ್-ಇನ್ ಸಂಗಾತಿಯ ಹತ್ಯೆ

ದೇವಿ ಹತ್ತಿರದಲ್ಲಿದ್ದ ಕೊಡಲಿಯನ್ನು ಕೈಗೆತ್ತಿಕೊಂಡು ಕೊಡಲಿಗೆ ಜೋಡಿಸಲಾದ ಕೋಲಿನಿಂದ ತನ್ನ ಗಂಡನ ಮೇಲೆ ಹಲ್ಲೆ. ದಾಳಿಯಲ್ಲಿ ರಾಜಾ ರಾವ್ ಗಂಭೀರರಾಗಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ.

ಅಲ್ಲಿಂದ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಶಾಖಪಟ್ಟಣಂ ಕಿಂಗ್ ಜಾರ್ಜ್ ಆಸ್ಪತ್ರೆಗೆ ಸೇರಿಸಲಾಯಿತು. ಕೆಜಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ರಾಜಾ ರಾವ್ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *