16

Image Credit : Instagram
ಸತ್ಯ ರಿವೀಲ್
ನಾ ನಿನ್ನ ಬಿಡಲಾರೆ (Na Ninna Bidalaare) ಸೀರಿಯಲ್ನಲ್ಲಿ ದುರ್ಗಾ ಮತ್ತು ಅಂಬಿಕಾ ಸತ್ಯ ಎಲ್ಲಾ ಮಾಳವಿಕಾಗೆ ತಿಳಿದಿದೆ. ದುರ್ಗಾಳನ್ನು ಮುಗಿಸಲು ಸ್ಕೆಚ್ ಹಾಕುತ್ತಿದ್ದಾಳೆ. ಇದಾಗಲೇ ಹಲವು ಬಾರಿ ಪ್ರಯತ್ನಿಸಿದರೂ, ದೇವಿ ಅದನ್ನು ತಡೆದಿದ್ದಾಳೆ.
26
Image Credit : Instagram
ಸರ್ವ ಶಕ್ತಿ
ಅದೇ ಇನ್ನೊಂದೆಡೆ ಹಿತಾ ಕೂಡ ಅಜ್ಜ ಕೊಟ್ಟಿರೋ ಸರವನ್ನು ಕಳೆದುಕೊಂಡಿರೋ ಹಿನ್ನೆಲೆಯಲ್ಲಿ, ಅವಳಿಗೂ ಅಪಾಯ ಕಾದಿದೆ. ಅವಳನ್ನು ಸಾಯಿಸಿ ಸರ್ವ ಶಕ್ತಿಯನ್ನು ಪಡೆಯಲು ಮಾಳವಿಕಾ ಕಾಯುತ್ತಿದ್ದಾಳೆ.
36
Image Credit : Instagram
ಕಮೆಂಟಿಗರು ಏನಂದ್ರು?
ಇಷ್ಟೆಲ್ಲಾ ಇದ್ದರೂ ಇದೀಗ ನಾ ನಿನ್ನ ಬಿಡಲಾರೆ ದುರ್ಗಾ, ಸಾನ್ವಿಯ ಜೊತೆಗೂಡಿ ಡಾನ್ಸ್ ಮಾಡ್ತಿದ್ದಾಳೆ. ಮಾಳವಿಕಾ ಬರ್ತಾಳೆ ಹುಷಾರ್ ಕಣಮ್ಮಾ ಎಂದು ಅಭಿಮಾನಿಗಳು ನಟಿಯ ಕಾಲೆಳೆಯುತ್ತಿದ್ದಾರೆ.
46
Image Credit : Instagram
ದುರ್ಗಾ ಅಂದ್ರೆ ರಿಷಿಕಾ
ಅಂದಹಾಗೆ ದುರ್ಗಾ ಪಾತ್ರಧಾರಿ ಹೆಸರು ರಿಷಿಕಾ. ಸಾನ್ವಿ ಪಾತ್ರಧಾರಿಯ ಹೆಸರು ಲೇಖನಾ ಎಚ್ಎಂ. ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.
56
Image Credit : Instagram
ಸೀರಿಯಲ್ಗಳಲ್ಲಿ ನಟನೆ
ಮೊದಲ ಸೀರಿಯಲ್ನಲ್ಲಿ ಸೈಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾದಾನ’ ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.
66
Image Credit : Instagram
ಫ್ಯಾನ್ಸ್ ಫಿದಾ
ಇವರಿಬ್ಬರ ಡಾನ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ದುರ್ಗಾ ಪಾತ್ರಧಾರಿ ರಿಷಿಕಾ ಅವರು, ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಜೊತೆ ಹಲವಾರು ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.