
ಆನೇಕಲ್, ಡಿಸೆಂಬರ್ 12: ರಸ್ತೆಯ ಗುಂಡಿಗೆ ಬಿದ್ದ ಬೈಕ್ ಸವಾರರು ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾದ ದೃಶ್ಯ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳೇ ಚಂದಾಪುರ ನೆರಳೂರು ಸಮೀಪ ಬೈಕ್ ಸವಾರರು ರಸ್ತೆ ಗುಂಡಿಯಿಂದಾಗಿ ಬೈಕ್ ನಿಂದ ಆಯತಪ್ಪಿ ಬಿದ್ದಿದ್ದಾರೆ. ಇನ್ನೇನು ಪಕ್ಕದಲ್ಲಿ ಚಲಿಸುತ್ತಿದ್ದ ಬೃಹತ್ ಗಾತ್ರದ ಕಂಟೇನರ್ ಲಾರಿ ಅವರ ತಲೆಮೇಲೆ ಹರಿಯುವುದರಲ್ಲಿತ್ತು. ಲಾರಿ ಚಾಲಕನ ಸಮಯ ಪಟ್ಟಿಯಿಂದ ಭಾರಿ ಅನಾಹುತ ಕೂಡಲೆ ಅಂತರದಲ್ಲಿ ತಪ್ಪಿದೆ.
ಬೆಂಗಳೂರು-ಹೊಸೂರು ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ನಿತ್ಯ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ರಸ್ತೆ ರಸ್ತೆಯೂ ಗುಂಡಿಗಳಿಂದ ಕೂಡಿದ್ದು ನಿತ್ಯ ಅಪಘಾತ ಸಂಭವಿಸುತ್ತಿದೆ. ಎರಡು ತಿಂಗಳ ಹಿಂದೆ ಸಂಸದ ಡಾ.ಸಿ.ಎನ್ ಮಂಜುನಾಥ್ ನೇತೃತ್ವದ ತಂಡ ಇಲ್ಲಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿತ್ತು. ಆದರೂ ಕಾಮಗಾರಿ ಚುರುಕುಗೊಂಡಿಲ್ಲ. ಯಮಸ್ವರೂಪಿ ರಸ್ತೆ ನಿತ್ಯ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ