Headlines

ನಶೆರಾಣಿ ಆಗಲು ಹೋಗಿ ಖಾಕಿ ಕೈಲಿ ತಗಲಾಕಿಕೊಂಡ ಮಹಿಳೆ: ಗ್ಯಾಂಗ್​​ ಅಂದರ್​​

ನಶೆರಾಣಿ ಆಗಲು ಹೋಗಿ ಖಾಕಿ ಕೈಲಿ ತಗಲಾಕಿಕೊಂಡ ಮಹಿಳೆ: ಗ್ಯಾಂಗ್​​ ಅಂದರ್​​


ತುಮಕೂರು, ಡಿಸೆಂಬರ್ 12: ಹೊಸವರ್ಷ 2026ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದಕ್ಕೆಂದೇ ಬೆಂಗಳೂರಿನಲ್ಲಿ ತಯಾರಿ ನಡೆದಿದ್ದು, ಸಿಟಿ ಪಾರ್ಟಿ ಹಬ್ಬವಾಗಿ ಬದಲಾಗುತ್ತಿದೆ. ಈ ನಡುವೆ ಮಾದಕ ಜಗತ್ತಿನ ಚಟುವಟಿಕೆಗಳೂ ಗರಿಗೆದರಿದ್ದು, ಬೆಂಗಳೂರು ಬಿಟ್ಟು ತುಮಕೂರಿನತ್ತ ಒಂದಷ್ಟು ಡ್ರಗ್ ಡೀಲರ್ ಎಂಟ್ರಿ ಕೊಟ್ಟಿದ್ದಾರೆ. ಮಾಹಿತಿ ಆಧಾರದಲ್ಲಿ ಅಲರ್ಟ್ ಆಗಿರೋ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಹತ್ತಕ್ಕೂ ಅಧಿಕ ಪೆಡ್ಲರ್‌ಗಳನ್ನು ಲಾಕ್ ಮಾಡಿದ್ದಾರೆ.

ತುಮಕೂರು ನಗರ ಆಯಿಷಾ ಎಂಬ ಮಹಿಳೆ ಸೇರಿ ಆಕೆಯ ಹೆಡೆಮುರಿ ಕಟ್ಟಿದ್ದು, ಒಂದು ಲಕ್ಷ ಮೌಲ್ಯದ ಎಂಡಿಎಂ ಜಪ್ತಿ ಮಾಡಿದೆ. ಬೆಂಗಳೂರು ನಿವಾಸಿಯಾಗಿರೋ ಈ ಆಯಿಷಾ ಬಿಕಾಂ ಮುಗಿಸಿದ್ದು, ಹತ್ತು ವರ್ಷಗಳ ಹಿಂದೆ ಈಕೆಗೆ ವಿವಾಹವೂ ಆಗಿದೆ. ಪತಿ ದುಬೈನಲ್ಲಿ ಕೆಲಸ ಮಾಡುತಿದ್ದು, ಒಂಟಿಯಾಗಿದ್ದ ಈಕೆ ಡ್ರಗ್ ಜಾಲಕ್ಕೆ ಬಿಡಿದ್ದಾಳೆ. ಆರಂಭದಲ್ಲಿ ಡ್ರಗ್ ಬಳಸುತಿದ್ದ ಆಯಿಷಾ ಈಗ ಡ್ರಗ್ ಡೀಲರ್ ಆಗಿದ್ದು, ತನ್ನದೇ ಗ್ಯಾಂಗ್ ಮೂಲಕ ಡ್ರಗ್ ಮಾರಲು ಬಂದು ತುಮಕೂರಲ್ಲಿ ಲಾಕ್ ಆಗಿದ್ದಾಳೆ.

ಇದನ್ನೂ ಓದಿ: ದೇಶದ ಹಲವು ನಗರಗಳಲ್ಲಿ ಡ್ರಗ್ಸ್ ದಾಸರಾಗುತ್ತಿದ್ದಾರೆ ಮಕ್ಕಳು; ಸಮೀಕ್ಷೆ ಪಟ್ಟಿದೆ ಕರ್ನಾಟಕದ ಈ ನಗರದ ಹೆಸರು

ಮತ್ತೊಂದೆಡೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸರು ಮೂರು ಪ್ರಕರಣಗಳಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಗ್ಯಾಂಗ್ ಎಂಡಿಎಂ ಮಾರಲು ಲಾಕ್ ಆದರೆ, ಮತ್ತೊಂದು ಗ್ಯಾಂಗ್ ಮಹಾರಾಷ್ಟ್ರ, ಒರಿಸ್ಸಾ ಹಾಗೂ ಆಂಧ್ರದಿಂದ ಗಾಂಜಾ ತಂದು ಮಾರಾಟಕ್ಕೆ ಮುಂದಾಗಿತ್ತು. ಈ ಬಗ್ಗೆ ಪಕ್ಕಾ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಒಟ್ಟು ಎಂಟು ಲಕ್ಷ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಮೈಸೂರಲ್ಲಿ 17 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಮೈಸೂರು ನಗರ ಸಿಸಿಬಿ ಪೊಲೀಸ್ ಕಾರ್ಯಾಚರಣೆ ನಡೆಸಿ ನರಸಿಂಹರಾಜ ಠಾಣೆ ವ್ಯಾಪ್ತಿಯ ನಾಯ್ಡು ಸುಮಾರು 17 ಲಕ್ಷ ರೂ. ಮೌಲ್ಯದ 176 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದೆ. ಹೈಡ್ರೋ ಗಾಂಜಾ ಮಾರಾಟ ಮತ್ತು ಖರೀದಿಗಾಗಿ ಅಫ್ತಾಬ್ ಅಲಿ ಬೇಗ್ ಮತ್ತು ಪ್ರತಾಪ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಎನ್. ಆರ್. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *