16

Image Credit : X/ProteasMenCSA
ಎರಡನೇ ಟಿ20 ಪಂದ್ಯ ಸೋತ ಭಾರತ
ಭಾರತ ತಂಡವು ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಶರಣಾಗಿದೆ. ಈ ಮೂಲಕ ಮೊದಲ ಟಿ20 ಪಂದ್ಯದ ಸೋಲಿಗೆ ಹರಿಣಗಳ ಪಡೆ ತಿರುಗೇಟು ನೀಡವಲ್ಲಿ ಯಶಸ್ವಿಯಾಗಿದೆ.
26
Image Credit : X/ProteasMenCSA
ಪಾಂಡ್ಯ ಅಪರೂಪದ ದಾಖಲೆ
ಇನ್ನು ಇದೇ ಪಂದ್ಯದಲ್ಲಿ ಭಾರತ ತಂಡವು ಸೋಲಿನ ಹೊರತಾಗಿಯೂ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
36
Image Credit : X/@BCCI
100 ಸಿಕ್ಸರ್ & 100 ವಿಕೆಟ್ ದಾಖಲೆ
ಎರಡನೇ ಟಿ20 ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಹಾರ್ದಿಕ್ ಪಾಂಡ್ಯ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಸಿಕ್ಸರ್ ಹಾಗೂ 100 ವಿಕೆಟ್ ಕಬಳಿಸಿದ ಭಾರತದ ಮೊದಲ ಹಾಗೂ ಒಟ್ಟಾರೆ ನಾಲ್ಕನೇ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
46
Image Credit : Getty
ಹೊಸ ದಾಖಲೆ ಬರೆದ ಪಾಂಡ್ಯ
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಪಾಂಡ್ಯ 100+ ವಿಕೆಟ್ ಕ್ಲಬ್ ಸೇರಿದ್ದರು. ಇದೀಗ ಎರಡನೇ ಟಿ20 ಪಂದ್ಯಕ್ಕೂ ಮುನ್ನ 99 ಸಿಕ್ಸರ್ ಸಿಡಿಸಿದ್ದ ಪಾಂಡ್ಯ, ಎರಡನೇ ಟಿ20 ಪಂದ್ಯದಲ್ಲಿ ಸಿಕ್ಸರ್ ಚಚ್ಚಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.
56
Image Credit : AFP
ಅಪರೂಪದ ದಾಖಲೆ ಬರೆದ ಮೂವರು!
ಈ ಮೊದಲು ಕೇವಲ ಮೂವರು ಮಾತ್ರ 100+ ಸಿಕ್ಸರ್, 100+ ವಿಕೆಟ್ ಸಾಧನೆ ಮಾಡಿದ್ದಾರೆ. ಅವರೆಂದರೆ ಜಿಂಬಾಬ್ವೆಯ ಸಿಕಂದರ್ ರಝಾ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಹಾಗೂ ಮಲೇಷ್ಯಾದ ವಿರನ್ದೀಪ್ ಸಿಂಗ್ ಈ ಸಾಧನೆ ಮಾಡಿದ ಇತರ ಮೂವರು ಆಟಗಾರರಾಗಿದ್ದಾರೆ.
66
Image Credit : Getty
ಹಾರ್ದಿಕ್ ಪಾಂಡ್ಯ ಟಿ20 ನಂಬರ್ಸ್
ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ಪರ 122 ಟಿ20 ಪಂದ್ಯಗಳಲ್ಲಿ 100 ಸಿಕ್ಸರ್ ಬಾರಿಸಿದ್ದು, 100 ವಿಕೆಟ್ ಪಡೆದಿದ್ದಾರೆ. 1939 ರನ್ ಕಲೆಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.