Headlines

40 ನಿಮಿಷ ಕಾದರೂ ಬಾರದ ಪುಟಿನ್; ತಾಳ್ಮೆಗೆಟ್ಟು ರಷ್ಯಾ ಅಧ್ಯಕ್ಷರ ರೂಂಗೇ ನುಗ್ಗಿದ ಪಾಕ್ ಪ್ರಧಾನಿ

40 ನಿಮಿಷ ಕಾದರೂ ಬಾರದ ಪುಟಿನ್; ತಾಳ್ಮೆಗೆಟ್ಟು ರಷ್ಯಾ ಅಧ್ಯಕ್ಷರ ರೂಂಗೇ ನುಗ್ಗಿದ ಪಾಕ್ ಪ್ರಧಾನಿ


ನವದೆಹಲಿ, ಡಿಸೆಂಬರ್ 12: ತುರ್ಕಮೆನಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (ರಷ್ಯಾ ಅಧ್ಯಕ್ಷ ಪುಟಿನ್) ಅವರೊಂದಿಗಿನ ಸಭೆಗಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ 40 ನಿಮಿಷ ಕಾಯುತ್ತಾ ಕುಳಿತಿದ್ದರು. ಆದರೂ ಪುಟ್ಟಿ ತಮ್ಮ ಮೀಟಿಂಗ್ ಕೋಣೆಯಿಂದ ಹೊರಗೆ ಬರಲಿಲ್ಲ, ಪಾಕ್ ಪ್ರಧಾನಿಗೂ ಬರಲು ಸೂಚಿಸಲಿಲ್ಲ. ಚಡಪಡಿಕೆಯಿಂದ ಕುಳಿತಿದ್ದ ಪಾಕಿಸ್ತಾನದ ಪ್ರಧಾನಿ ಕೊನೆಗೆ ತಾಳ್ಮೆಗೆಟ್ಟು ತಾವೇ ಖುದ್ದಾಗಿ ಎದ್ದು ರಷ್ಯಾ ಅಧ್ಯಕ್ಷ ಪುಟಿನ್ ಅವರಿದ್ದ ರೂಂನೊಳಗೆ ಹೋಗಿದ್ದಾರೆ.

ಹಿಂದಿನ ಸೋವಿಯತ್ ರಾಷ್ಟ್ರದ ತಟಸ್ಥತೆಯ ಘೋಷಣೆಯ 30ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಇದರಲ್ಲಿ ಭಾಗವಹಿಸಲು ರಷ್ಯಾ, ಟರ್ಕಿ, ಇರಾನ್ ಮತ್ತು ಪಾಕಿಸ್ತಾನದ ನಾಯಕರನ್ನು ಆಹ್ವಾನಿಸಲಾಯಿತು. ಈ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಜೊತೆ ಮಾತನಾಡಲು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕಾಯಂ. ಪುಟ್ಟಿ ಅವರೊಂದಿಗಿನ ನಿಗದಿತ ಮಾತುಕತೆಗೆ ಮುಂಚಿತವಾಗಿ ಪಕ್ಕದ ಕೋಣೆಯಲ್ಲಿ ಶೆಹಬಾಜ್ ಷರೀಫ್ ಅಸಹನೆಯಿಂದ ಕಾಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಪುಟ್ಟಿಗೆ ಚಹಾ, ಬೆಳ್ಳಿ ಕುಸುರಿ, ಕಾಶ್ಮೀರಿ ಕೇಸರಿ, ಭಗವದ್ಗೀತೆ ಉಡುಗೊರೆ

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ಸುಮಾರು 40 ನಿಮಿಷಗಳ ಕಾಲ ಕಾಯುತ್ತಿದ್ದ ಶೆಹಬಾಜ್ ಷರೀಫ್ ತಾಳ್ಮೆ ಕಳೆದುಕೊಂಡು ಪುಟಿನ್ ಅವರ ಸಭೆ ನಡೆಯುತ್ತಿದ್ದ ರೂನ್ನೊಳಗೆ ಹೋಗಲು ನಿರ್ಧರಿಸಿದರು. ಒಳಗೆ ಹೋದ ಅವರು 10 ನಿಮಿಷಗಳ ನಂತರ ಆ ರೂಂನಿಂದ ವಾಪಾಸ್ ಬಂದಿದ್ದಾರೆ.

ಈ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಪಾಕಿಸ್ತಾನಕ್ಕಾದ ರಾಜತಾಂತ್ರಿಕ ಮುಜುಗರ ಎಂದು ಲೇವಡಿ ಮಾಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *